ಮಣಿಶಂಕರ ಅಯ್ಯರ್ ಬಿಜೆಪಿ ಏಜೆಂಟ್ ಅಂತೆ: ಅಲ್ಪೇಶ್ ಹತಾಶೆಯ ನುಡಿ
ಗಾಂಧಿ ನಗರ: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಹಿಂದುಳಿದ ವರ್ಗಗಳ ಮುಖಂಡ ಅಲ್ಪೇಶ್ ಠಾಕೂರ್ ‘ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಕಾರಣ. ಮಣಿಶಂಕರ್ ಅಯ್ಯರ್ ಬಿಜೆಪಿ ಏಜೆಂಟ್ ಆಗಿದ್ದಾರೆ ಎಂದು ಆರೋಪಿಸಿದ್ದಾರೆ.
ಮಣಿಶಂಕರ್ ಅಯ್ಯರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಳಸಿದ್ದ ‘ನೀಚ ವ್ಯಕ್ತಿ’ ಪದವನ್ನೇ ಬಳಸಿಕೊಂಡು ಬಿಜೆಪಿ ಗೆಲುವು ಸಾಧಿಸಿತು. ಕಾಂಗ್ರೆಸ್ ಹೀನಾಯವಾಗಿ ಸೋಲುಂಡಿತು. ಅಲ್ಲದೇ ಮಣಿಶಂಕರ ಅಯ್ಯರ ನಾವು ಗೆಲ್ಲುವ ಎಲ್ಲ ಅವಕಾಶಗಳನ್ನು ಕಸಿದುಕೊಂಡು, ಬಿಜೆಪಿಗೆ ಪ್ರಬಲ ಅಸ್ತ್ರವನ್ನು ನೀಡಿ, ಜಯಭೇರಿ ಭಾರಿಸಲು ಅನುಕೂಲ ಮಾಡಿಕೊಟ್ಟರು ಎಂದು ಖಾಸಗಿ ಚಾನೆಲ್ ಜತೆ ಮಾತನಾಡುವಾಗ ಹೇಳಿದ್ದಾರೆ.
ಹಿಂದುಳಿದ ನಾಯಕ ಅಲ್ಪೇಶ್ ಠಾಕೂರ್, ಪಾಟೀದಾರ್ ಮೀಸಲು ಹೋರಾಟ ಸಮಿತಿಯ ಹಾರ್ದಿಕ್ ಪಟೇಲ್, ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಗೆ ಬೆಂಬಲಿಸಿದರೂ ಕಾಂಗ್ರೆಸ್ 77 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಹೆಣಗಾಡಬೇಕಾಯಿತು. ಇದೀಗ ಬಿಜೆಪಿ ಗೆಲುವು ಸಾಧಿಸಿ, ಸರ್ಕಾರ ರಚಿಸುತ್ತಿರುವಾಗ ಸೋಲಿನ ಹೊಣೆಯನ್ನು ಹೊರಲಾಗದೇ, ಅತ್ತ ಗೆಲುವನ್ನು ಸಂಭ್ರಮಿಸಲಾಗದೇ ನಾಲ್ಕು ಜನ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ.
Leave A Reply