ತುರ್ತು ಪರಿಸ್ಥಿತಿ ಹೇರಿದ ಇಂದಿರಾಗಾಂಧಿ ಎಲ್ಲಿ, ಸಬ್ ಕಾ ವಿಕಾಸ್ ಎನ್ನುವ ಹೆಮ್ಮೆಯ ಪ್ರಧಾನಿ ಮೋದಿ ಎಲ್ಲಿ?
ಕೆಲವೊಮ್ಮೆ ಈ ಕಾಂಗ್ರೆಸ್ಸಿಗರೇ ಹೀಗೇನಾ? ಎಂಬ ಪ್ರಶ್ನೆ ಮೂಡುತ್ತದೆ. ಒಂದೋ ಅವರು ದೇಶವನ್ನಾಳುತ್ತಿರಬೇಕು ಇಲ್ಲವೇ ನರೇಂದ್ರ ಮೋದಿಯವರನ್ನು ಟೀಕಿಸುತ್ತಿರಬೇಕು ಅಥವಾ ಎಲ್ಲರೂ ಕಾಂಗ್ರೆಸ್ಸನ್ನು, ನೆಹರೂ, ಇಂದಿರಾ, ರಾಜೀವ್ ಗಾಂಧಿಯವರನ್ನು ಹೊಗಳುತ್ತಿರಬೇಕು. ದೇಶದ ಅಭಿವೃದ್ಧಿ ಕುರಿತ ಚಿಂತನೆಯೊಂದನ್ನು ಬಿಟ್ಟು ಕಾಂಗ್ರೆಸ್ ಇದೆಲ್ಲವನ್ನು ದಶಕಗಳಿಂದ ತುಂಬ ವ್ಯವಸ್ಥಿತವಾಗಿ ಮಾಡುತ್ತಿದೆ.
ಭಾನುವಾರವಷ್ಟೇ ಇಂದಿರಾಗಾಂಧಿ ಜನ್ಮದಿನ…
ನೋಟು ನಿಷೇಧ, ಜಿಎಸ್ಟಿ ಜಾರಿಯಿಂದ ದೇಶದ ಆರ್ಥಿಕ ವ್ಯವಸ್ಥೆ ಬುಡಮೇಲಾಯಿತು ಎಂಬ ಗೊಡ್ಡು ವಾದ ಮಂಡಿಸೋಣ ಎಂದರೆ ನೋಟು ಬ್ಯಾನಿನಿಂದ ದೇಶಕ್ಕಾದ ಅನುಕೂಲಗಳು ದೇಶದ ಜನರಿಗೆ ಗೊತ್ತಿವೆ. ಜಿಎಸ್ಟಿಯಿಂದ ಭಾರತ ಮೂಡೀಸ್ ಶ್ರೇಯಾಂಕದಲ್ಲಿ ಒಂದಂಕಿ ಏರಿದೆ. ಏನು ಅಂತ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಾರೆ. ರಾಹುಲ್ ಗಾಂಧಿ ಅವರಂತೂ ಆಲೂ ಹಾಕಿ ಚಿನ್ನ ಹೊರತೆಗೆಯುವ ಮಷೀನ್ ಕಂಡು ಹಿಡಿಯುವಲ್ಲಿ ಬ್ಯುಸಿಯಾಗಿದ್ದಾರೆ.
ಆಗ ಕಾಂಗ್ರೆಸ್ಸಿಗೆ ನೆನಪಾಗಿದ್ದೇ ಇಂದಿರಾಗಾಂಧಿ. ಪ್ರಧಾನಿ ಮೋದಿ ಅವರು ಇಂದಿರಾಗಾಂಧಿಯವರನ್ನು ಸ್ಫೂರ್ತಿಯನ್ನಾಗಿಟ್ಟುಕೊಂಡಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತದಂಥ ಕನಸಿಗೆ ಇಂದಿರಾಗಾಂಧಿಯವರ ಆಗಿನ ದಿಟ್ಟ ಸರ್ಕಾರ, ದೇಶಾದ್ಯಂತ ಕಾಂಗ್ರೆಸ್ ಆಡಳಿತ ಬರುವಲ್ಲಿ ಶ್ರಮಿಸಿದ ನಾಯಕಿ ಎಂಬಂತೆ ಬಿಂಬಿಸುತ್ತಿದೆ. ತಮ್ಮ ಮೂಗಿನ ಕೆಳಗಿನ ಬರಹಗಾರರಿಂದ ಇದನ್ನು ಮಾಡಿಸುತ್ತಿದೆ. ನರೇಂದ್ರ ಮೋದಿ ಅವರನ್ನು ಇಂದಿರಾ ಜತೆ ಸಮೀಕರಿಸುವ ಲೇಖನಗಳ ಎಲ್ಲೆಡೆ ಹರಿದಾಡುತ್ತಿವೆ.
