ಪರೇಶನ ಸಾವಿನ ತನಿಖೆ ಸಿಬಿಐಗೆ ವಹಿಸಲು ಇಷ್ಟೆಲ್ಲ ಆಗಬೇಕಿತ್ತೇ ಸಿಎಂ ಸಿದ್ದರಾಮಯ್ಯ?
ಪರೇಶ್ ಮೇಸ್ತ
ಹೊನ್ನಾವರದ ಅಮಾಯಕ ಅಪ್ಪಟ್ಟ ಹಿಂದೂ ಯುವಕ. ಈತ ಡಿಸೆಂಬರ್ 6ರಂದು ನಡೆದ ಗಲಭೆಯಂದು ಕಾಣೆಯಾಗುತ್ತಾನೆ. ಅಂದು ಸಂಜೆ ಅಜಾದ್ ಅಣ್ಣಿಗೇರಿ ಎಂಬ ದುರುಳ ಮತ್ತು ಕೆಲ ಮುಸ್ಲಿಂ ಯುವಕರು ಲಾಂಗ್ ಮಚ್ಚು, ಹಿಡಿದು ರಸ್ತೆಯಲ್ಲಿ ಅಡ್ಡಾಡಿರುವ ವಿಡಿಯೋಗಳು ಹರಿದಾಡಿವೆ. ಡಿಸೆಂಬರ್ 8ರಂದು ಆತನ ಶವ ಕೆರೆಯಲ್ಲಿ ಪತ್ತೆಯಾಗುತ್ತದೆ.
ನಂತರ ಶಾಂತಿಪ್ರಿಯ ಹೊನ್ನಾವರ, ಕುಮಟಾ, ಶಿರಸಿಯಲ್ಲಿ ಹಿಂದೂಗಳು ಬೀದಿಗೆ ಇಳಿಯುತ್ತಾರೆ. ಸರ್ಕಾರ ಮತ್ತದೆ ಕ್ಲೀನ್ ಚೀಟ್ ಕೊಡುವ, ಸಹಜ ಸಾವು ಎಂಬ ತಲೆಬುಡವಿಲ್ಲದ ವರದಿ ಸಿದ್ಧಪಡಿಸುತ್ತದೆ. ಆತನದ್ದು ಸಹಜ ಸಾವು ಎನ್ನುತ್ತದೆ. ಆದರೆ ಇದೀಗ ಸಿಬಿಐ ತನಿಖೆಗೆ ಪರೇಶ್ ಮೇಸ್ತಾ ಸಾವಿನ ಪ್ರಕರಣದ ತನಿಖೆ ವಹಿಸಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಕೆಲವು ಪ್ರಶ್ನೆಗಳು ಕೇಳಲೇಬೇಕು.
*ಪರೇಶ್ ಮೇಸ್ತ ಸಾವಿನ ನಂತರ ಗಲಭೆ ನಿಯಂತ್ರಿಸಲು ಸರ್ಕಾರಕ್ಕೆ ತಾಕತ್ತು ಇರಲಿಲ್ಲವೇ?
*ಮೇಸ್ತ ಹೆಣ ಸಿಕ್ಕಿದ್ದ ಸುದ್ದಿ ಬಚ್ಚಿಟ್ಟು ಕಾರ್ಯಕ್ರಮ ಮಾಡುವ ಹೀನ ಮನಸ್ಥಿತಿಗೆ ನಿಮ್ಮ ಸರ್ಕಾರವೇಕೆ ಇಳಿಯಿತು. ಗಲಭೆ ಸೃಷ್ಟಿಯಾಗುತ್ತದೆ ಎಂಬ ಕನಸೇನಾದರೂ ಆಡಳಿತಾಂಗಕ್ಕೆ ಬಿದ್ದಿತ್ತಾ?
*ಗಲಭೆ ಕುಮಟಾ, ಶಿರಸಿ, ಕಾರವಾರ ಎನ್ನುತ್ತಾ ಇಡೀ ಉತ್ತರ ಕನ್ನಡ ಜಿಲ್ಲೆಗೆ ಹರಡುವುದನ್ನು ನಿಯಂತ್ರಿಸಲು ಅದೇಕೇ ಹಿಂದೇಟು ಹಾಕಲಾಯಿತು?
* ಮಾಧ್ಯಮಗಳಿಂದ ಮೇಸ್ತ ಸಾವಿನ ಸುದ್ದಿ ದೂರವಿಡಲು ವ್ಯವಸ್ಥಿತವಾಗಿ ರವಿ ಬೆಳಗೆರೆ ಅವರನ್ನು ಆತುರದಲ್ಲಿ ಬಂಧಿಸಲಾಯಿತೇ?
* ಫೊರೇನಿಕ್ಸ್ ವರದಿಯನ್ನು, ಸಾಮಾಜಿಕ ಜಾಲತಾಣಗಳು, ಹಿಂದೂಪರ ಸಂಘಟನೆಗಳು ಮತ್ತು ಹಿಂದೂ ಮುಖಂಡರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಧಾವಂತವೇನಿತ್ತು?ಜಿಲ್ಲಾ ಪೊಲೀಸ್ ಇಲಾಖೆ ತನ್ನ ಅಂತಸತ್ವವೇ ಕಳೆದುಕೊಂಡಂತೆ ಏಕೆ ವರ್ತಿಸಿತು?.
