ಮೋದಿ ವಿರೋಧಿಗಳಿಗೊಂದು ಕಹಿ ಸುದ್ದಿ, ಮುಂದಿನ ವರ್ಷ ಶೇ.8 ತಲುಪಲಿದೆ ಜಿಡಿಪಿ!
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ, ಜಿಎಸ್ಟಿ ಜಾರಿಗೊಳಿಸುತ್ತಲೇ ಅವರ ಖ್ಯಾತಿ ವಿಶ್ವವಿಖ್ಯಾತವಾಯಿತು. ಅದೇ ದೇಶದಲ್ಲಿರುವ ಕೆಲವು ರಾಜಕೀಯ ಪಕ್ಷಗಳಿಗೆ, ಮೋದಿ ವಿರೋಧಿಗಳಿಗೆ ಉರಿಯಿತು. ಆದರೆ ಟೀಕೆ ಮಾಡಲು ಕಾರಣ ಬೇಕಲ್ಲ, ಅದಕ್ಕಾಗಿಯೇ ತುಸು ಜಿಡಿಪಿ ಕುಸಿದಿದ್ದನ್ನೇ ದೊಡ್ಡದು ಮಾಡಿ ಮೋದಿ ಅವರನ್ನು ತೆಗಳಿದರು. ನೋಡಿ, ಮೋದಿ ಅವರು ನೋಟು ನಿಷೇಧ ಮಾಡಿದರು, ಜಿಎಸ್ಟಿ ಜಾರಿಗೊಳಿಸಿದರು. ಅದಕ್ಕಾಗಿಯೇ ಜಿಡಿಪಿ ಕುಸಿದಿದೆ. ನೋಡ್ತಿರಿ, ದೇಶದ ಆರ್ಥಿಕ ವ್ಯವಸ್ಥೆ ಮಣ್ಣುಮುಕ್ಕುತ್ತಿದೆ ಎಂದು ಬೊಬ್ಬೆ ಹಾಕಿದರು.
ಆದರೆ, ಈ ಹುಸಿ ಟೀಕೆಯನ್ನೂ ಅವರು ನುಂಗಿಕೊಳ್ಳುವ, ಗಂಟಲಲ್ಲೇ ಸಿಕ್ಕಿಕೊಂಡು ಕೆಮ್ಮುವ ಸ್ಥಿತಿ ದೂರದಲ್ಲಿಲ್ಲ.
ಹೌದು, ಅಮೆರಿಕದ ವಾಲ್ ಸ್ಟ್ರೀಟ್ ವಹಿವಾಟು ಸಂಸ್ಥೆ ಗೋಲ್ಡ್ ಮನ್ ಸಾಚ್ಸ್ ಸಂಸ್ಥೆ ಪ್ರಕಾರ ಮುಂದಿನ ವಿತ್ತೀಯ ವರ್ಷದಲ್ಲಿ ಭಾರತದ ಜಿಡಿಪಿ ಶೇ.8ರಷ್ಟು ತಲುಪುತ್ತದೆ ಎಂದು ಹೇಳಿದೆ.
ಕೇಂದ್ರ ಸರ್ಕಾರ ಕಳೆದ ತಿಂಗಳು 2.11 ಲಕ್ಷ ಕೋಟಿ ರೂಪಾಯಿ ಬ್ಯಾಂಕುಗಳ ಮರುಬಂಡವಾಳ ಹೂಡಿಕೆ ಮಾಡುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ ದೇಶದ ಜಿಡಿಪಿ ಶೇ.8 ತಲುಪಲಿದೆ ಎಂದು ಸಂಸ್ಥೆ ತಿಳಿಸಿದೆ.
ದೇಶದಲ್ಲಿ ಬ್ಯಾಂಕುಗಳಿಂದ ಆದಾಯ ಹೆಚ್ಚಲಿದ್ದು, ಷೇರು ಮಾರುಕಟ್ಟೆಯ ನಿಫ್ಟಿ 11,600 ಅಂಕಗಳ ದಾಖಲೆ ಮೊತ್ತದ ಏರಿಕೆಯಾಗಲಿದ್ದು, ಇದು ಸಹ ಜಿಡಿಪಿ ಏರಿಕೆಗೆ ಕಾರಣವಾಗಲಿದೆ ಎಂದು ವರದಿ ಮಾಡಿದೆ.
ನೋಟು ನಿಷೇದ ಹಾಗೂ ಜಿಎಸ್ಟಿಯಿಂದ ಆರ್ಥಿಕತೆಗೆ ತುಸು ಹೊಡೆತ ಬಿದ್ದರೂ, ಇವು ಆರ್ಥಿಕ ಸುಧಾರಣೆಯ ಭಾಗವೇ ಆಗಿರುವುದರಿಂದ ದೇಶದ ಜಿಡಿಪಿ ಹೆಚ್ಚಲಿದೆ ಎಂದು ತಿಳಿಸಿದೆ.
Leave A Reply