1990ರಿಂದ ಇದುವರೆಗೆ ಎಷ್ಟು ಹಿಂದೂ ಕುಟುಂಬಗಳು ವಲಸೆ ಹೋಗಿದ್ದಾರೆ ಗೊತ್ತಾ? ಸಂಖ್ಯೆ ಕೇಳಿದರೆ ಶಾಕ್ ಆಗ್ತೀರಿ!
ಶ್ರೀನಗರ: ನಮ್ಮ ದೇಶದಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ರಕ್ಷಣೆ ನೀಡುತ್ತಾರೆ, ದೇಶಕ್ಕೆ ಮಾರಕವಾಗುವ ರೋಹಿಂಗ್ಯಾ ಮುಸ್ಲಿಮರನ್ನು ಸಾಕಿ ಸಲುಹಬೇಕು ಎಂದು ಒತ್ತಾಯಿಸುತ್ತಾರೆ. ಆದರೆ ಜಮ್ಮು-ಕಾಶ್ಮೀರದಲ್ಲಿ ನಮ್ಮವರೇ ಹಿಂದೂ ಪಂಡಿತರು ಕಿರುಕುಳ ತಾಳಲಾರದೆ ವಲಸೆ ಹೋಗುತ್ತಿರುವ ಬಗ್ಗೆ ಯಾರೂ ಮಾತನಾಡುವುದಿಲ್ಲ. ಅವರ ರಕ್ಷಣೆ ಕುರಿತು ಯಾವನೂ ಸೊಲ್ಲೆತ್ತುವುದಿಲ್ಲ.
ಅಷ್ಟಕ್ಕೂ, 1990ರಿಂದ ಜಮ್ಮು-ಕಾಶ್ಮೀರದಲ್ಲಿ ಇದುವರೆಗೂ ವಲಹೆ ಹೋದ ಹಿಂದೂ ಪಂಡಿತರ ಕುಟುಂಬಗಳ ಸಂಖ್ಯೆ ಎಷ್ಟು ಗೊತ್ತಾ? ಬರೋಬ್ಬರಿ 60 ಸಾವಿರ!
ಹೌದು, ಪ್ರಫುಲ್ ಸರ್ದಾ ಎಂಬುವವರು ಮಾಹಿತಿ ಹಕ್ಕು ಕಾಯಿದೆ ಅನ್ವಯ ಹಿಂದೂ ಪಂಡಿತರ ವಲಸೆ ಕುರಿತು ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಗೆ ಸರ್ಕಾರ ನೀಡಿರುವ ಮಾಹಿತಿಯಂತೆ ಇಷ್ಟು ಹಿಂದೂ ಪಂಡಿತರು ವಲಸೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಜಮ್ಮುವಿನಲ್ಲಿ ವಾಸವಿದ್ದ 40 ಸಾವಿರ ಹಾಗೂ ಕಾಶ್ಮೀರದಲ್ಲಿ ನೆಲೆಸಿದ್ದ 19 ಸಾವಿರ ಕುಟುಂಬಗಳು ದೆಹಲಿಯಲ್ಲಿ ಹಾಗೂ 2 ಸಾವಿರ ಕುಟುಂಬಗಳು ವಲಸೆ ಹೋಗಿ ದೇಶದ ಹಲವೆಡೆ ವಾಸಿಸುತ್ತಿದ್ದಾರೆ ಎಂದು ಸರ್ಕಾರವೇ ಮಾಹಿತಿ ನೀಡಿದೆ.
Leave A Reply