ಅಲ್ಲಾ ಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಇಂದಿರಾಗಾಂಧಿ ಅವರಿಗೂ ಎಲ್ಲಿಂದೆಲ್ಲಿಯ ವ್ಯತ್ಯಾಸ. ಹೇಗೆ ಮೋದಿ ಅವರಿಗೆ ಇಂದಿರಾಗಾಂಧಿ ಸ್ಫೂರ್ತಿಯಾದಾರು? ಹೇಗೆ ಇಬ್ಬರ ಆಡಳಿತ ಒಂದೇ ಆದೀತು? ಸರ್ವಾಧಿಕಾರಿ ಧೋರಣೆಯ ಪ್ರತೀಕವಾಗಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಇಂದಿರಾಗಾಂಧಿ ಎಲ್ಲಿ? ಅಪಾರ ದೇಶಪ್ರೇಮ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಿ?
ಇಂದಿರಾ ಗಾಂಧಿ ಅವರನ್ನು ಹೊಗಳಬೇಕು ಎನ್ನುತ್ತಲೇ, 1971ರಂದು ಪಾಕಿಸ್ತಾನದ ಮೇಲೆ ಯುದ್ಧ ಸಾರಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಆಗಿನ ಪರಿಸ್ಥಿತಿ ಹೇಗಿತ್ತು? ಪೂರ್ವ ಪಾಕಿಸ್ತಾನದಿಂದ ಬಂದಿದ್ದ ಲಕ್ಷಾಂತರ ಜನ ಭಾರತಕ್ಕೆ ಬಂದು ತಲೆನೋವಾಗಿ ಪರಿಣಮಿಸಿದ್ದರು. ಅತ್ತ ಅವರನ್ನು ಸಾಕುವ ಹಾಗೂ ಇರಲಿಲ್ಲ, ಹೊರದೂಡುವಂತೆಯೂ ಇರಲಿಲ್ಲ. ಹಾಗಾಗಿಯೇ ಯುದ್ಧ ಅನಿವಾರ್ಯವಾಯಿತು. ಅದನ್ನು ಜವಾಹರ್ ಲಾಲ್ ನೆಹರೂ ಇದ್ದರೂ ಮಾಡುತ್ತಿದ್ದರೂ, ಮನಮೋಹನ್ ಸಿಂಗ್ ಇದ್ದರೂ ಮಾಡುತ್ತಿದ್ದರು. ಆದರೆ ಎಲ್ಲ ಕ್ರೆಡಿಟ್ಟು ಮಾತ್ರ ಇಂದಿರಾ ಗಾಂಧಿಯವರಿಗೇ ಹೋಯಿತು.
ಅಲ್ಲದೆ, ಬ್ಯಾಂಕುಗಳ ರಾಷ್ಟ್ರೀಕರಣ ಒಂದೇ ದೇಶದ ಅಭಿವೃದ್ಧಿಗೆ ಕಾರಣವಾಯಿತೆ? ಅದೊಂದೇ ಇಂದಿರಾಗಾಂಧಿ ಸಾಧನೆಯೇ? ಈ ಎರಡು ಮತ್ತೊಂದು ಅಂಶಗಳನ್ನೇ ಇಟ್ಟುಕೊಂಡು ನರೇಂದ್ರ ಮೋದಿ ಅವರ ಜತೆ ಹೋಲಿಕೆ ಮಾಡುವುದಾದರೆ, ಇಂದಿರಾ ಗಾಂಧಿ ದೇಶಕ್ಕೆಮಾಡಿದ ನಷ್ಟದ ಬಗ್ಗೆ ಯಾರಾದರೂ ಹೇಳುತ್ತಾರೆಯೇ? ಅಧಿಕಾರ ಕಳೆದುಕೊಂಡ ಇಂದಿರಾಗಾಂಧಿ 1975ರಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಎರಡು ವರ್ಷ ದೇಶವನ್ನು ಕತ್ತಲಲ್ಲಿ ಮುಳುಗಿಸಿದರು. ಸರ್ವಾಧಿಕಾರಿ ಧೋರಣೆಯಿಂದ ಇಡೀ ದೇಶದ ಜನ ಬೆಲೆ ತೋರಬೇಕಾಯಿತು. ಇನ್ನು ಅಮೃತಸರಕ್ಕೆ ಪೊಲೀಸರನ್ನು ನುಗ್ಗಿಸಿ ಶಾಂತಿಗೆ ಭಂಗ ತಂದರು. ಕಾಂಗ್ರೆಸ್ಸನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಉಳಿದ ನಾಯಕರನ್ನು ಮೂಲೆಗುಂಪು ಮಾಡಿದರು. ಗರೀಬಿ ಹಠಾವೋ ಎಂಬ ಹುಸಿ ಯೋಜನೆಯಿಂದ ಬಡವರ ಮೂಗಿಗೆ ತುಪ್ಪ ಸವರಿದರು.
