• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕೆ.ಜೆ.ಜಾರ್ಜ್ ರಕ್ಷಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೊಂದಿಷ್ಟು ಪ್ರಶ್ನೆಗಳು…

-ವಿಶಾಲ್ ಪುಡಿಯಂಡ, ಮಡಿಕೇರಿ Posted On October 28, 2017


  • Share On Facebook
  • Tweet It

ಡಿ.ವೈ.ಎಸ್.ಪಿ. ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ. ಜಾರ್ಜ್ ಅವರಿಗೆ ರಕ್ಷಣೆ, ಬೆನ್ನುಗೋಡೆಯಾಗಿ ನಿಂತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ. ಖಂಡಿತವಾಗಿಯೂ ಮುಖ್ಯಮಂತ್ರಿಯಾದವರು ತಮ್ಮ ಸಂಪುಟ ಸಚಿವರ ರಕ್ಷಣೆಗೆ ಬದ್ಧವಾಗಿರಬೇಕು. ಆದರೆ ಯಾವ ವಿಷಯದಲ್ಲಿ ಎಂಬುದು ಅಷ್ಟೇ ಮಹತ್ತರ ಪಾತ್ರ ವಹಿಸುತ್ತದೆ. ಈಗ ಗಣಪತಿ ಸಾವು ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸುತ್ತಿದ್ದು, ಜಾರ್ಜ್ ಅವರನ್ನೇ ಆರೋಪಿ ನಂ.1 ಎಂದು ದೂರು ದಾಖಲಿಸಿದೆ. ಇಷ್ಟಾದರೂ ಸಿದ್ದರಾಮಯ್ಯ ಮಾತ್ರ ಜಾರ್ಜ್ ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ ಎಂದಿದ್ದಾರೆ. ಹೀಗೆ ಆರೋಪ ಹೊತ್ತ ಸಚಿವರನ್ನು ಬೆಂಬಲಿಸುತ್ತಿರುವ ಮುಖ್ಯಮಂತ್ರಿ ಅವರಿಗೆ ಒಂದಷ್ಟು ಪ್ರಶ್ನೆ ಕೇಳಲೇಬೇಕಾಗಿದೆ. ಅದೂ ಸಾಮಾನ್ಯ ನಾಗರಿಕನಾಗಿ ಕೇಳಬೇಕಿದೆ.

