ವಂದೇ ಮಾತರಂ ಹಾಡಿದರೆ ಬಹಿಷ್ಕಾರ ಹಾಕಿದ ಮುಸ್ಲಿಂ ಮೂಲಭೂತವಾದಿಗಳೇ, ಇದೆಂಥ ಅಸಹಿಷ್ಣುತೆ?
ಲಖನೌ: ದೇಶದ ಯಾವುದೇ ಮೂಲೆಯಲ್ಲಿ ವಿಚಾರವಾದಿಗಳ ಹತ್ಯೆಯಾಗಲಿ, ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳಲ್ಲೇ ಹಲ್ಲೆಗಳಾಗಲಿ, ಯಾರೋ ಮುಸ್ಲಿಮರನ್ನು ಹತ್ಯೆ ಮಾಡಿದರೂ ಪ್ರಧಾನಿ ನರೇಂದ್ರ ಮೋದಿ ಅವರೇ ಅದನ್ನು ಮಾಡಿದ್ದಾರೆ ಎಂದು ಘೀಳಿಡುವವರಿದ್ದಾರೆ. ಸಣ್ಣ ಟೀಕೆ ವ್ಯಕ್ತವಾದರೂ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಬೊಬ್ಬೆ ಹಾಕುತ್ತಾರೆ. ಆದರೆ ಉತ್ತರ ಪ್ರದೇಶದ ಆಗ್ರಾದಲ್ಲಿ ಮುಸ್ಲಿಂ ಕುಟುಂಕ್ಕೆ ಆದ ಅನ್ಯಾಯ ಪ್ರಶ್ನಿಸುವ ತಾಕತ್ತು, ಗುಂಡಿಗೆ ಮಾತ್ರ ಯಾರಿಗೂ ಇಲ್ಲ.
ಹೌದು, ಆಗ್ರಾದ ಅಜಂಪುರ ಎಂಬಲ್ಲಿ ವಾಸಿಸುತ್ತಿರುವ ಗುಲ್ಚಮನ್ ಶೇರ್ವಾನಿ ಮುಸ್ಲಿಂ ಎಂಬ ಕುಟುಂಬಕ್ಕೆ ಇಸ್ಲಾಂನ ಮೂಲಭೂತವಾದಿಗಳೇ ಫತ್ವಾ ಹೊರಡಿಸಿದ್ದಾರೆ. ಶಾಲೆಯಿಂದ ಆತನ ಮಕ್ಕಳನ್ನು ಶಾಳೆಯಿಂದ ಹೊರಹಾಕಿದ್ದಾರೆ.
ಅಷ್ಟಕ್ಕೂ ಮುಸ್ಲಿಂ ಶೇರ್ವಾನಿ ಕುಟುಂಬ ಮಾಡಿರುವ ತಪ್ಪಾದರೂ ಏನು ಗೊತ್ತಾ?
ಗುಲ್ಚಮನ್ ಶೇರ್ವಾನಿ ಕುಟುಂಬಕ್ಕೆ ಎಲ್ಲಿಲ್ಲದ ದೇಶಭಕ್ತಿ. ಹಾಗಾಗಿಯೇ ಇಡೀ ಕುಟುಂಬ ಭಾರತದ ಧ್ವಜ ಹೋಲುವ ಬಟ್ಟೆ ತೊಡುತ್ತಾರೆ. ವಂದೇ ಮಾತರಂ ಹಾಡುತ್ತಾರೆ. ಆದರೆ ಇದೇ ಮೂಲಭೂತವಾದಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಬಹಿಷ್ಕಾರ ಹಾಕಿದ್ದಾರೆ.
ಇದೇ ಕಾರಣಕ್ಕೇ, ಅಜಂಪುರದ ಮುಸ್ಲಿಂ ಶಾಲೆಯೊಂದರಿಂದ ಶೇರ್ವಾನಿಯ ಇಬ್ಬರು ಮಕ್ಕಳನ್ನು ಹೊರಹಾಕಿದ್ದಾರೆ. ಅವರು ವಂದೇ ಮಾತರಂ ಹಾಡುವುದರಿಂದ ಸಮುದಾಯದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅನಿವಾರ್ಯವಾಗಿ ಮಕ್ಕಳನ್ನು ಹೊರಹಾಕಲಾಗಿದೆ ಎಂದು ಶಾಲೆ ಪ್ರಾಂಶುಪಾಲ ಅಸ್ಲಾಂ ಖಾನ್ ಲಜ್ಜೆಯಿಲ್ಲದೆ ಹೇಳುತ್ತಾರೆ.
ಅಷ್ಟೇ ಅಲ್ಲ, ದೆಹಲಿಯ ಜಾಮಾ ಮಸೀದಿಯ ಮೌಲ್ವಿ ಮೌಲಾನಾ ಅಹ್ಮದ್ ಬುಖಾರಿ, ಶೇರ್ವಾನಿ ವಿರುದ್ಧ ಫತ್ವಾ ಹೊರಡಿಸಿದ್ದಾನೆ. ಶೇರ್ವಾನಿಯನ್ನು “ಕಾಫಿರ್, (ಮುಸ್ಲಿಮೇತರ)” ಎಂದು ಘೋಷಿಸಿದ್ದಾನೆ.
ಇಷ್ಟಾದರೂ ನಾನು ವಂದೇ ಮಾತರಂ ಹಾಡುವುದನ್ನು ನಿಲ್ಲಿಸುವುದಿಲ್ಲ. ದೇಶಭಕ್ತಿ ಸಾರುವ ರಾಷ್ಟ್ರಧ್ವಜದ ಬಟ್ಟೆ ಧರಿಸದೇ ಇರುವುದಿಲ್ಲ ಎಂದು ಶೇರ್ವಾನಿ ದಿಟ್ಟತನ ಮೆರೆದಿದ್ದಾರೆ.
ಆದರೆ ಒಂದು ಮುಸ್ಲಿಂ ಕುಟುಂಬ ವಂದೇ ಮಾತರಂ ಹಾಡಿದ್ದಕ್ಕಾಗಿ ಬಹಿಷ್ಕಾರ ಹಾಕಿದ ಮೂಲಭೂತವಾದಿಗಳ ವಿರುದ್ಧ ಒಬ್ಬನೇ ಒಬ್ಬ ಜಾತ್ಯತೀತವಾದಿ, ಪ್ರಗತಿಪರ, ಬುದ್ಧಿ ಜೀವಿ ಸೊಲ್ಲೆತ್ತುವುದಿಲ್ಲವಲ್ಲ. ನಾಚಿಕೆಯಾಗಬೇಕು. ಛೇ!
Leave A Reply