* ಫೊರೇನಿಕ್ಸ್ ವರದಿಯನ್ನು ಯಾರೋ ಕೇಳಿದ ಪ್ರಶ್ನೆಗಳಿಗೆ ತಕ್ಕಂತೆ ಪ್ರಶ್ನೋತ್ತರ ಮಾಲೆ ತಯಾರಿಸಿ ಬಿಡುಗಡೆ ಮಾಡುವ ಅಗತ್ಯವೇನಿತ್ತು? ನಾವು ತುಂಬಾ ಸಾಚಾ ಎಂಬುದನ್ನು ತೋರಿಸುವುದಕ್ಕೋ?
* ಒಂದೆಡೆ ಮರಣೋತ್ತರ ಪರೀಕ್ಷೆ ವರದಿ ಬಿಡುಗಡೆ ಮಾಡಲಾಗುತ್ತೆ. ಮತ್ತೊಂದೆಡೆ ಮೇಸ್ತಾ ಹತ್ಯೆ ಕುರಿತು ತನಿಖೆಯಲ್ಲಿ ಕೆಲ ಆರೋಪಿಗಳನ್ನು ಬಂಧಿಸಲಾಗಿದೆ ಎನ್ನುತ್ತಾರೆ ಪೊಲೀಸರು. ಹಾಗಾದ್ರೆ ವರದಿ ಸುಳ್ಳೋ? ಪೊಲೀಸರು ಬಂಧಿಸಿದ್ದೇನೆ ಎಂದು ಹೇಳುತ್ತಿರುವುದು ಸುಳ್ಳೋ?
*ಇದೀಗ ರಾಜ್ಯದ ಪೊಲೀಸರ ಆತ್ಮಸ್ಥೈರ್ಯ ಕಸಿಯುವಂತೆ , ಇಷ್ಟೆಲ್ಲಾ ಗಲಭೆ ನಡೆದ ನಂತರ ಸಿಬಿಐ ತನಿಖೆಗೆ ವಹಿಸಿದ್ದೇವೆ ಎಂಬ ದುರುಳ ನೀತಿಯನ್ನೇಕೆ ರೂಪಿಸಿದ್ದೀರಿ.
* ಪರೇಶ್ ಮೇಸ್ತಾ ಹತ್ಯೆ ಪ್ರಕರಣವನ್ನು ಯಶಸ್ವಿಯಾಗಿ ಮುಚ್ಚಿಹಾಕಿ, ಎಲ್ಲ ಮಾಹಿತಿಗಳನ್ನು ನಾಶ ಮಾಡಿ, ಇದೀಗ ಸಿಬಿಐಗೆ ವಹಿಸಿದರೇ ನ್ಯಾಯ ಸಿಗುತ್ತದೆಯೇ?. ಆ ಅಮಾಯಕ ಹಿಂದೂವಿನ ಕುಟುಂಬಕ್ಕೆ ನ್ಯಾಯ ದೊರೆಯುತ್ತದೆಯೇ?
*ಇಷ್ಟೆಲ್ಲಾ ವರದಿಗಳು, ಹೋರಾಟ, ಪ್ರತಿಭಟನೆ, ರಾಜ್ಯ ಸರ್ಕಾರದ ತನಿಖೆಗಳು ಆದ ನಂತರ ಸಿಬಿಐಗೆ ವಹಿಸಿದರೇ,ಸೂಕ್ತನ್ಯಾಯ ಸಿಗುವ ಅನುಮಾನ ಮೂಡುತ್ತೇ?. ಕೆಲ ಸರ್ಕಾರದ ಅಡಿಯಾಳುಗಳು ಸಾಕ್ಷ್ಯ ನಾಶ ಮಾಡಿರುವ ಶಂಕೆಯೂ ಇದೆ. ಇಷ್ಟೆಲ್ಲಾ ಆದ ನಂತರವೂ ಮತ್ತೆ ಮೇಸ್ತ ಸಾವಿಗೆ ನ್ಯಾಯ ಹುಡುಕುವುದು ಕಷ್ಟವಾಗಬಹುದಲ್ಲವೇ?
ಇಂತಹ ಹಲವು ಪ್ರಶ್ನೆಗಳ ಮಧ್ಯೆ ನಿದ್ದೆಯಲ್ಲಿರುವ ಸಿದ್ದರಾಮಯ್ಯ ಸರ್ಕಾರ ತನ್ನ ಕ್ಲೀನ್ ಚೀಟ್ ಕೊಡುವ ಹೀನ ಕೃತ್ಯಕ್ಕೆ ಇಳಿಯುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ ಸರ್ಕಾರದ ಅಡಿಯಾಳಾಗಿ ವರ್ತಿಸಿದ ಅಧಿಕಾರಿಗಳು ಮತ್ತು ವೈದ್ಯರ ಕೆಲವು ಇಬ್ಬಂದಿತನಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಎಲ್ಲ ಪ್ರಶ್ನೆಗಳು ಸಿದ್ದರಾಮಯ್ಯ ಸರ್ಕಾರ ಯಶಸ್ವಿಯಾಗಿ ಮೇಸ್ತ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದೇ ಎಂದರ್ಥ. ಅಷ್ಟೇ ಮತ್ತೇನಲ್ಲ.
Leave A Reply