  • ಆರಂಭದಿಂದಲೂ ನಮ್ಮದು ಭ್ರಷ್ಟಾಚಾರ ರಹಿತ ಸರ್ಕಾರ ಎಂದು ಮುಖ್ಯಮಂತ್ರಿ ಘಂಟಾಘೋಷವಾಗಿ ಹೇಳುತ್ತಲೇ ಬಂದಿದ್ದಾರೆ. ಹೀಗಿದ್ದರೂ, ಕಿರುಕುಳ ಆರೋಪ ಹೊತ್ತಿರುವ ಜಾರ್ಜ್ ಅವರನ್ನು ರಕ್ಷಣೆ ಮಾಡುವ ದರ್ದು ನಿಮಗೇನಿದೆ?
  • ನನ್ನ ಸಾವಿಗೆ ಪೊಲೀಸ್ ಅಧಿಕಾರಿಗಳು ಸೇರಿ, ಆಗ ಗೃಹಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರ ಹೆಸರನ್ನು ಪ್ರಸ್ತಾಪಿಯೇ ಡಿವೈಎಸ್ಪಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ವಿಡಿಯೋದಲ್ಲೂ ಜಾರ್ಜ್ ಹೆಸರು ಉಲ್ಲೇಖವಾಗಿದೆ. ಆತ್ಮಹತ್ಯೆ ಮಾಡಿಕೊಂಡವರೇ ಜಾರ್ಜ್ ಕಿರುಕುಳ ನೀಡಿದ್ದಾರೆ ಎಂದಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂಗೇಕೆ ಹಿಂಜರಿಕೆ?
  • ಅದು ಡಿ.ಕೆ.ರವಿ ನಿವಾಸದ ಮೇಲೆ ಐಟಿಯೇ ದಾಳಿ ಮಾಡಲಿ ಅಥವಾ ಸಿಬಿಐ ಕೆ.ಜೆ.ಜಾರ್ಜ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಿ. ನೇರವಾಗಿ ಕೇಂದ್ರ ಸರ್ಕಾರವನ್ನೇ ಟೀಕಿಸುತ್ತೀರಿ. ಬೆಂಕಿ ಇಲ್ಲದೆ ಹೊಗೆ ಆಡುತ್ತದೆಯೇ? ಆರೋಪ ಸಾಬೀತಾಗುವ ತನಕವೂ ಕಾಯುವುದಿಲ್ಲ, ಮೊದಲೇ ಕೇಂದ್ರದತ್ತ ಬೆರಳು ಮಾಡುತ್ತೀರಿ. ಏಕೆ? ಜನರನ್ನು ಮರುಳು ಮಾಡಲೇ?
  • ಸಿಬಿಐಅನ್ನು ಕೇಂದ್ರ ಸರ್ಕಾರ ರಾಜಕೀಯ ಕಾರಣಕ್ಕೆ ಬಳಸುತ್ತಿದೆ ಎಂದು ಆರೋಪಿಸುವ ನೀವು, ಕೆ.ಜೆ.ಜಾರ್ಜ್ ಹಾಗೂ ನಿಮ್ಮದೇ ಸಂಪುಟದ ಮತ್ತೊಬ್ಬ ಸಚಿವನ ಕಾಮಕೇಳಿ ವಿಡಿಯೋ ಸಿಕ್ಕಾಗಲೂ ಕ್ಲೀನ್ ಚಿಟ್ ನೀಡಿತಲ್ಲ ಸಿಐಡಿ? ಇದನ್ನು ನೀವು ಹೇಗೆ ಬಳಸಿಕೊಳ್ಳುತ್ತಿದ್ದೀರಿ ಮಾರಾಯ್ರೇ?
  • ಅದೇನೋ ದೊಡ್ಡದಾಗಿ, ಸಮರ್ಪಕ ಕೆಲಸ ನಿರ್ವಹಿಸದ ಸಚಿವರು ಎಂಬ ಹಣೆಪಟ್ಟಿ ಕಟ್ಟಿ, ಅಂಬರೀಶ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಸಿಳಿದಿರಿ. ಆದರೆ, ಬೆಂಗಳೂರಿನ ಗುಂಡಿ ಸಹ ಮುಚ್ಚಿಸದೆ ಜನರ ಜೀವದ ಜತೆ ಆಟವಾಡುತ್ತಿರುವ ಕೆ.ಜೆ.ಜಾರ್ಜ್ ಅವರನ್ನೇಕೆ ನಗರಾಭಿವೃದ್ಧಿ ಸಚಿವ ಸ್ಥಾನದಿಂದ ಕೆಳಗಿಸಿಲ್ಲ? ಅದೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವೂ ಜಾರ್ಜ್ ವಿರುದ್ಧ ಇದ್ದರೂ ರಾಜೀನಾಮೆ ಕೇಳದೆ ಅವರ ಬೆಂಬಲಕ್ಕೇಕೆ ನಿಂತಿರಿ? ಚುನಾವಣೆಯಲ್ಲಿ ಅಲ್ಪಸಂಖ್ಯಾತರ ವೋಟು ತಪ್ಪುತ್ತವೆ ಅಂತಲಾ?
  • ಗಣಪತಿ ಸಾವಿನ ಬಳಿಕ ಕೆ.ಜೆ.ಜಾರ್ಜ್ ವಿರುದ್ಧ ಆರೋಪ ಕೇಳಿಬರುತ್ತಲೇ ಅವರ ರಾಜೀನಾಮೆ ಪಡೆದಿರಿ. ಆದರೆ ಈಗ ಸಿಬಿಐ ಎಫ್ಐಆರ್ ದಾಖಲಿಸಿದರೂ ಏಕೆ ರಾಜೀನಾಮೆ ಪಡೆಯುತ್ತಿಲ್ಲ. ಆಗ ಹೇಗಿದ್ದರೂ ಸಿಐಡಿ ಕ್ಲೀನ್ ಚಿಟ್ ನೀಡುತ್ತದೆ ಎಂಬ ಭರವಸೆ ಇತ್ತೇ? ಈಗ ಅವರು ನಿರಪರಾಧಿ ಆಗಿ ಹೊರಬರಲಾರರು ಎಂದು ರಾಜೀನಾಮೆ ಪಡೆಯುತ್ತಿಲ್ಲವೇ?
  • ಆಗೋ ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ ಎಂಬಂತೆ, ಕೇಂದ್ರದತ್ತಲೇ ಬೆರಳು ಮಾಡುವ ನೀವು ಕರ್ನಾಟದಲ್ಲಿ ಭ್ರಷ್ಟಾಚಾರದ ವಿರುದ್ಧ, ಹಿಂದೂಗಳ ಹತ್ಯೆ, ವಿಚಾರವಾದಿಗಳ ಹತ್ಯೆ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ? ಸ್ವಲ್ಪ ವಿವರಿಸುವಿರಾ?
  • ನೀವು ನಿಜವಾಗಲೂ ಕಳಂಕರಹಿತ ಆಡಳಿತ ನೀಡುವವರೇ ಆಗಿದ್ದರೆ ಕೆ.ಜೆ.ಜಾರ್ಜ್ ವಿರುದ್ಧ ಸಿಬಿಐ ತನಿಖೆ ನಡೆಸಲಿ ಬಿಡಿ. ನಿರಪರಾಧಿಯಾಗಿದ್ದರೆ ಯಾರು ವಿಚಾರಣೆ ಮಾಡಿದರೂ ಶಿಕ್ಷೆಯಾಗಲ್ಲ. ಅಷ್ಟಕ್ಕೂ ನೂರು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುದು ನಮ್ಮ ನ್ಯಾಯಾಂಗ ಧ್ಯೇಯ. ಹೀಗಿರುವಾಗ ವಿಚಾರಣೆ ನಡೆಯುತ್ತಲೇ, ನೀವೇಕೆ ಕುಂಬಳ ಕಳ್ಳನ ಹಾಗೆ ಬೆನ್ನು ಮುಟ್ಟಿಕೊಳ್ಳುತ್ತೀರಿ?

 

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
-ವಿಶಾಲ್ ಪುಡಿಯಂಡ, ಮಡಿಕೇರಿ May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
-ವಿಶಾಲ್ ಪುಡಿಯಂಡ, ಮಡಿಕೇರಿ May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search