ಬಾಂಗ್ಲಾ ಉಗ್ರರ ನಾಡಾಗುತ್ತಿದೆಯೇ ಪಶ್ಚಿಮ ಬಂಗಾಳ? ಮತ್ತೊಬ್ಬ ಶಂಕಿತ ಉಗ್ರನ ಬಂಧನ
ಕೋಲ್ಕತ್ತಾ: ಕಳೆದ ಮಂಗಳವಾರವಷ್ಟೇ ಬಾಂಗ್ಲಾದೇಶದ ಅನ್ಸಾರುಲ್ಲಾ ಬಾಂಗ್ಲಾ ಟೀಮ್ ಉಗ್ರ ಸಂಘಟನೆ ಇಬ್ಬರು ಸೇರಿ ಮೂವರು ಶಂಕಿತ ಉಗ್ರರನ್ನು ಬಂಧಿಸಿದ್ದ ಬೆನ್ನಲ್ಲೇ ಮತ್ತೊಬ್ಬ ಉಗ್ರನನ್ನು ಬಂಧಿಸಲಾಗಿದ್ದು, ಪಶ್ಚಿಮ ಬಂಗಾಳ ಬಾಂಗ್ಲಾದೇಶಿ ಉಗ್ರರ ಬೀಡಾಗುತ್ತಿದೆಯೇ ಎಂಬ ಪ್ರಶ್ನೆ ಕಾಡುವಂತಾಗಿದೆ.
ಕೋಲ್ಕತ್ತಾದ ಸೀಲ್ದಾಹ್ ರೈಲು ನಿಲ್ದಾಣದ ಬಳಿ ಬಾಂಗ್ಲಾದ ಬೆನಾಪೋಲ್ ಎಂಬ ಪ್ರದೇಶ ನಿವಾಸಿ ಸಹಾದತ್ ಹುಸೇನ್ (26) ಎಂಬ ಶಂಕಿತ ಉಗ್ರನನ್ನು ವಿಶೇಷ ಪೊಲೀಸ್ ಕಾರ್ಯಾಚರಣೆ ಪಡೆ ಬಂಧಿಸಿದೆ.
ಈತನು ಸಹ ಬಾಂಗ್ಲಾದ ನಿಷೇಧಿತ ಉಗ್ರ ಸಂಘಟನೆ ಅನ್ಸಾರುಲ್ಲ ಬಾಂಗ್ಲಾ ಟೀಮ್ ನ ಉಗ್ರ ಎಂದು ತಿಳಿದುಬಂದಿದೆ.
ಆತ ಕೋಲ್ಕತ್ತಾ ಸೇರಿ ದೇಶಾದ್ಯಂತ ಓಡಾಡುವ ಲೆಕ್ಕಾಚಾ ಹಾಕಿದ್ದು, ನಕಲಿ ಆಧಾರ್ ಕಾರ್ಡ್, ಚುನಾವಣೆ ಗುರುತಿನ ಚೀಟಿ, ತಂಗಲು ಲಾಡ್ಜ್ ಸೇರಿ ಹಲವು ಸೌಲಭ್ಯ ಪಡೆಯಲು ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಾಯನ್ ಗಾಝಿ ಹಾಗೂ ಶೋಪೋನ್ ಬಿಸ್ವಾಸ್ ಎಂಬ ಮತ್ತಿಬ್ಬರು ಉಗ್ರರು ನೆಲೆಸಿರುವ ಕುರಿತು ಮಾಹಿತಿ ಇದ್ದು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಅನ್ಸಾರುಲ್ಲ ಬಾಂಗ್ಲಾ ಟೀಮ್ ನೇರವಾಗಿ ಅಲ್ ಖೈದಾ ಉಗ್ರ ಸಂಘಟನೆ ಜತೆಗೆ ಸಂಪರ್ಕ ಹೊಂದಿರುವ ಕಾರಣ ಈ ಉಗ್ರರು ಭೀತಿ ಹುಟ್ಟಿಸಿದ್ದು, ಪಶ್ಚಿಮ ಬಂಗಾಳ ಉಗ್ರರ ಬೀಡಾತ್ತಿದೆಯೇ ಎಂಬ ದುಗುಡ ಕಾಡುತ್ತಿದೆ.
Leave A Reply