ನಾನೇಕೆ ಮತ್ತೆ ಬಿಜೆಪಿ ಸೇರಿದೆ ಗೊತ್ತಾ: ಮೋದಿ ಜತೆ ಕೈ ಜೋಡಿಸಿದ್ದಕ್ಕೆ ಕಾರಣ ತಿಳಿಸಿದ ನಿತೀಶ್ ಕುಮಾರ್
ಪಟನಾ: ರಾಜಕೀಯದಲ್ಲಿ ಬರೀ ಅಧಿಕಾರಕ್ಕೆ ಯಾರು ಯಾರ ಜತೆ ಬೇಕಾದರೂ ಕೈ ಜೋಡಿಸುತ್ತಾರೆ ಎಂಬುದು ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಮಾತು. ಅವರು ಯಾಕೆ ಬೇರೆ ಪಕ್ಷದೊಂದಿಗೆ ಕೈ ಜೋಡಿಸಿದರೂ ಎಂದೂ ಸಹ ಜನರಿಗೆ ಹೇಳದಿರುವ ಕಾರಣ ಇವರು ಅಧಕಾರಕ್ಕಾಗಿಯೇ ಕೈ ಜೋಡಿಸಿದರು ಎಂದು ಜನರೂ ಭಾವಿಸುತ್ತಾರೆ, ವಾಸ್ತವದಲ್ಲೂ ಅದೇ ಆಗಿರುತ್ತದೆ.
ಆದರೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತ್ರ ಇಂಥ ಸಂಪ್ರದಾಯಕ್ಕೆ ವಿದಾಯ ಹೇಳಿದ್ದು, ಅವರೇಕೆ ಲಾಲೂ ಪ್ರಸಾದ್ ಯಾದವ್ ಸಂಗ ಬಿಟ್ಟು ಬಿಜೆಪಿ ಹಾಗೂ ಪ್ರಧಾನಿ ಮೋದಿ ಜತೆ ಕೈ ಜೋಡಿಸಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಹಿಂಬಾಗಿಲಿನಿಂದ ದೇಶವನ್ನಾಳದೆ, ಜನರಿಗೆ ನೇರವಾಗಿ ಆಡಳಿತ ನಡೆಸುತ್ತಾರೆ. ಹೀಗೆ ನೇರ ಆಡಳಿತ ಮಾಡುವುದರಿಂದ ಒಳ್ಳೆಯದಾದರೂ ಅವರನ್ನು ಹೊಗಳುತ್ತಾರೆ ಹಾಗೂ ಕೆಟ್ಟದಾದರೂ ಅವರನ್ನೇ ಹೊಗಳುತ್ತಾರೆ. ಹೀಗಿರುವಾಗ ನರೇಂದ್ರ ಮೋದಿ ಅವರು ಛಾತಿಯಿಂದ ಆಡಳಿತ ನಡೆಸುತ್ತಾರೆ ಎಂದು ನಿತೀಶ್ ಹೇಳಿದ್ದಾರೆ.
ಹೀಗೆ ಹಿಂದಿನ ಪಕ್ಷ ಜನರ ಜತೆಯಿದ್ದು, ನೇರವಾಗಿ ಆಡಳಿತ ನಡೆಸದೆ ಹಿಂಬಾಗಲಿನಿಂದ ಆಡಳಿತ ನಡೆಸಿತು. ಒಳ್ಳೆಯದಾದದರೆ ಅದರ ಕ್ರೆಡಿಟ್ ತಾವು ಪಡೆದು, ಕೆಡುಕಾದರೆ ಬೇರೆಯವರ ತಲೆಗೆ ಕಟ್ಟುತ್ತಿತ್ತು ಎಂದು ಕಾಂಗ್ರೆಸ್ಸಿಗೂ ನಿತೀಶ್ ಟಾಂಗ್ ನೀಡಿದ್ದಾರೆ.
ಅಲ್ಲದೆ, ನರೇಂದ್ರ ಮೋದಿ ಅವರು ಘೋಷಿಸಿದ ನೋಟು ನಿಷೇಧ ಅತ್ಯಂತ ಮಹತ್ವ ಪೂರ್ಣ ನಿರ್ಧಾರವಾಗಿದೆ. 2016ರ ನ.8ರಂದು ಮೋದಿ ಅವರು ತೆಗೆದುಕೊಂಡ ನಿರ್ಧಾರದಿಂದ ಇಡೀ ದೇಶದ ಚಹರೆಯೇ ಬದಲಾಯಿತು. ಈ ಎಲ್ಲ ಕಾರಣಗಳಿಂದ ನರೇಂದ್ರ ಮೋದಿ ಅವರನ್ನ ಬೆಂಬಲಿಸಲಾಯಿತು ಎಂದು ನಿತೀಶ್ ಕುಮಾರ್ ಕಾರ್ಯಕ್ರಮವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.
Leave A Reply