ರಾಷ್ಟ್ರ ಗೀತೆ ಕಡ್ಡಾಯಕ್ಕೆ ಮುಸ್ಲಿಮರ ವಿರೋಧ
ರಾಂಚಿ: ಜಾರ್ಖಂಡನ ಎಲ್ಲ ಸರಕಾರಿ, ಖಾಸಗಿ ಶಾಲೆಗಳು ಮತ್ತು ಮದ್ರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಾಗಿ ಹಾಡಬೇಕು ಎಂಬ ನಿಯಮಕ್ಕೆ ಮುಸ್ಲಿಂರಿಂದ ವಿರೋಧ ವ್ಯಕ್ತವಾಗಿದೆ. ಇದು ಮುಸ್ಲಿಂ ಕಲಿಕಾ ಕೇಂದ್ರಗಳ ಮೂಲ ಆಶಯಕ್ಕೆ, ಮೂಲ ನಿಯಮಗಳಿಗೆ ವಿರುದ್ಧವಾದದ್ದು. ಆದ್ದರಿಂದ ಈ ನಿಯಮ ಜಾರಿಗೆ ಬೇಡ ಎಂದು ಆಗ್ರಹಿಸಿವೆ.
ಜಾರ್ಖಂಡ ಶಿಕ್ಷಣ ಸಚಿವೆ ನೀರಾ ಯಾದವ್ ಗುರುವಾರ ರಾಜ್ಯದ ಎಲ್ಲ ಶಾಲಾ, ಕಾಲೇಜುಗಳಲ್ಲಿ ಮತ್ತು ಮದರಸಾಗಳಲ್ಇ ರಾಷ್ಟ್ರಗೀತೆ ಕಡ್ಡಾಯ ಎಂದು ಆದೇಶ ಹೊರಡಿಸಿದ್ದರು.
ಬಿಜೆಪಿ ನೇತೃತ್ವದ ಜಾರ್ಖಂಡ್ ಸರಕಾರದ ನಿಯಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಬಿಜೆಪಿ ಸರಕಾರದಿಂದ ರಾಷ್ಟ್ರೀಯತೆ ಮತ್ತು ದೇಶಭಕ್ತಿಯನ್ನು ಹೇರಲಾಗುತ್ತಿದೆ ಎಂದು ಖಂಡನೆ ವ್ಯಕ್ತಪಡಿಸಿವೆ.
ರಾಷ್ಟ್ರೀಯ ಹಬ್ಬಗಳಾದ ಆಗಸ್ಟ್ 15, ಜನವರಿ 26 ರಂದು ರಾಷ್ಟ್ರಗೀತೆ ಹಾಡಲು ಅಭ್ಯಂತರವಿಲ್ಲ. ಆದರೆ ನಿತ್ಯ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯ ಮಾಡುವುದು ಸರಿಯಲ್ಲ. ಮದರಸಾಗಳು ಹಲವು ವರ್ಷಗಳಿಂದ ತಮ್ಮದೆ ನಿಯಮ ಪಾಲಿಸಿಕೊಂಡು ಬಂದಿವೆ. ಈಗಾಗಲೇ ಮದರಸಾಗಳಲ್ಲಿ ಮಕ್ಸೂದ್ ತರನ್ ಗೀತೆಯನ್ನು ನಿತ್ಯ ಹಾಡಲಾಗುತ್ತಿದೆ. ಇಂತಹ ನಿಯಮದಿಂದ ನಮ್ಮ ಮೂಲ ತತ್ತ್ವಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಜಾರ್ಖಂಡ್ ಇಸ್ಲಾಂಮಿಕ್ ಸ್ಕಾಲರ್ಸ್ ವಿರೋಧ ವ್ಯಕ್ತಪಡಿಸಿದೆ.
ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಾರ್ಖಂಡ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಶಹೀದ್ ಅಕ್ತರ ‘ರಾಷ್ಟ್ರಗೀತೆ ಕಡ್ಡಾಯ ಮಾಡಿರುವುದು ಸ್ವಾಗತಾರ್ಹ ನಿರ್ಧಾರ. ರಾಷ್ಟ್ರಗೀತೆ ಹಾಡುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ. ಇದು ಇಡೀ ರಾಷ್ಟ್ರಕ್ಕೆ ಅನ್ವಯವಾಗಬೇಕು ಎಂದು ಹೇಳಿದ್ದಾರೆ.
Leave A Reply