ಅಲ್ಲಾಹು ಅಕ್ಬರ್ ಎಂದಿದ್ದ ಆತ, ಸಾಯುವ ಮುನ್ನ ಎಂಟು ಜನರನ್ನು ಸಾಯಿಸಿದ್ದ
ಅಲ್ಲಾಹು ಅಕ್ಬರ್…
ವಾಷಿಂಗ್ಟನ್: ದೇವರ ನಾಮಸ್ಮರಣೆ ಮಾಡುತ್ತಲೇ ಉಗ್ರಕೃತ್ಯಗಳಲ್ಲಿ ತೊಡಗುವುದು ಭಯೋತ್ಪಾದಕರ ಚಾಳಿಯಾಗಿದ್ದು, ಲಂಡನ್ ನ ವಿಶ್ವ ವ್ಯಾಪಾರಿ ಕೇಂದ್ರದ ಬಳಿ ಉಗ್ರನೊಬ್ಬ ಪಾದಚಾರಿಗಳ ಮೇಲೆ ಟ್ರಕ್ ಹಾಯಿಸಿ 8 ಜನರನ್ನು ಕೊಂದಿದ್ದಾನೆ. 11 ಜನರಿಗೆ ಗಾಯಗಳಾಗಿವೆ.
ಪಾದಚಾರಿಗಳು, ಸೈಕಲ್ ಸವಾರರ ಮೇಲೆ ಏಕಾಏಕಿ ದಾಳಿ ನಡೆಸಿದ್ದು, ಬಳಿಕ ಕೆಳಗಿಳಿದು ಮತ್ತಷ್ಟು ಜನರನ್ನು ಕೊಲ್ಲುವ ಬೆದರಿಕೆಯೊಡ್ಡಿದ್ದಾನೆ. ಆಗ ಎಚ್ಚೆತ್ತ ಪೊಲೀಸರು ಆತನನ್ನು ಗುಂಡಿಕ್ಕಿ ಕೊಂದಿದ್ದಾರೆ. ಸಾಯುವ ಮುನ್ನ ಆತನ ಬಾಯಲ್ಲಿ ಬಂದಿದ್ದೂ ಇದೇ ಅಲ್ಲಾಹು ಅಕ್ಬರ್. ಆದರೆ ಅಷ್ಟೊತ್ತಿಗಾಗಲೇ ಎಂಟು ಜನರು ಕೊನೆಯುಸಿರೆಳೆದಿದ್ದರು.
ಈಗ ಪೊಲೀಸರು ಕಾರ್ಯಾಚರಣೆ ಬಳಿಕ ಮೃತ ಉಗ್ರನ ಬಳಿ ಚೀಟಿಯೊಂದು ಸಿಕ್ಕಿದ್ದು ಐಸಿಸ್ ಉಗ್ರ ಎಂದು ತಿಳಿದುಬಂದಿದೆ. ಈತ ನ್ಯೂ ಜರ್ಸಿಯ ಪ್ಯಾಟರ್ಸನ್ ಎಂಬಲ್ಲಿ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಪೂರ್ವ ನಿಯೋಜಿತ ದಾಳಿಯೋ, ಏಕಾಏಕಿ ಮಾಡಿದ ದಾಳಿಯೋ ಎಂಬುದರ ಕುರಿತು ಮಾಹಿತಿ ಇಲ್ಲ, ತನಿಖೆಯಿಂದ ಎಲ್ಲ ತಿಳಿಯಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆದರೆ ಅಲ್ಲಾಹು ಅಕ್ಬರ್, ಅಂದರೇ ದೇವರೇ ಮೇಲು, ದೇವರೇ ಗ್ರೇಟ್, ಅಲ್ಲಾನೆ ಎಲ್ಲ ಎನ್ನುವವರು ಇನ್ನೊಬ್ಬರ ಜೀವನ ಕಸಿದುಕೊಳ್ಳುವ ಹಕ್ಕನ್ನು ಆ ದೇವರೇ ನೀಡಿದ್ದಾನೆಯೇ? ದೇವರು ಎಂದಾದರೂ ಹಾಗೆ ಮಾಡಲು ಸಾಧ್ಯವೇ?
Leave A Reply