ನ್ಯಾಯಕ್ಕೆ ಬೆಲೆ ಇಲ್ಲದೆ ಹಿಂದೂಗಳನ್ನು ಹತ್ತಿಕ್ಕುವುದೇ ಉದ್ದೇಶವಾದಾಗ ಉಗ್ರ ‘ಪ್ರತಾಪ’ ತೋರುವುದೊಂದೆ ದಾರಿ
‘ನಿರ್ಭಂಧನೆ ಹೇರಿರುವ ಆದೇಶ ಪತ್ರ ಎಲ್ಲಿದೆ ತೋರಿಸಿ… ಏತಕ್ಕೆ ನಿರ್ಭಂಧನೆ ಹೇಳಿ? ನನ್ನ ಹಕ್ಕನ್ನು ಕಸಿದುಕೊಳ್ಳಲು ನೀವ್ಯಾರು?’
ಇದು ಮೈಸೂರಿನಿಂದ ಹುಣಸೂರಿಗೆ ಹನುಮ ಜಯಂತಿ ಆಚರಿಸಲು ತೆರಳುತ್ತಿದ್ದ ಸಂಸದ ಪ್ರತಾಪ ಸಿಂಹ ಅವರಿಗೆ ಪೊಲೀಸರು ತಡೆ ಒಡ್ಡಿದಾಗ, ಪ್ರತಾಪ್ ಸಿಂಹ ಪೊಲೀಸ್ ಅಧಿಕಾರಿಗಳಿ ಕೇಳಿದ್ದ ಸಾಮಾನ್ಯ ಪ್ರಶ್ನೆ.
ಆದರೆ ಪೊಲೀಸರು ಯಾವುದೆ ಪ್ರಶ್ನೆಗಳಿಗೆ ಉತ್ತರ ನೀಡದೇ ನಿಮ್ಮನ್ನು ಮುಂದೆ ಸಾಗಲು ಬಿಡುವುದಿಲ್ಲ. ಹೋಗಬೇಡಿ ಎಂದು ತಡೆಯುವುದು ಯಾವ ಉದ್ದೇಶಕ್ಕಾಗಿ?. ಒಂದು ವೇಳೆ ಹಿರಿಯ ಅಧಿಕಾರಿಗಳ ಮೌಖಿಕ ಆದೇಶವಿದೆ ಎಂಬುದಾದರೇ ಅದಕ್ಕಾದರೂ ಸೂಕ್ತ ಕಾರಣ ನೀಡಬೇಕಲ್ಲವೇ?. ಹೇಗೂ ಖಾಕಿ ತೊಟ್ಟಿದ್ದೇವೆ ಯಾರನ್ನು ಬೇಕಾದರೂ ಬಂಧಿಸುವ ಹುಂಬ ಧೈರ್ಯವೇ?. ಒಬ್ಬ ಸಂಸದನ್ನನ್ನು ರಾಜ್ಯದ ಪೊಲೀಸರು ಕಾರಣವಿಲ್ಲದೇ ಬಂಧಿಸುವ ಕುರಿತ ಪ್ರಶ್ನೆಗೆ ಉತ್ತರಿಸದೇ ಧರ್ಪ ತೋರುತ್ತಾರೆ ಎಂದ ಮೇಲೆ ಸಾಮಾನ್ಯರ ಗತಿಯೇನು. ಲಕ್ಷಾಂತರ ಜನರ ಪ್ರತಿನಿಧಿಯ ಪ್ರಶ್ನೆಗೆ ಉತ್ತರವಿಲ್ಲದಿದ್ದಾಗ ರಾಜ್ಯದಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆ ನೀಡುವ ಸರ್ಕಾರ ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ.
ಗಲಭೆ ನಡೆಯುವ ಸಂಭವ, ಗಲಾಟೆ ತಡೆಯಲು ಮುನ್ನೆಚ್ಚರಿಕೆ ಎನ್ನುವ ನೆಪದಲ್ಲಿ ಸಂಸದರನ್ನು ಬಂಧಿಸುವುದು ಸರ್ಕಾರದ ದುರುದ್ದೇಶವೇ ಹೊರತು ಬೇರೆನಲ್ಲ. ಅಷ್ಟಕ್ಕೂ ಸಂಸದ ಪ್ರತಾಪ್ ಸಿಂಹ ಹೊರಟ್ಟಿದ್ದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಹನುಮ ಮಾಲಾಧಾರಿಗಳ ಮೆರವಣಿಗೆಯಲ್ಲಿ ಭಾಗವಹಿಸಲು. ಅಲ್ಲಿರುವುದು ಹನುಮ ಭಕ್ತರ ಗಣ. ಮಾಲಾಧಾರಿಗಳು. ಅವರು ಗಲಾಟೆ ಎಬ್ಬಿಸುತ್ತಾರೆ ಎಂದು ಮೊದಲೇ ಷರಾ ಬರೆಯಲಾಗುತ್ತೇ ಎನುವುದಾದರೇ ಇದರ ಹಿಂದೆ ಏನೋ ದುರುದ್ದೇಶವಿರಬೇಕೇ ಅಲ್ಲವೇ? ಸರ್ಕಾರವೇ ಸೂಚನೆ ನೀಡಿತ್ತು ಎಂದಾದರೂ ಪೊಲೀಸರಾದರೂ ಯೋಚನೆ ಮಾಡಬೇಕಿತ್ತಲ್ಲವೇ?
ಸರ್ಕಾರದ ಅಡಿಯಾಳಾಗಿ ಹುಣಸೂರಿನಂತ ಸಣ್ಣ ಪಟ್ಟಣದಲ್ಲಿ ಎಂತಹುದ್ದೇ ಗಲಭೆ, ಗಲಾಟೆ ನಿಯಂತ್ರಿಸುವ ತಾಕತ್ತು ಹೊಂದಿರುವ ನಮ್ಮ ಪೊಲೀಸರು ವಿನಾಕಾರಣ ಮೆರವಣಿಗೆಗೆ ತಡೆ ಒಡ್ಡಿದ್ದು, ಪೊಲೀಸರ ಶೌರ್ಯ, ಪರಾಕ್ರಮಕ್ಕೆ ಮಾಡಿದ ಅವಮಾನ. ಸರ್ಕಾರದ ಆದೇಶವನ್ನು ಸ್ಥಳದಲ್ಲಿನ ಪರಿಸ್ಥಿತಿಗನುಗುಣವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರವಿರುವ ಹಿರಿಯ ಪೊಲೀಸ್ ಅಧಿಕಾರಿಗಳು ರಾಜಕಾರಣಿಗಳ ಅಡಿಯಾಳಾಗಿ ವರ್ತಿಸಿದ್ದು ಮಾತ್ರ ದುರಂತ.
ಹೀಗೆ ಸರ್ಕಾರ ಹಿಂದೂಗಳ ವಿರುದ್ಧ ಅನ್ಯಾಯದ ಮಾರ್ಗದಲ್ಲಿ ಧರ್ಪ ತೋರಿದರೇ ನೆಲೆ ಉಳಿಸಿಕೊಳ್ಳಲು ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗಬೇಕಲ್ಲವೇ. ಹಿಂದೂಗಳನ್ನು, ಹಿಂದೂಪರ ಕಾರ್ಯಕರ್ತರನ್ನು ಸದಾ ಪೀಡಿಸುತ್ತಿರುವ ಸಿದ್ದರಾಮಯ್ಯ ಸರ್ಕಾರ ಇದೀಗ ಮತ್ತೆ ಧಾರ್ಮಿಕ ನಂಬಿಕೆಗಳಿಗೆ ಕೊಳ್ಳಿ ಇಟ್ಟಿದೆ. ಇಷ್ಟಾದ ಮೇಲೂ ಯಾವುದೇ ಸ್ವಾಭಿಮಾನಿ ಹಿಂದೂವಾದರೂ ಸಂಸದ ಪ್ರತಾಪ್ ಸಿಂಹ ಇರುವ ಸ್ಥಳದಲ್ಲಿದ್ದರೂ ಅದಕ್ಕಿಂತ ಉಗ್ರ ಪ್ರತಿರೋಧ ಒಡ್ಡುತ್ತಿದ್ದ. ಅವರು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಎಂದು ಗೌರವದಿಂದ ನಡೆದುಕೊಂಡಿದ್ದಾರೆ. ಸಂವಿಧಾನ ಕಲ್ಪಿಸಿರುವ ಧಾರ್ಮಿಕ ಹಕ್ಕಿನ ಆಧಾರದಲ್ಲೇ ಮೆರವಣಿಗೆ ನಡೆಸಲು ಮುಂದಾದರೂ ಅದಕ್ಕೆ ವಾಮಮಾರ್ಗದಿಂದ ಸರ್ಕಾರ ತಡೆಒಡ್ಡಲು ಮುಂದಾದಾಗ ಯಾವುದೇ ಸಮುದಾಯದ ವ್ಯಕ್ತಿಯೂ ಬಾಯಲ್ಲಿ ಬೆರಳು ಇಟ್ಟುಕೊಂಡು ಸುಮ್ಮನೇ ಕುಳಿತುಕೊಳ್ಳುವುದಿಲ್ಲ.
Leave A Reply