ರಾಜ್ಯದಲ್ಲಿ ಸಿದ್ದರಾಮಯ್ಯ ರೈತ ವಿರೋಧಿ ಆಡಳಿತಕ್ಕೆ 3,515 ಅನ್ನದಾತರು ಬಲಿ
ಬೆಂಗಳೂರು: ಸದಾ ಸುಳ್ಳಿಗೆ ಸುಳ್ಳು ಹೇಳುತ್ತಲೇ ಬಂದಿರುವ ಸಿಎಂ ಸಿದ್ದರಾಮಯ್ಯ, ರೈತರ ಬಗೆಗಿನ ಕಾಳಜಿಯ ಕರಾಳ ಮುಖವೊಂದು ಬಹಿರಂಗವಾಗಿದೆ. ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಅನ್ನದಾತರ ಮಾರಣಹೋಮವೇ ನಡೆದಿದೆ. ಸಿದ್ದರಾಮಯ್ಯ ಸರ್ಕಾರ ರೈತರಿಗೆ ಸರಿಯಾದ ಸೌಲಭ್ಯ ಒದಗಿಸದಿರುವುದರಿಂದ 2013ರಿಂದ 2017 ರವರೆಗೆ 3,315 ರೈತರು ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ್ದಾರೆ.
ರಾಜ್ಯ ಕೃಷಿ ಇಲಾಖೆ ಮಾಹಿತಿ ಪ್ರಕಾರ ಏಪ್ರಿಲ್ 2013 ರಿಂದ 2017ರ ನವೆಂಬರ್ ವರೆಗೆ ಒಟ್ಟು 3,315 ರೈತರು ಆತ್ಮಹತ್ಯೆಯ ದಾರಿ ತುಳಿದಿದ್ದಾರೆ. ಅದರಲ್ಲಿ 2,525 ರೈತರು ಬರ ಪ್ರದೇಶ ಮತ್ತು ಬೆಳೆ ಹಾನಿಯ ಸಂಕಟ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೃಷಿ ಇಲಾಖೆ ಕುರಿತು ಮಾಹಿತಿ ನೀಡಿದ್ದು, 3,315 ರೈತರಲ್ಲಿ 2,252 ರೈತರು ಬರದ ಹೊಡೆತ ಮತ್ತು ಬೆಳೆದ ಬೆಳೆಗೆ ತಕ್ಕ ಫಲ ದೊರೆಯದಿರುವುದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2017ರ ಏಪ್ರಿಲ್ ನಿಂದ ನವೆಂಬರ್ ವರೆಗೆ 624 ಆತ್ಮಹತ್ಯೆ ಪ್ರಕರಣಗಳು ನಡೆದಿದ್ದವು, ಅದರಲ್ಲಿ 416 ಪ್ರಕರಣಗಳಲ್ಲಿ ರೈತರು ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಸಾಬೀತಾಗಿದೆ.
2013ರಿಂದ 2017 ಏಪ್ರಿಲ್ ವರೆಗಿನ 112 ರೈತರ ಆತ್ಮಹತ್ಯೆ ಪ್ರಕರಣಗಳ ವಿಚಾರಣೆ ಬಾಕಿ ಉಳಿದಿದ್ದು, 2017 ಏಪ್ರಿಲ್ ನಿಂದ ನವೆಂಬರ್ ವರೆಗೆ 105 ಪ್ರಕರಣಗಳು ಬಾಕಿ ಉಳಿದಿವೆ ಎಂದು ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್ ತಿಳಿಸಿದ್ದಾರೆ.
ಶ್ರೀನಿವಾಸ್ ಹೇಳುವ ಪ್ರಕಾರ ರಾಜ್ಯದಲ್ಲಿ ಸಿದ್ದರಾಮಯ್ಯ ಆಡಳಿತದಲ್ಲಿ 2013 ರಿಂದ 2014 ರವರೆಗೆ 106 ರೈತರು, 2015 ರಿಂದ 2016 ರವರೆಗೆ 1,483 ರೈತರು ರಾಜ್ಯದಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡಿದ್ದಾರೆ.
Leave A Reply