ಆದರೆ ನರೇಂದ್ರ ಮೋದಿ ಅವರ ಆಡಳಿತ ಎಂಥಾದ್ದು?
ದಶಕದವರೆಗೆ ದೇಶವಾಳಿದ ಇಂದಿರಾಗಾಂಧಿ ಮಾಡಿದ ಹತ್ತು ಪಟ್ಟು ಕೆಲಸವನ್ನು ನರೇಂದ್ರ ಮೋದಿ ಅವರು ಮೂರುವರೆ ವರ್ಷದಲ್ಲೇ ಮಾಡಿ ತೋರಿಸಿದ್ದಾರೆ. ನೋಟು ನಿಷೇಧಿಸಿ ಕಾಳಧನಿಕರ ಹೆಡೆಮುರಿಕಟ್ಟಿದ್ದಾರೆ, ಜಿಎಸ್ಟಿ ಮೂಲಕ ದೇಶದ ಆರ್ಥಿಕ ಸ್ಥಿತಿ ಸುಧಾರಿಸಿದ್ದಾರೆ, ವಿದೇಶಿ ಬಂಡವಾಳದ ಮೂಲಕ ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಉಗ್ರರ ನಿಗ್ರಹ ಮಾಡಿದ್ದಾರೆ. ಜಿಡಿಪಿ ದರ ಬೆಳವಣಿಗೆಯಲ್ಲಿ ಈಗಾಗಲೇ ನಾವು ರಷ್ಯಾ, ಬ್ರಿಟನ್ ಅನ್ನು ಹಿಂದಿಕ್ಕಿಯಾಗಿದೆ. ಉಪಟಳ ಮಾಡುವ ಪಾಕಿಸ್ತಾನಕ್ಕೆ ಸರ್ಜಿಕಲ್ ದಾಳಿ ಮೂಲಕ ಬಾಲ ಕತ್ತರಿಸಿದ್ದಾರೆ.
ಅಷ್ಟೇ ಅಲ್ಲ, ಮೇಕ್ ಇನ್ ಇಂಡಿಯಾ, ರೈಲು ಅಭಿವೃದ್ಧಿ, ಜನಧನ ಯೋಜನೆ, ಕೃಷಿ ಸಂಚಾಯಿ, ಮುದ್ರಾ ಬ್ಯಾಂಕ್, ಡಿಜಿಟಲ್ ಇಂಡಿಯಾ ಯೋಜನೆಗಳ ಮೂಲಕ ದೇಶವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದಾರೆ. ಜನ ಅಭಿವೃದ್ಧಿ ನೋಡಿ ಕಾಂಗ್ರೆಸ್ ಮುಕ್ತವನ್ನಾಗಿಸುವಂತೆ ಮಾಡಿದ್ದಾರೆ.
ಈಗ ಹೇಳಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಸರ್ವಾಧಿಕಾರಿ ಇಂದಿರಾ ಗಾಂಧಿ ಯಾವ ಲೆಕ್ಕ, ಅಪ್ಪಟ ದೇಶಪ್ರೇಮಿ, ರಜೆಯನ್ನೇ ತೆಗೆದುಕೊಳ್ಳದೆ ದೇಶಕ್ಕಾಗಿ ದುಡಿಯುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರೆಲ್ಲಿ?
Leave A Reply