ದೀಪಾವಳಿಗೆ ಪಟಾಕಿ ಬ್ಯಾನ್ ಮಾಡಿ ಎಂದವರು ದೆಹಲಿ ಸ್ಥಿತಿಗೆ ಏನೆನ್ನುತ್ತೀರಿ?
ಹಿಂದೂಸ್ತಾನದಲ್ಲಿ ಕೆಲ ಸ್ವಯಂಘೋಷಿತ ಬುದ್ಧಿಜೀವಿಗಳು ಹಿಂದೂಗಳ ಸಂಸ್ಕೃತಿ ಮೇಲೆ ಸತತ ದಾಳಿ ಮಾಡುತ್ತಿದ್ದಾರೆ. ಅದಕ್ಕೆ ಪರಿಸರ ಹಾನಿ, ಮೌಢ್ಯ ಎಂಬ ಪಟ್ಟ ಕಟ್ಟುತ್ತಾರೆ. ಆದರೆ ಅವರ ಪಟ್ಟಕಟ್ಟುವ ಪರದೇಶಿ ವಿಚಾರಗಳಿಗೆ ನೆಲೆ ಇಲ್ಲ, ಅದರಲ್ಲಿ ಸತ್ವವೂ ಇಲ್ಲ ಎಂಬುದಕ್ಕೆ ದೆಹಲಿ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಬೊಗಳಿದ ವಿಚಾರವಾದಿಗಳಿಗೆ ಪ್ರಸ್ತುತ ದೆಹಲಿಯಲ್ಲಿ ಉಂಟಾಗಿರುವ ವಿಷಮಯ ಸ್ಥಿತಿಯೇ ಸಾಕ್ಷಿಯಾಗಿ ನಿಂತಿದೆ. ದೆಹಲಿಯಲ್ಲಿ ಸರಿ, ಬೆಸ ಸಂಖ್ಯೆಯ ವಾಹನಗಳ ಓಡಾಟ ನಿಷೇಧಿಸುವ ನಿಯಮ ಜಾರಿಗೆ ತರಲಾಗಿದೆ. ದಿನೇ ದಿನೇ ಹದಗೆಡುತ್ತಿರುವ ಪರಿಸ್ಥಿತಿಯಿಂದ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತಿದೆ. ಆದರೆ ಇಲ್ಲಿ ಯಾರೂ ಪಟಾಕಿ ಹೊಡೆಯುತ್ತಿಲ್ಲ ಎಂಬುದು ಮಾತ್ರ ಕಠೋರ ವಾಸ್ತವ. ಸುಖಾ ಸುಮ್ಮನೇ ಹಿಂದೂ ಹಬ್ಬಗಳ ಮೇಲೆ ಮುಗಿ ಬೀಳುವ ಬುಜೀಗಳಿಗೆ ವಾಯುಮಾಲಿನ್ಯ ಪಟಾಕಿಯಿಂದಲ್ಲ, ಮಿತಿ ಮೀರಿದ ವಾಹನಗಳ ಬಳಕೆ, ಕೈಗಾರಿಕೆಗಳಿಂದ ಎಂಬುದು ಅರ್ಥವಾಗಬೇಕು.
ಇನ್ನು ಆಪ್ ಎಂಬ ಜನರಿಗಾಗದ ಆಪತ್ಬಾಂದವ ಕೇಜ್ರಿವಾಲ್ ‘ದೆಹಲಿ ಮಾಲಿನ್ಯಕ್ಕೆ, ಹರ್ಯಾಣ, ಗುಜರಾತ್ ನಲ್ಲಿ ರೈತರು ಸುಡುತ್ತಿರುವ ಹುಲ್ಲಿನ ಹೊಗೆ ಎನ್ನುತ್ತಲೇ ಕಾಲಹರಣ ಮಾಡುತ್ತಿದ್ದಾರೆ. ನಿಜವಾಗಿ ಪಟಾಕಿಯಿಂದಲೋ, ಹುಲ್ಲು ಸುಟ್ಟಿದ ಹೊಗೆಯಿಂದಲೋ ಪರಿಸ್ಥಿತಿ ವಿಷಮವಾಗುತ್ತದೆ ಎಂದು ಎಲ್ಲರೂ ಸೇರಿ ಯಾರದ್ದೋ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಬಾರದು. ವಾಸ್ತವವೇ ಬೇರೆಯಾಗಿರಬೇಕಾದರೆ ಪಟಾಕಿ ನೆಪವಷ್ಟೇ.
ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸುತ್ತಲೇ ಕೆಲ ಪ್ರಶ್ನೆಗಳನ್ನು ನಾವು ವಿಚಾರವಾದಿಗಳಿಗೆ ಕೇಳಲೇಬೇಕು.
ದೀಪಾವಳಿ ಮುಗಿದು ತಿಂಗಳಾದರೂ, ಪಟಾಕಿ ನಿಷೇಧಿಸಿದರೂ ದೆಹಲಿಯ ಸ್ಥಿತಿ ಇಷ್ಟು ವಿಷಮವಾಗಲು ಕಾರಣವೇನು?
ಪಟಾಕಿಯೇ ಮಾಲಿನ್ಯಕ್ಕೆ ಕಾರಣ ಎಂದಾದಮೇಲೆ ನಿಷೇಧಿಸಿದರೂ ಅದ್ಹೇಗೆ ಇಂತಹ ಸ್ಥಿತಿ ನಿರ್ಮಾಣವಾಯಿತು?
ರೈತರು ಸುಡುವ ಹುಲ್ಲಿನಿಂದ ಹೊರಡುವ ಹೊಗೆಯಿಂದ ಅದ್ಹೇಗೆ ದೆಹಲಿ ಮೇಲೆ ದುಷ್ಪರಿಣಾಮ ಬೀರಿತು?0
ಮಾಲಿನ್ಯಕ್ಕೆ ಹುಲ್ಲಿನ ಹೊಗೆ, ಪಟಾಕಿ ಎನ್ನುವವರು ಮತ್ತೇಕೆ, ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕುತ್ತಿದ್ದೀರಿ?
ವಾಸ್ತವದಲ್ಲಿ ಕೈಗಾರಿಕೆಗಳು, ಮಿತಿ ಮೀರಿದ ವಾಹನಗಳೇ ವಾಯುಮಾಲಿನ್ಯಕ್ಕೆ ಕಾರಣವಲ್ಲವೇ?
ಸರಕಾರ ಬಂದು ಇಷ್ಟು ವರ್ಷಗಳಾದರೂ ಪ್ರತಿ ವರ್ಷ ಎದುರಾಗುವ ವಿಷಮ ಸ್ಥಿತಿಗೆ ಶಾಶ್ವತ ಕ್ರಮವೇನು ಕೈಗೊಂಡಿದ್ಧೀರಿ?
ವಾಯುಮಾಲಿನ್ಯಕ್ಕೆ ಮೋದಿ ಕಾರಣ ಎನ್ನುವ ಬುಜೀ ರಾಮಚಂದ್ರ ಗುಹಾ ವಾದ ಅದೆಷ್ಟು ಹೀನವೆನಿಸುವುದಿಲ್ಲವೇ?
ರೈತರ ಮೇಲೆ ಗೂಬೆ ಕೂರಿಸುವ ಮುನ್ನ ದೆಹಲಿ ಸ್ಥಿತಿ ನಿಯಂತ್ರಣಕ್ಕೆ ಶಾಶ್ವತ ಕ್ರಮ ಕೈಗೊಳ್ಳಬೇಕಲ್ಲವೇ?
ಕೇವಲ ಆಪತ್ತು ಬಂದಾಗ ವಾಹನ ನಿಷೇಧ ಮಾಡುವ ನಾಟಕ ಮಾಡುವುದೇ ಪರಿಹಾರವೇ?
ಇನ್ನು ಪಟಾಕಿ ನಿಷೇಧಿಸುವ ಬರದಲ್ಲಿ ವಾಸ್ತವ ಸಮಸ್ಯೆಯನ್ನೇ ಮರೆತುಬಿಡಲಾಯಿತೇ?
ಮೂರು ದಿನ ಸಿಡಿಸುವ ಪಟಾಕಿಯಿಂದ ಅದೆಷ್ಟೂ ಮಾಲಿನ್ಯವಾದಿತೂ?
Leave A Reply