ಕಾಂಗ್ರೆಸ್ ಕನಸಿಗೆ ಎಳ್ಳುನೀರು ಮೋದಿ ಒರೆಸಿದರು ಜನರ ಕಣ್ಣೀರು..!
ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ನಂತರ ಬಿಜೆಪಿ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ರಾಷ್ಟ್ರಮಟ್ಟದ ನಾಯಕರು ವಿಜಯೋತ್ಸವದಲ್ಲಿ ಮಿಂದೆದ್ದರು. ಅತ್ತ ಗೆಲುವಿನ ಕಹಳೆ ಮೊಳಗುತ್ತಲೇ ದೆಹಲಿಯಲ್ಲಿ ಅಮಿತ್ ಶಾ ಸಹಸ್ರಾರು ಕಾರ್ಯಕರ್ತರ ಮಧ್ಯೆ ನಿಂತು ಸಿಹಿ ಹಂಚಿ ಸಂಭ್ರಮಿಸಿದರು. ಆದರೆ ಪ್ರಧಾನ ಸೇವಕ ಪ್ರಜಾಪ್ರಭುತ್ವದ ದೇಗುಲದಲ್ಲಿ ವಿರೋಧ ಪಕ್ಷಗಳ ಮಾತು ಆಲಿಸುತ್ತಿದ್ದರು. ಅದೇ ಅಲ್ಲವೇ ಪ್ರಧಾನ ಸೇವಕನ ಲಕ್ಷಣ.
ಇಡೀ ರಾಷ್ಟ್ರಾಧ್ಯಂತ ಬಿಜೆಪಿ ಮುಖಂಡರು ವಿಜಯದ ಗುಂಗಿನಲ್ಲಿ ನಾನಾ ಲೆಕ್ಕಾಚಾರ ಹಾಕುತ್ತಾ ಕುಳಿತ್ತಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತ್ರ ಕಾರ್ಯಕರ್ತರಿಗೆ ಒಂದೆರಡು ಸ್ಫೂರ್ತಿಯ ಮಾತುಗಳನ್ನಾಡಿ, ಮತದಾರರಿಗೆ ವಂದನೆ ಸಲ್ಲಿಸಿ ವಿಜಯದ ಸಂಭ್ರವನ್ನು ಮುಗಿಸಿದ್ದರು. ಗೆದ್ದ ಖುಷಿಯಲ್ಲಿ ಅವರು ಪಕ್ಷದ ಮುಖಂಡರ ಜತೆ ಪಾರ್ಟಿ ಮಾಡದೇ ನೊಂದವರ ಕಣ್ಣೀರು ಒರೆಸಲು ತಡರಾತ್ರಿಯೇ ದೆಹಲಿ ಬಿಟ್ಟಿದ್ದರು. ಅತ್ತ ಕಾಂಗ್ರೆಸ್ ಮುಕ್ತ ಭಾರತಕ್ಕೆ ಮುನ್ನುಡಿ ಬರೆದು, ಇತ್ತ ಕೇರಳ, ತಮಿಳುನಾಡು, ಲಕ್ಷದ್ವೀಪದಲ್ಲಿ ಓಖಿ ಸಂಕಷ್ಟಕ್ಕೆ ಒಳಗಾಗಿದ್ದ ಜನರ ಕಣ್ಣೀರು ಒರೆಸಲು ಮಂಗಳೂರಿನತ್ತ ಧಾವಿಸಿದ್ದರು.
ಸೋಮವಾರ ರಾತ್ರಿ ವಿಜಯದ ನುಡಿಗಳನ್ನಾಡಿದ ನರೇಂದ್ರ ಮೋದಿ ನೇರ ಓಖಿ ಚಂಡಮಾರುತ್ತದ ಹೊಡೆತಕ್ಕೆ ತತ್ತರಿಸಿದ ಲಕ್ಷಾಂತರ ಜನರ ಕಣ್ಣೀರು ಒರೆಸಲು ಕರಾವಳಿಯತ್ತ ನಡೆದಿದ್ದರು. ರಾತ್ರಿ 12 ಗಂಟೆಗೆ ಮಂಗಳೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡುವ ಮೂಲಕ ಸರಳತೆ ಮೆರೆಯುವುದರೊಂದಿಗೆ, ನಾನು ಪ್ರಧಾನ ಸೇವಕ ಎಂಬುದನ್ನು ಸಾಬೀತು ಮಾಡಿದ್ದರು.
ನಿತ್ಯ ನಿದ್ರೆ ಬಿಟ್ಟು ವಿಜಯೋತ್ಸವದ ಗುಂಗಿನಲ್ಲಿ ಉಳಿಯದೇ ನೊಂದವರ ನೋವು, ನಲಿವು ಆಲಿಸಲು ಮುಂದಾಗಿದ್ದು, ಜನರ ಮನ ತಟ್ಟತ್ತದೆ ಎಂಬುದಕ್ಕೆ ಮೋದಿ ಸ್ವಾಗತಕ್ಕೆ ಮಂಗಳೂರಿನಲ್ಲಿ ರಾತ್ರಿ 12 ಗಂಟೆಗೆ ಸಹಸ್ರಾರು ಜನರು ಜಯಘೋಷಗಳೊಂದಿಗೆ ಸ್ವಾಗತಕ್ಕೆ ನಿಲ್ಲುತ್ತಾರೆ. ಹೆಣ್ಣು ಗಂಡು, ಯುವಕರು ಸೇರಿ ಜಯಘೋಷ ಮೊಳಗಿಸಿದ್ದೇ ಸಾಕ್ಷಿ.
ದೇಶದ ಸಮಸ್ಯೆಗಳನ್ನು ಚರ್ಚಿಸಬೇಕಾದ ಸಂಸತ್ ಅಧಿವೇಶನ ನಡೆಯುವ ವೇಳೆ ವಿದೇಶಿ ಯಾತ್ರೆಗೆ ಹೋಗುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎದುರು ನಮ್ಮ ಹೆಮ್ಮೆಯ ಪ್ರಧಾನಿ ಮಾದರಿಯಾಗಿ ನಿಲ್ಲುತ್ತಾರೆ. ಇಂತಹ ಸಣ್ಣ ಸಂಗತಿಗಳು ದೇಶದ ಪ್ರಧಾನ ಸೇವಕ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನವನ್ನು ಹೆಚ್ಚಿಸುತ್ತದೆ. ಅದೇ ಅಲ್ಲವೇ ಬಿಜೆಪಿಯನ್ನು ಭಾರತದಾದ್ಯಂತ ವಿಜಯದ ಕಹಳೆಯನ್ನು ಮೊಳಗಿಸಿದರೇ, ವಿಶ್ವಾದ್ಯಂತ ಭಾರತದ ತಾಕತ್ತನ್ನು ಬಿಂಬಿಸುತ್ತಿದೆ. ನೋವಿಗೆ ಮಿಡಿಯುವ ಪ್ರಧಾನ ಸೇವಕನನ್ನು ನಾವು ಬೆಂಬಲಿಸದೇ, ವಿದೇಶಕ್ಕೆ ಹೋಗಿ ಮಜಾ ಮಾಡಿ ಬರುವ ವ್ಯಕ್ತಿಯನ್ನು ನಾವು ಬೆಂಬಲಿಸಲಾದೀತೇ?
Leave A Reply