ನರೇಂದ್ರ ಮೋದಿ-ಡೊನಾಲ್ಡ್ ಟ್ರಂಪ್ ಭೇಟಿ ನಾಳೆ
Posted On November 12, 2017

ಬಾರಿಗೆ ಫಿಲಿಪ್ಪೈನ್ಸ್ ಗೆ ಭೇಟಿ ನೀಡಲಿದ್ದು, ಸೋಮವಾರ ಮಧ್ಯಾಹ್ನ 3.30ಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲಿದ್ದಾರೆ.
ಫಿಲಿಪ್ಪೈನ್ಸ್ ರಾಜಧಾನಿ ಮನಿಲಾದಲ್ಲಿ ನಡೆಯುವ 31ನೇ ಏಷ್ಯನ್ ಶೃಂಗಸಭೆ ಮಧ್ಯೆಯೇ ಉಭಯ ರಾಷ್ಟ್ರಗಳು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಭಾನುವಾರ ಸಂಜೆಯೇ ನರೇಂದ್ರ ಮೋದಿ ಅವರು ಫಿಲಿಪ್ಪೈನ್ಸ್ ತಲುಪಲಿದ್ದು, ಆಸ್ಟ್ರೇಲಿಯಾ ಪ್ರಧಾನಿ ಮ್ಲಾಲ್ಕಾಲ್ಮ್ ಟರ್ನ್ ಬುಲ್, ಜಪಾನ್ ಪ್ರಧಾನಿ ಸಿಂಝೋ ಅಬೆ, ವಿಯೇಟ್ನಾಂ ಪ್ರಧಾನಿ ಜುಯೆನ್ ಷುವಾನ್ ಫುಕ್, ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಅರ್ಡರ್ನ್ ಅವರನ್ನು ಪ್ರಧಾನಿ ಭೇಟಿ ಮಾಡಲಿದ್ದಾರೆ.
ನ.12ರಿಂದ 14ರವರೆಗೆ ಶೃಂಗಸಭೆ ನಡೆಯಲಿದ್ದು, ಭಾರತ ಹಾಗೂ ಫಿಲಿಪ್ಪೈನ್ಸ್ ಹಾಗೂ ಹಲವು ದೇಶಗಳೊಡನೆ ಹಲವು ಕ್ಷೇತ್ರಗಳಲ್ಲಿ ದೇಶದ ಸಂಬಂಧ ಹಾಗೂ ಸೌಹಾರ್ದ ವೃದ್ಧಿಸಲಿದೆ ಎಂದು ತಿಳಿದುಬಂದಿದೆ.
- Advertisement -
Leave A Reply