ಭಾರತದ ಬಹುತ್ವ ಅರಿಯದ ನೆಹರು ನಕಲು ಜಾತ್ಯಾತೀತತೆ ಯಶಸ್ವಿಯಾಗಲಿಲ್ಲ: ತ್ರಿಪುರಾ ರಾಜ್ಯಪಾಲ
ಕೊಲ್ಕತ್ತ: ದೇಶದ ಪ್ರಧಾನಿ ಮಂತ್ರಿ ಜವಾಹರ್ ಲಾಲ್ ನೆಹರು ಅವರ ಅನ್ಯಲೋಕದ ತತ್ವಶಾಸ್ತ್ರವಾದ ಜಾತ್ಯಾತೀತತೆ ಭಾರದಲ್ಲಿ ಯಶಸ್ವಿಯಾಗಲಿಲ್ಲ. ವಾಸ್ತವಕ್ಕೆ ಹತ್ತಿರವಾದ ಜಾತ್ಯಾತೀತ ತತ್ವಗಳಿಗೆ ಭಾರತ ಸದಾ ತೆರೆದುಕೊಂಡಿತ್ತು. ಆದರೆ ನೆಹರು ಅವರ ನಕಲು ತತ್ವ ಅದಕ್ಕೆ ಕೊಳ್ಳಿ ಇಟ್ಟಿತು ಎಂದು ತ್ರಿಪುರಾ ರಾಜ್ಯಪಾಲ ತಥಾಗತಾ ರಾಯ್ ಹೇಳಿದರು
ನೆಹರು ಭಾರತದ ಬಹುತ್ವವನ್ನು ಅರ್ಥೈಸಿಕೊಳ್ಳಲಿಲ್ಲ. ನೆಹರು ಅನ್ಯಲೋಕದ ತತ್ವಶಾಸ್ತ್ರವನ್ನು ಭಾರತೀಯರ ಮೇಲೆ ಹೇರಿದರು. ಆದರೆ ಅದು ಯಶಸ್ವಿಯಾಗಲಿಲ್ಲ. ಅಲ್ಲದೇ ಧರ್ಮಗಳ ಮಧ್ಯೆ ಉತ್ತಮ ಮನೋಭಾವವನ್ನು ಬಿತ್ತುವಲ್ಲಿ ವಿಫಲವಾಯಿತು. ಅಲ್ಲದೇ ಜನರ ಮಧ್ಯೆ ಹುಸಿ ಜಾತ್ಯಾತೀತತೆ ವಿಭಜನೆಯನ್ನು ಉಂಟು ಮಾಡಿತು ಎಂದು ಹೇಳಿದ್ದಾರೆ.
ಕೊಲ್ಕತ್ತದಲ್ಲಿ ಎಸ್ಆರ್ ಈ ಐ ಸಂಸ್ಥೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ಭಾರತ ಪ್ರಧಾನಿ ಮಂತ್ರಿಯಾಗಿದ್ದ ನೆಹರು ಅವರಿಗೆ ಯಾರೋ ಒಬ್ಬರು ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ ಯಾವ ತತ್ವದಡಿ ದೇಶವನ್ನು ಮುನ್ನಡಿಸುತ್ತೀರಿ ಎಂದು ಕೇಳಿದ್ದರು. ಅದಕ್ಕೆ ನೆಹರು (ಸ್ವಲ್ಪ ಸಮಯ ಯೋಚಿಸಿ) ನನ್ನ ಕೆಲಸ ರಾಷ್ಟ್ರವನ್ನು ಧರ್ಮದಿಂದ ದೂರವಿಡುವುದು ಎಂದು ಹೇಳಿದ್ದರು. ಆ ಮಾತು ಬಂಗಾಳದ ಪ್ರಮುಖ ದೈನಿಕದಲ್ಲಿ ಪ್ರಕಟವಾಗಿತ್ತು. ಭಾರತದ ಆತ್ಮವಾದ ಧರ್ಮವನ್ನೆ ದೂರವಿಟ್ಟು ಆಡಳಿತ ನಡೆಸುತ್ತೇನೆ ಎಂಬ ಈ ಮಾತೇ ನೆಹರು ದೇಶದ ಬಹುತ್ವವನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದರು ಎಂಬುದಕ್ಕೆ ಸಾಕ್ಷಿ ಎಂದು ಹೇಳಿದರು.
Leave A Reply