ಆಲೂಗೆಡ್ಡೆ ಹಾಕಿದರೆ ಬಂಗಾರ ಹೊರಬರುವ ಮಷೀನ್ ಕಂಡು ಹಿಡಿಯಲಿದ್ದಾರೆ ರಾಹುಲ್ ಗಾಂಧಿ! ವಿಡಿಯೋ ವೈರಲ್.
Posted On November 16, 2017

ದೆಹಲಿ: ಇದುವರೆಗೂ ರಾಹುಲ್ ಗಾಂಧಿ ಎಂದ ತಕ್ಷಣ ಸೋ ಕಾಲ್ಡ್ ಯುವಜನತೆಯ ಮುಕುಟ ಮಣಿ, ವಿಚಿತ್ರ ಹೇಳಿಕೆ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸುವ, ಕಾಂಗ್ರೆಸ್ಸಿನ ಅಘೋಷಿತ ನಾಯಕ, ಚುನಾವಣೆ ಆಯೋಗದಿಂದ “ಪಪ್ಪು” ಎಂದು ಕರೆಯಬಾರದು ಎಂದು ಭದ್ರತೆ ಒದಗಿಸಿಕೊಂಡಿರುವ ಲೀಡರ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಆದರೀಗ ರಾಹುಲ್ ಗಾಂಧಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಹೌದು, ರಾಹುಲ್ ಗಾಂಧಿ ಮುಂದಿನ ದಿನಗಳಲ್ಲಿ ಜನರ ಅನುಕೂಲಕ್ಕಾಗಿ ಆಲೂಗೆಡ್ಡೆ ಹಾಕಿದರೆ ಬಂಗಾರ ಹೊರಬರುವ ಯಂತ್ರ ಸ್ಥಾಪಿಸುತ್ತೇನೆ ಎಂದು ಘೋಷಿಸಿದ್ದಾರೆ.
ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ರಾಹುಲ್ ಆದಿವಾಸಿಗಳನ್ನುದ್ದೇಶಿಸಿ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಮಾತುಗಳನ್ನು ನರೇಂದ್ರ ಮೋದಿ ಹೇಳಿದ್ದಾರೆ ಎಂದು ಉಲ್ಲೇಖಿದ್ದಾರಾದರೂ, ರಾಹುಲ್ ಗಾಂಧಿಯವರೇ ಹೇಳಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದೆ.
- Advertisement -
Leave A Reply