• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮದ್ಯದಂಗಡಿಗಳ ಬಂದ್ ನಿಂದ ಜನರಿಗೆ ಆಗುವ ಐದು ಉಪಯೋಗಗಳು!

TNN Correspondent Posted On July 3, 2017


  • Share On Facebook
  • Tweet It

ಜುಲೈ 1 ಶನಿವಾರ ಬಂದಿತ್ತು. ವಾರಾಂತ್ಯದಲ್ಲಿ ತಮ್ಮ ನಿತ್ಯದ ಬಾರ್ ಅಥವಾ ಬಾರ್ ಎಂಡ್ ರೆಸ್ಟೋರೆಂಟ್ ಗೆ ಹೋಗುವ ಕುಡುಕ ಮಹಾಶಯರಿಗೆ ಆಶ್ಚರ್ಯ ಕಾದಿತ್ತು. ಚುನಾವಣೆಯ ಸಂದರ್ಭ ಅಥವಾ ಆ ರಸ್ತೆಯಲ್ಲಿ ಜಾತ್ರೆ, ಮೆರವಣಿಗೆ ಇರುವ ವೇಳೆಯಲ್ಲಿ ಮಾತ್ರ ಬಾರ್ ಗಳು ಬಂದ್ ಆಗುವುದು ಸಾಮಾನ್ಯ. ಅದನ್ನು ಬಿಟ್ಟು ಮದ್ಯದಂಗಡಿಯೊಂದು ಬಂದ್ ಆಗಿರಬೇಕಾದರೆ ಆ ಅಂಗಡಿಗಳ ಹತ್ತಿರದ ಸಂಬಂಧಿಗೆ ಮದುವೆಯಿರಬೇಕು ಅಥವಾ ಮರಣವಾಗಿರಬೇಕು. ಇದು ಬಿಟ್ಟು ಬೇರೆ ಸಂದರ್ಭದಲ್ಲಿ ಇವು ಬಂದ್ ಆಗುವುದಿಲ್ಲ. ಆದರೆ ಕೇಂದ್ರ ಸರಕಾರದ ಆದೇಶದ ಪ್ರಕಾರ ರಾಜ್ಯ, ರಾಷ್ಟ್ರ ಹೆದ್ದಾರಿಗಳ ಪಕ್ಕದಲ್ಲಿ 500 ಮೀಟರ್ ಒಳಗೆ ಮದ್ಯದಂಗಡಿಗಳು ಇರಬಾರದು ಎನ್ನುವ ಸುತ್ತೋಲೆ ಜುಲೈ 1 ರಿಂದ ಕಟ್ಟುನಿಟ್ಟಾಗಿ ಕರಾವಳಿಯಲ್ಲಿ ಜಾರಿಗೆ ಬಂದಿದೆ. ಉದಾಹರಣೆಗೆ ಸುರತ್ಕಲ್ ನಿಂದಲೇ ತೆಗೆದುಕೊಂಡರೆ ಸುರತ್ಕಲ್ ಪೇಟೆಯಿಂದ ಕೊಟ್ಟಾರ ಚೌಕಿಯ ತನಕ ಇರುವ ಬಾರ್ ಮತ್ತು ಬಾರ್ ಎಂಡ್ ರೆಸ್ಟೋರೆಂಟಿನಲ್ಲಿ ಮಾರಾಟವಾಗುವ ಮದ್ಯದ ವ್ಯಾಪಾರವನ್ನು ಅಬಕಾರಿ ಇಲಾಖೆ ನಿಷೇಧಿಸಿದ ಬಳಿಕ ಆ ಭಾಗದ ಮದ್ಯಪ್ರಿಯರಿಗೆ ತೀವ್ರ ನಿರಾಶೆಯನ್ನು ಉಂಟು ಮಾಡಿದೆ. ಕೈಗಾರಿಕೆ ಕೇಂದ್ರಿಕೃತವಾಗಿರುವ ಪ್ರದೇಶ ಅದು. ಈಗ ಅಲ್ಲಿನ ನಶೆಪ್ರಿಯರು ತಮ್ಮ ಪ್ರೀತಿಯ ಪಾನೀಯವನ್ನು ಹುಡುಕಿ ಬೇರೆಡೆ ಹೋಗಬೇಕಿದೆ.
ಆದರೆ ಇದರಿಂದ ಸಾರ್ವಜನಿಕರಿಗೆ ಏನು ಉಪಯೋಗ ಎನ್ನುವುದನ್ನು ತಿಳಿಯೋಣ.
