ಟಿಪ್ಪು 20ನೇ ಶತಮಾನದ ಹಿಟ್ಲರ್: ಡಾ.ಎಂ.ಚಿದಾನಂದಮೂರ್ತಿ
Posted On November 8, 2017
ಬೆಂಗಳೂರು: ಟಿಪ್ಪು ಸುಲ್ತಾನನನ್ನು 20ನೇ ಶತಮಾನದ ಹಿಟ್ಲರ್ ಗೆ ಹೋಲಿಸಬಹುದು ಎಂದು ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಹೇಳಿದ್ದಾರೆ.
ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯಿಂದ ಟೌನ್ ಹಾಲ್ ಬಳಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಟಿಪ್ಪು ಸಲ್ತಾನ ಸೇನಾಧಿಕಾರಿಗಳಿಗೆ ಬರೆದ ಪತ್ರದಲ್ಲೇ ಆತನೊಬ್ಬ ಮತಾಂಧ, ದೇಶದ್ರೋಹಿ ಎಂದು ಹೇಳುತ್ತವೆ. ಹಾಗಾಗಿ ಆತನ ಹಿಟ್ಲರ್ ಗೆ ಸಮ ಎಂದಿದ್ದಾರೆ.
ಮುಸ್ಲಿಮರಲ್ಲದವರು, ಅಂದರೆ ಕಾಫಿರರನ್ನು ಕೊಲ್ಲಬೇಕು ಎಂಬುದು ಟಿಪ್ಪುವಿನ ಧೋರಣೆಯಾಗಿತ್ತು. ಆತ ಹಾಗೆಯೇ ಮಾಡಿದ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕಾಫಿರರೇ. ಹಾಗಾಗಿ ಆತನ ಜಯಂತಿ ಆಚರಿಸಬಾರದು ಎಂದು ತಿಳಿಸಿದ್ದಾರೆ.
ಟಿಪ್ಪು ಜಯಂತಿ ಆಚರಿಸುವ ರಾಜ್ಯ ಸರ್ಕಾರಕ್ಕೆ ಮರ್ಯಾದೆ ಇಲ್ಲ ಎಂದು ಶಾಸಕ ವಿಜಯ್ ಕುಮಾರ್ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply