ಅಲೋಶಿಯಸ್ ಕಾಲೇಜ್ ಇರುವುದು ಕಾಶೀಮಠದಿಂದ ಮೂಲಗೇಣಿಯಾಗಿ ಸಿಕ್ಕ ಜಾಗದಲ್ಲಿ! ದಾಖಲೆ ಇದೆ!
ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆಯ ವಿಷಯದಲ್ಲಿ ಒಬ್ಬರು ಬಹಿರಂಗ ಪತ್ರ ನನಗೆ ಮತ್ತು ಜಿತೇಂದ್ರ ಕುಂದೇಶ್ವರರಿಗೆ ಬರೆದಿದ್ದಾರೆ. ಅದು ಬಹಿರಂಗ ದಾರಿಯಲ್ಲಿಯೇ ನನಗೆ ಸಿಕ್ಕಿದೆ. ಅದಕ್ಕೆ ಉತ್ತರ ಕೊಡುವ ಮೊದಲು ನಾನು ನನ್ನ ಬಳಿ ದಾಖಲೆ ಇರುವ ಸಂಗತಿಗಳ ಬಗ್ಗೆ ಮೊದಲು ಬರೆಯಲು ಇಚ್ಚಿಸಿದ್ದೇನೆ. ನಿನ್ನೆ ಆ ರಸ್ತೆ ರಬೀಂದ್ರನಾಥ ಟಾಗೋರ್ ರಸ್ತೆ ಎಂದು 1963 ರಲ್ಲಿಯೇ ನಾಮಕರಣವಾಗಿತ್ತು ಎಂದು ಬರೆದಿದ್ದೆ. ಆ ದಾಖಲೆ ನನ್ನ ಬಳಿ ಇದೆ. ಇವತ್ತು ಇನ್ನೊಂದು ದಾಖಲೆ ಆಧಾರದಲ್ಲಿಯೇ ಬರೆಯುತ್ತಿದ್ದೇನೆ. ಭಾವನಾತ್ಮಕವಾಗಿ ಬಹಿರಂಗ ಪತ್ರ ಬರೆದು ಅದಕ್ಕೆ ಬೇರೆಯವರು ಹೀಯಾಳಿಕೆಯ ಕಮೆಂಟ್ ಬರೆಯುವಂತೆ ಮಾಡುವ ವರ್ಗವೇ ಬೇರೆ. ನನಗೆ ಅದು ಮುಖ್ಯವಲ್ಲ. ಇವತ್ತು ಈ ಎಲೋಶಿಯಸ್ ಕಾಲೇಜ್ ಇದೆಯಲ್ಲ, ಅದು ಯಾರ ಜಾಗ ಎನ್ನುವುದನ್ನು ಬರೆಯುತ್ತಿದ್ದೇನೆ, ಮತ್ತೊಮ್ಮೆ ಹೇಳುತ್ತಿದ್ದೇನೆ, ದಾಖಲೆಯೊಂದಿಗೆ.
ಅಷ್ಟಕ್ಕೂ ನಾನೇ ಸುಮ್ಮಸುಮ್ಮನೆ ಈ ವಿಷಯವನ್ನು ಕೆದಕಿ ಹೋದದ್ದಲ್ಲ. ಯಾರು ನನಗೆ ಬಹಿರಂಗ ಪತ್ರ ಬರೆದರೋ ಅವರು ಅದನ್ನು ಅರ್ಥ ಮಾಡಿಕೊಳ್ಳಬೇಕು. ಎಲೋಶಿಯಸ್ ಕಾಲೇಜಿನ ಪರವಾಗಿ ಕೊನೆ ಘಳಿಗೆಯಲ್ಲಿ ನಿಂತು ಇನ್ನೇನೂ ಎಲ್ಲ ಕಾನೂನು ಪ್ರಕ್ರಿಯೆ ನಡೆದು ನಾಳೆ ನಾಮಫಲಕ ಉದ್ಘಾಟನೆ ಎಂದ ತಕ್ಷಣ ಹಿಂದಿನ ದಿನ ಅಶಾಂತಿ ಆಗುತ್ತೆ ಎಂದು ತಡೆಯಾಜ್ಞೆ ತಂದದ್ದು ನಾನಾ, ಜೆ. ಆರ್ .ಲೋಬೊ ಅವರಾ? ಎರಡು ಪತ್ರಿಕೆಗಳಲ್ಲಿ ಪ್ರಕಟನೆ ಹಾಕಿ ಮೂವತ್ತು ದಿನಗಳೊಳಗೆ ಅದಕ್ಕೆ ಆಕ್ಷೇಪ ಇದ್ದರೆ ಸಲ್ಲಿಸಿ ಎಂದು ಕೇಳುವಾಗ ಮಲಗಿದ್ದು ನಾನಾ ಅಥವಾ ನೀವು ಯಾರ ಪರವಾಗಿ ವಾದ ಮಂಡಿಸಿದ್ದಿರೋ ಅವರಾ? ಆ ವಿಷಯ ವಿವರವಾಗಿ ಮತ್ತೆ ಬರೆಯುತ್ತೇನೆ. ಮೊದಲು ಎಲೋಶಿಯಸ್ ಕಾಲೇಜು ಇರುವ ಜಾಗದ ವಿಷಯಕ್ಕೆ ಬರೋಣ.
