ಒಮೆನ್ ದೇಶದಿಂದಲೇ ಹೈದರಾಬಾದ್ ಮಹಿಳೆಗೆ ತಲಾಖ್, ನ್ಯಾಯಕ್ಕೆ ಅಂಗಲಾಚುತ್ತಿರುವ ಮಹಿಳೆ
ಹೈದರಾಬಾದ್ : ಮುಸ್ಲಿಂ ಮಹಿಳೆಯೊಬ್ಬಳು ಒಮೆನ್ ದೇಶದವನೊಂದಿಗೆ ಮದುವೆಯಾಗಿ ಇದೀಗ ಪೇಚಿಗೆ ಸಿಲುಕಿದ್ದಾಳೆ. ಒಮೆನ್ ದೇಶದವನೊಂದಿಗೆ ಮದುವೆಯಾಗಿದ್ದ ಮಹಿಳೆಗೆ ಇದೀಗ ಫೋನ್ ನಲ್ಲೆ ತಲಾಖ್ ನೀಡಿ, ಸಂಬಂಧ ಕಡಿದುಕೊಂಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದು, ಕೂಡಲೇ ಸರ್ಕಾರ ನೆರವಿಗೆ ಬರಬೇಕು ಎಂದು ಮಹಿಳೆ ಮನವಿ ಮಾಡಿದ್ದಾಳೆ.
ಹಳೆ ಹೈದರಾಬಾದ್ ನಲ್ಲಿ ವಾಸಿಸುತ್ತಿರುವ ಗೌಸಿಯಾ ಬೇಗಂ ತಲಾಖ್ ಅನ್ಯಾಯಕ್ಕೆ ಒಳಗಾದ ನತದೃಷ್ಟ ಮಹಿಳೆ. ಒಮೆನ್ ದೇಶದ ಜಹ್ರಾನ್ ಅಲ್ ರಜಿ ಎಂಬಾತನೊಂದಿಗೆ 2008ರಲ್ಲಿ ಮದುವೆಯಾಗಿದ್ದೆ. ಒಮೆನ್ ದೇಶದ ನಿಯಮದಂತೆ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ, ಮದುವೆಯಾಗಲಾಗಿತ್ತು. ಆತ ನನ್ನನ್ನು ಒಮೆನ್ ದೇಶಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದ. ಆದರೆ ಇದೀಗ ಮರೆತ್ತಿದ್ದಾನೆ.
ಹೈದರಾಬಾದ್ ನಲ್ಲಿ ಮದುವೆಯಾಗಿ ನನ್ನ ಜತೆ ಕೆಲ ದಿನ ಇದ್ದು ಒಮೆನ್ ದೇಶಕ್ಕೆ ಹೋಗಿದ್ದ. ನಂತರ ಪ್ರತಿ ತಿಂಗಳು ನನಗೆ 16 ರಿಂದ 17 ಸಾವಿರ ರೂಪಾಯಿ ಕಳುಹಿಸುತ್ತಿದ್ದ. ಆದರೆ 17 ಆಗಸ್ಟ್ 2017ರಂದು ಫೋನ್ ಮಾಡಿ, ತಲಾಖ್ ತಲಾಖ್ ತಲಾಖ್ ಎಂದು ಫೋನ್ ಕಟ್ ಮಾಡಿದ್ದಾನೆ. ನಂತರ ನಾನು ಹಲವು ಬಾರಿ ಪ್ರಯತ್ನಿಸಿದರೂ ಸಂಪರ್ಕಿಸಲು ಸಾಧ್ಯವಾಗಿಲ್ಲ. ಆತ ನನ್ನ ಕರೆಯನ್ನು ಸ್ವೀಕರಿಸುತ್ತಿಲ್ಲ. ನನಗೆ ಮೋಸ ಮಾಡಿದ್ದಾನೆ ಎಂದು ಮಹಿಳೆ ಕಣ್ಣೀರಿಟ್ಟಿದ್ದಾಳೆ.
ಪತಿಯಿಲ್ಲದೇ ಅನಾಥಳಾಗಿರುವ ಗೌಸಿಯಾ ತೆಲಂಗಾಣ ಸರ್ಕಾರದ ಮೂಲಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ನೆರವು ನೀಡಲು ಮನವಿ ಮಾಡಿಕೊಂಡಿದ್ದಾಳೆ. ಕೇಂದ್ರ ಸಚಿವ ಸಂಪುಟ ಡಿಸೆಂಬರ್ 15ರಂದು ತಲಾಖ್ ನಿಷೇಧ ಕಾಯಿದೆಗೆ ಅಸ್ತು ಎಂದಿರುವ ವೇಳೆಯಲ್ಲೇ ಇಂತಹ ಘಟನೆ ಮರುಕಳಿಸಿದೆ.
Leave A Reply