ಮೊದಲನೇಯದಾಗಿ ಸುರತ್ಕಲ್ ಪೇಟೆಯ ಇಕ್ಕೆಲಗಳಲ್ಲಿ ಇದ್ದ ಮದ್ಯದ ಅಂಗಡಿಗಳು ಬಂದ್ ಆದ ಕಾರಣ ಅಲ್ಲಲ್ಲಿ ವಾಹನ ಸಂಚಾರ ಸುಗಮವಾಗಿ ಸಾಗುತ್ತಿದೆ. ಇದರಿಂದ ಯಾವುದೇ ಟ್ರಾಫಿಕ್ ಜಾಮ್ ನಂತಹ ಘಟನೆಗಳು ನಡೆಯುತ್ತಿಲ್ಲ. ಎರಡನೇಯದಾಗಿ ಹಿಂದೆ ಬಾರ್ ಮತ್ತು ಬಾರ್ ರೆಸ್ಟೋರೆಂಟ್ ಇರುವ ಸ್ಥಳಗಳಿಂದ ಮುನ್ನೂರು ಮೀಟರ್ ಉದ್ದದಲ್ಲಿ ಗ್ರಾಹಕರ ವಾಹನಗಳು ಉದ್ದಗಲಕ್ಕೂ ನಿಂತು ಇದರಿಂದ ಪಾದಚಾರಿಗಳಿಗೆ ಹೋಗಲು ಬರಲು ಕಷ್ಟವಾಗುತ್ತಿತ್ತು. ಅಷ್ಟೇ ಅಲ್ಲ ರಸ್ತೆಯಲ್ಲಿ ಹೋಗುವ ವಾಹನಗಳು ಪಾರ್ಕ ಮಾಡಿದ ವಾಹನಗಳಿಗೆ ಸವರಿ ಎರಡೂ ವಾಹನಗಳ ಮಾಲೀಕರ ನಡುವೆ ಗಲಾಟೆ ನಡೆಯುತ್ತಿತ್ತು. ಅದೀಗ ನಿಂತಿದೆ. ಮೂರನೇಯದಾಗಿ ಅತಿಯಾಗಿ ಕುಡಿದು ರಸ್ತೆಬದಿಯಲ್ಲಿ ಬೀಳುತ್ತಿದ್ದ ಕುಡುಕರಿಂದ ಸಭ್ಯರಿಗೆ ನಡೆದಾಡಿಕೊಂಡು ಹೋಗಲು ಕಷ್ಟವಾಗುತ್ತಿತ್ತು. ಅದು ಸ್ಟಾಪ್ ಆಗಿದೆ. ನಾಲ್ಕನೇಯದಾಗಿ ಹಲವೆಡೆ ಮದ್ಯದಂಗಡಿಯ ಪಕ್ಕದಲ್ಲಿಯೇ ಬಸ್ ಸ್ಟಾಪ್ ಗಳು ಇದ್ದ ಕಾರಣ ಮಹಿಳೆಯರಿಗೆ ಮತ್ತು ಹಿರಿಯರಿಗೆ ಬಸ್ಸಿಗಾಗಿ ನಿಲ್ಲಲು ಕೂಡ ಮುಜುಗರವಾಗುತ್ತಿತ್ತು. ಈ ಎಲ್ಲಾ ಕಾರಣಗಳಿಂದ ಅನೇಕರು ಬಾರ್ ಗಳನ್ನು ಶಪಿಸುತ್ತಿದ್ದರು. ಐದನೇಯದಾಗಿ ಗಂಡಸರು ಸೀದಾ ಮನೆಗೆ ಬಂದು ಲೆಕ್ಕದ್ದು ಕುಡಿಯುತ್ತಾರೆ. ಇದರಿಂದ ಹೆಂಡತಿಗೆ ಟೆನ್ಷನ್ ಕಡಿಮೆಯಾಗಿದೆ.
ಸರಕಾರದ ಈ ನಿಧರ್ಾರದಿಂದ ಸುರತ್ಕಲ್ ನಿಂದ ಕೊಟ್ಟಾರ ಚೌಕಿಯ ವರೆಗೆ ಇದ್ದ 47 ಬಾರ್ ಗಳು ಮತ್ತು 11 ಬಾರ್ ಎಂಡ್ ರೆಸ್ಟೋರೆಂಟ್ ಗಳು ಬಂದ್ ಆಗಿವೆ. ಬಾರ್ ಎಂಡ್ ರೆಸ್ಟೋರೆಂಟ್ ಗಳಲ್ಲಿ ಕೇವಲ ಆಹಾರಗಳನ್ನು ಮಾತ್ರ ಗ್ರಾಹಕರಿಗೆ ನೀಡಬಹುದಾಗಿದೆ. ಇದರಿಂದ ಬಾರ್ ಹೊರಗೆ ಬಿಕ್ಷುಕರ ಸಂಖ್ಯೆ ಕೂಡ ಕಡಿಮೆಯಾಗಿದೆ.
ಹೆದ್ದಾರಿಯ ಪಕ್ಕದಲ್ಲಿ ಮದ್ಯದಂಗಡಿಗಳು ಇದ್ದ ಕಾರಣ ಅಪಘಾತಗಳ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದ್ದ ಕಾರಣ ಈ ನಿಯಮವನ್ನು ತರಲು ಕೇಂದ್ರ ಸರಕಾರ ಸಾಕಷ್ಟು ಯೋಚಿಸಿ ಈ ತೀಮರ್ಾನವನ್ನು ಜಾರಿಗೆ ತಂದಿತ್ತು. ಬಾರ್ ಮಾಲೀಕರು ಈ ನಿಯಮದಿಂದ ಅನಿವಾರ್ಯವಾಗಿ ತಮ್ಮ ಅಂಗಡಿಗಳನ್ನು ಬೇರೆಡೆ ಸ್ಥಳಾಂತರಿಸುವ ಪ್ರಕ್ರಿಯೆಗೆ ಮುಂದಾಗಬೇಕಿದೆ ಅಥವಾ ರಾಜ್ಯ ಸರಕಾರ ಇವರ ಸಹಾಯಕ್ಕೆ ಮುಂದಾಗುತ್ತೋ ಎಂದು ಕಾದು ನೋಡಬೇಕಿದೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search