ಆ ಎಷ್ಟು ಜಾಗ ಇರುವುದು ನಾಲ್ಕು ಎಕರೆ 54 ಸೆಂಟ್ಸ್. ಅದರಲ್ಲಿ ನಾಲ್ಕು ಎಕರೆ 22 ಸೆಂಟ್ಸ್ ಇರುವುದು ಕೊಡಿಯಾಲ್ ಬೈಲ್ 89-ಎ ಗ್ರಾಮ ಸವರ್ೇ ನಂಬ್ರ 182/2 ಮತ್ತು 210/ಪಿ-2 ರಲ್ಲಿ. ಅದು ಕಾಶೀ ಮಠಾಧೀಶರಾದ ಪರಮ ಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಗಳ ಹೆಸರಿನಲ್ಲಿದೆ. ಅಂದರೆ ಅದರ ಮೂಲ ದಾರರು ಜಿಎಸ್ ಬಿ ಸಮಾಜದ ಪರಮಗುರುಗಳು.
ಅದನ್ನು ಅವರು ಕೆಜೆಎ ಅಂದರೆ ಕರ್ನಾಟಕ ಜೇಸ್ಯುಸ್ ಎಸೋಸಿಯೆಶನ್ ಅವರಿಗೆ ಮೂಲಗೇಣಿಯಾಗಿ ಕೊಟ್ಟಿದ್ದರು. ಅದಕ್ಕೆ ಬದಲಾಗಿ ಕೆಜೆಎ ಕಡೆಯಿಂದ ಪ್ರತಿ ವರ್ಷ ಸಂಸ್ಥಾನದ ಮಠಕ್ಕೆ ಒಂದು ಡಬ್ಬ ದೀಪದ ಎಣ್ಣೆ ಅಂದರೆ ಎಳ್ಳೆಣ್ಣೆ ಕೊಡಬೇಕು ಎಂದು ಒಪ್ಪಂದವಾಗಿತ್ತು. ತಮಗೆ ಭೂಮಿ ಸಿಕ್ಕಿದ ನಂತರ ಕೆಜೆಎ ನವರು ಕೆಜೆಇ ಎಂದು ಮತ್ತೊಂದು ಸೊಸೈಟಿಯನ್ನು ಪ್ರಾರಂಭಿಸಿದರು. ಕೆಜೆಇ ಎಂದರೆ ಕರ್ನಾಟಕ ಜೆಸ್ಯೂಸ್ ಎಜುಕೇಶನ್. ಈಗ ನಾನು ಕೇಳುವ ಪ್ರಶ್ನೆ, ಕೆಜೆಇ ಒಪ್ಪಂದದಂತೆ ನಡೆದುಕೊಂಡಿದೆಯಾ? ಕೆಜೆಇ ಇವರು ಕಳೆದ ಎಷ್ಟು ದಶಕಗಳಿಂದ ಮೂಲಗೇಣಿಯಾಗಿ ಕೊಡಬೇಕಾಗಿದ್ದ ಪ್ರತಿವರ್ಷದ ಒಂದು ಡಬ್ಬ ದೀಪದ ಎಣ್ಣೆ ಎಷ್ಟು ಕೊಟ್ಟಿದ್ದಾರೆ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ನನಗೆ ಗೊತ್ತಿದ್ದ ಪ್ರಕಾರ ಇಲ್ಲವೇ ಇಲ್ಲ. ಆವತ್ತಿನ ಕಾಲಕ್ಕೆ ಒಂದು ಡಬ್ಬ ದೀಪದ ಎಣ್ಣೆ ಎಂದರೆ ಅದು ದೊಡ್ಡ ವಿಷಯವಾಗಿತ್ತು. ಈಗ ಬಿಡಿ, ಇವರ ದೀಪದ ಎಣ್ಣೆಗಾಗಿ ನಮ್ಮ ಕಾಶೀಮಠವೇನೂ ಕಾದು ಕುಳಿತಿಲ್ಲ. ಆದರೆ ಒಪ್ಪಂದ ಎಂದರೆ ಒಪ್ಪಂದ. ಇವರು ಕೊಡಲು ತಪ್ಪಿದ್ದಾರೆ ಎಂದರೆ ಗೇಣಿ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಗ್ಯಾರಂಟಿ. ಅದು ಉಲ್ಲಂಘಿಸಿರುವುದರಿಂದ ಕಾನೂನು ಪ್ರಕಾರ ಮಠದಿಂದ ಏನು ಕ್ರಮ ತೆಗೆದುಕೊಳ್ಳಬಹುದು ಎಂದು ನಾವು ಪರಿಶೀಲಿಸಬೇಕಾಗಬಹುದು. ಅಷ್ಟಕ್ಕೂ ಎಲೋಶಿಯಸ್ ಕಾಲೇಜಿನವರು ಧರ್ಮಕ್ಕೆ ಏನು ಕಲಿಸುತ್ತಿಲ್ಲ. ಅಲ್ಲಿ ಲಾಭ ಇದೆ. ಇಷ್ಟಾಗಿ ಅವರು ತಾವು ಯಾವ ಜಾಗದಲ್ಲಿದ್ದಾರೆ ಎನ್ನುವುದನ್ನು ಮರೆಯಬಾರದು. ಇನ್ನು ಮಕ್ಕಳ ವಿಚಾರ. ಅವರಿಗೆ ಗುರುಗಳು ಯಾವುದಕ್ಕೆ ಪ್ರತಿಭಟನೆ ಮಾಡಲು ಹೇಳುತ್ತಾರೋ ಅದಕ್ಕೆ ಮಾಡುತ್ತಾರೆ. ನಾಳೆ ದೇಶದ ವಿಷಯ, ಭ್ರಷ್ಟಾಚಾರದ ವಿರುದ್ಧದ ಹೋರಾಟ ಅಥವ ಎಬಿವಿಪಿ ಕರೆಕೊಟ್ಟ ವಿಚಾರದಲ್ಲಿ ಹೋರಾಟ ಎಂದು ಗೊತ್ತಾದರೆ ಇಲ್ಲಿನ ಆಡಳಿತ ಮಂಡಳಿ ಪ್ರತಿಭಟನೆಗೆ ಹೋದರೆ ಎಚ್ಚರಿಕೆ ಎಂದು ಮಕ್ಕಳಿಗೆ ವಾರ್ನ ಮಾಡುತ್ತದೆ. ಹೋದ ಮಕ್ಕಳಿಗೆ ನೋಟಿಸ್ ಕೊಡಲಾಗುತ್ತದೆ. ಈಗ ತಮ್ಮದು ತಪ್ಪಿದರೂ ಹೋರಾಟ ಮಾಡಿ ಎನ್ನುತ್ತದೆ. ಅದಕ್ಕೆ ಭಾವನಾತ್ಮಕವಾಗಿ ಸ್ಪಂದಿಸುವ ಕೆಲವು ಹಳೆ ವಿದ್ಯಾರ್ಥಿಗಳು ನನಗೆ ಬಹಿರಂಗ ಪತ್ರ ಬರೆಯುತ್ತಾರೆ, ವಿಷಯ ಗೊತ್ತಿಲ್ಲದೇ