ನಟ ಅರ್ಜುನ್ ಕಾಪಿಕಾಡ್ ಸಿನಿಮಾದಲ್ಲಿ ಇರದಿದ್ದರೆ ಏನು ಮಾಡ್ತಾ ಇದ್ರು ಗೊತ್ತಾ?
ಅಭಿನಯ ಚಕ್ರವರ್ತಿ ಅರ್ಜುನ್ ಕಾಪಿಕಾಡ್ ತುಳು ಚಿತ್ರ ರಂಗದ ಹೆಮ್ಮೆ. ಎಷ್ಟೋ ಯುವತಿಯರ ಮನಗೆದ್ದ ನಾಯಕ ನಟ. ಈಗಿನ ತುಳು ಸಿನಿಮಾದಲ್ಲಿ ಆ ಗತ್ತು-ಗಮ್ಮತ್ತು ಇರೋ ನಟ ಅಂದ್ರೆ ಅದು ಅಜರ್ುನ್ ಕಾಪಿಕಾಡ್. ಚಂಡಿಕೋರಿ,ಬರ್ಸ, ರಂಗ್ ಎಂಬ ಸಾಲು ಸಾಲು ಹಿಟ್ ಮೂವಿಗಳನ್ನ ತುಳು ಚಿತ್ರ ರಂಗಕ್ಕೆ ನೀಡಿದ ನಟ. ದೇವದಾಸ್ ಕಾಪಿಕಾಡ್ ಪುತ್ರನಾದರೂ ತುಳು ಚಿತ್ರ ರಂಗದಲ್ಲಿ ತನ್ನದೇ ಛಾಪನ್ನ ಮೂಡಿಸಿದ ನಟ.
ಇನ್ನು ತುಳು ಸಿನಿಮಾ ಮಾತ್ರವಲ್ಲದೇ ಕನ್ನಡ ಚಿತ್ರಕ್ಕೂ ಅಜರ್ುನ್ ಕಾಪಿಕಾಡ್ ಎಂಟ್ರಿಯನ್ನ ಕೊಟ್ಟಿದ್ದಾರೆ. ಕನ್ನಡದ ಮಧುರ ಸ್ವಪ್ನ ಅನ್ನೋ ಸಿನಿಮಾದಲ್ಲಿ ನಟಿಸಿ ತುಳು ಮಾತ್ರವಲ್ಲದೇ ಕನ್ನಡದಲ್ಲಿ ಅಭಿಮಾನಿಗಳನ್ನ ಸೃಷ್ಟಿಸಿಕೊಂಡಿದ್ದಾರೆ.
ಕನ್ನಡ,ತುಳು ಸಿನಿಮಾದಲ್ಲಿ ತನ್ನ ಅದ್ಬುತ ಛಾಪುವನ್ನ ಮೂಡಿಸುತ್ತಿರುವ ನಟ ಅಜರ್ುನ್ ಕಾಪಿಕಾಡ್ ಎಲ್ಲರಿಗೂ ಅವರ ಪರ್ಸನಲ್ ವಿಚಾರ ಬಗ್ಗೆ ತಿಳಿಯಲು ಕುತೂಹಲ. ಇತ್ತೀಚಿಗಷ್ಟೇ ಇವರು ಎಂಗೇಜ್ಮೆಂಟ್ ಮಾಡಿಕೊಂಡಿದ್ದು ಅದರ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಜನರು ಕುತೂಹಲದಿಂದ ನೋಡಿದ್ದಾರೆ.
ಹ್ಯಾಂಡ್ಸಮ್ ಅರ್ಜುನ್ ಕಾಪಿಕಾಡ್ ಎಲ್ಲಾದರೂ ಸಿನಿಮಾದಲ್ಲಿ ಇರುತಿಲ್ಲದಿದ್ದರೆ ಏನು ಮಾಡ್ತಾ ಇದ್ರೂ ಅನ್ನೋ ಪ್ರಶ್ನೆ ಅವರ ಅಭಿಮಾನಗಳಿಗೆ ಮೂಡುವುದು ಸಹಜ ಅಲ್ವ..
ಯಸ್ ಈ ಪ್ರಶ್ನೆಗೆ ಅಜರ್ುನ್ ಕಾಪಿಕಾಡ್ ರವರ ಉತ್ತರ ಏನು ಗೊತ್ತಾ..ನಾನು ಕಲಿತದ್ದು ಎಂ.ಬಿ.ಎ.. ಸೋ ಅದೇ ಫೀಲ್ಡಲ್ಲಿ ಇರುತ್ತಿದ್ದೆ..ಎನಾದರೂ ಬಿಸಿನೆಸ್ ಅಥಾವ ಮಾಕರ್ೆಂಟಿಗ್ ಮಾಡ್ತಾ ಇದ್ದೆ ಅನಿಸುತ್ತೆ ಅಂತಾ ಹೇಳಿದ್ದಾರೆ..ಅದರೆ ಸಿನಿಮಾದಲ್ಲಿ ನಟನೆಯನ್ನ ನಾನು ತುಂಬಾ ಪ್ರೀತಿಸುತ್ತೇನೆ ಅಂತಾ ತಿಳಿಸಿದ್ದಾರೆ.
ಹೌದು ಇವರ ಇಲ್ಲಿನ ಕೊನೆಯ ವಾಕ್ಯ ನಿಜಾ. ಅವರ ನಟನೆಯ ಬಗ್ಗೆ ಇರುವ ಕಾಳಜಿ, ಪ್ರೀತಿ, ಅವರ ಸಿನಿಮಾದಲ್ಲಿ ಕಾಣಿಸುತ್ತೆ ಅವರ ನಟನೆಯ ನೈಜತೆಯೆ ಅವರ ಮಾತಿನ ಪ್ರತಿಬಿಂಬ
ಕಿರಣ್ ದೊಂಡೋಲೆ
Leave A Reply