ವಿಶ್ವಸುಂದರಿಗೆ ಅವಮಾನ ಮಾಡಿ ಚಿಲ್ಲರೆತನ ಪ್ರದರ್ಶಿಸಿದ ತರೂರ್
ದೆಹಲಿ: ಕಾಂಗ್ರೆಸ್ ಸಂಸದ ಶಶಿತರೂರ ಕೇಂದ್ರದಲ್ಲಿರುವ ಬಿಜೆಪಿ ಸರಕಾರದ ನೋಟ್ಯಂತರವನ್ನು ಟೀಕಿಸುವ ಭರದಲ್ಲಿ ವಿಶ್ವಸುಂದರಿಯಾಗಿ ಆಯ್ಕೆಯಾಗಿರುವ ಮಾನುಷಿ ಛಿಲ್ಲರ್ ಅವರನ್ನು ಹೀನಾಯವಾಗಿ ಅವಮಾನ ಮಾಡಿದ್ದಾರೆ. ನೋಟ್ಯಂತರದ ಕುರಿತು ಟ್ವೀಟ್ ಮಾಡಿರುವ ಶಶಿ ತರೂರ ಮಾನುಷಿ ಅವರ ಕುಟುಂಬದ ಹೆಸರು ಛಿಲ್ಲರ್ ಅವರನ್ನು ಚಿಲ್ಲರೇ ಹಣಕ್ಕೆ ಹೋಲಿಸಿದ್ದಾರೆ.
ನೋಟ್ಯಂತರ ಅತಿ ದೊಡ್ಡ ತಪ್ಪು ನಿರ್ಧಾರ. ಭಾರತದ ಹಣ ವಿಶ್ವಾದ್ಯಂತ ಮಾನ್ಯತೆ ಪಡೆದಿದೆ, ಬಿಜೆಪಿಯವರು ಇದನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಈಗ ನೋಡಿ ‘ಭಾರತದ ಚಿಲ್ಲರೆ ವಿಶ್ವಸುಂದರಿ’ ಸ್ಥಾನ ಪಡೆದಿದೆ ಎಂದು ಟ್ವೀಟ್ ಮಾಡಿದ್ದಾರೆ. ಛಿಲ್ಲರ್ ಅವರನ್ನು ಹಾಸ್ಯಕ್ಕೆ ಬಳಸಿಕೊಂಡಿರುವ ತರೂರ್ ವಿರುದ್ಧ ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಛೀಮಾರಿ ಹಾಕಿದ್ದಾರೆ.
ಹಣವನ್ನು ಹೆಣ್ಣಿಗೆ ಹೋಲಿಸುವ ನಿಮಗೆ ಪಿಂಪ್ ಎನ್ನುವುದೇ ಸರಿ ಎಂದು ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ. ನಟ ಅನುಪಮ ಖೇರ್ ಪ್ರತಿಕ್ರಿಯಿಸಿದ್ದು, ನಿಮ್ಮ ಮನಸ್ಥಿತಿ ಈ ಮಟಕ್ಕೆ ಇಳಿಯಿತೇ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಎಚ್ಚೆತ ತರೂರ ನಾನು ಕೇವಲ ಹಾಸ್ಯಕ್ಕಾಗಿ ಆ ರೀತಿ ಟ್ವೀಟ್ ಮಾಡಿದ್ದೇನೆ, ಹಾಸ್ಯಮನೋಭಾವದಿಂದ ಸ್ವೀಕರಿಸಿ ಎಂದು ಹೇಳಿದ್ದಾರೆ,
ಇನ್ನು ತರೂರ ಟ್ವೀಟ್ ಭಾರತೀಯ ಮಹಿಳೆಗೆ ಮಾಡಿದ ಅವಮಾನ ಎಂದು ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ ಶಶಿ ತರೂರಗೆ ಮಾಹಿತಿ ಕೇಳಿ ಸಮನ್ಸ್ ನೀಡಿದೆ. ಭಾರತದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಪಸರಿಸಿ, ವಿಶ್ವಸುಂದರಿಯಾಗಿರುವ ಮಾನುಷಿಯವರನ್ನು ಅವಮಾನಿಸಿದ್ದು, ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.
Leave A Reply