ಈ ಹಿಂದೂ ಸಂಘಟನೆ ಕಾರ್ಯಕರ್ತನ ಹತ್ಯೆಗೆ ಯಾರು ಯತ್ನಿಸಿದ್ದು ಎಂದು ಹೇಳಬಲ್ಲಿರಾ ರಮಾನಾಥ ರೈ?
ಮಂಗಳೂರು: ದೀಪಕ್ ರಾವ್ ಹತ್ಯೆಯಾದ ಬಳಿಕ ಮಗುಮ್ಮಾಗಿದ್ದ ಕಾಂಗ್ರೆಸ್ ನಾಯಕರು ಅಬ್ದುಲ್ ಬಷೀರ್ ಮೃತಪಡುತ್ತಲೇ ಇದನ್ನು ಹಿಂದೂಗಳೇ, ಹಿಂದೂ ಸಂಘಟನೆಗಳೇ ಮಾಡಿವೆ ಎಂದರು. ಅದರಲ್ಲಿ ಸಚಿವ ರಮಾನಾಥ್ ರೈ ಅವರಂತೂ ಮುಂಚೂಣಿಯಲ್ಲಿ ನಿಂತರು.
ಆದರೆ ಸುರತ್ಕಲ್ ನಲ್ಲಿ ಹಿಂದೂ ಜಾಗರಣ ವೇದಿಕೆ ಸಂಚಾಲಕರೊಬ್ಬರ ಮೇಲೆ ನಾಲ್ವರು ದುಷ್ಕರ್ಮಿಗಳು ತಲವಾರಿನಿಂದ ದಾಳಿ ಮಾಡಿ ಹತ್ಯೆಗೆ ಯತ್ನಿಸಿದ್ದಾರೆ. ಅದೃಷ್ಟವಶಾತ್ ಹಿಂದೂ ಸಂಘಟನೆ ಸಂಚಾಲಕ ತಪ್ಪಿಸಿಕೊಂಡಿದ್ದಾರೆ.
ಹೌದು, ಸುರತ್ಕಲ್ ನ ಅಗರಮೇಲು ನಿವಾಸಿಯಾಗಿರುವ ಭರತ್ ಎಂಬುವರು ರಾತ್ರಿ ಬೈಕಿನಲ್ಲಿ ತೆರಳುತ್ತಿರುವಾಗ ಪೊದೆಯಲ್ಲಿ ಅವಿತಿದ್ದ ನಾಲ್ವರು ದುರುಳರು ತಲವಾರಿನಿಂದ ದಾಳಿ ಮಾಡಿದ್ದಾರೆ. ತಮಗೆ ಅಡ್ಡಹಾಕುತ್ತಿರುವ ಸಂಚು ಅರಿತ ಭರತ್ ಅವರು ತಪ್ಪಿಸಿಕೊಂಡಿದ್ದಾರೆ. ಇದೆಲ್ಲ ಆದ ಮೇಲೆ ಪೊಲೀಸರೇನೋ ಸ್ಥಳ ಪರಿಶೀಲಿಸಿದ್ದಾರೆ.
ಆದರೆ ಹಿಂದೂ ಸಂಘಟನೆ ಸಂಚಾಲಕರ ಮೇಲೆ ದಾಳಿ ಮಾಡಿರುವ ಯಾವ ರಮಾನಾಥ ರೈ ಸಹ ಸೊಲ್ಲೆತ್ತುತ್ತಿಲ್ಲ. ಈ ಹತ್ಯೆಗೆ ಕಾನೂನು ಸುವ್ಯವಸ್ಥೆಯ ವೈಫಲ್ಯವೋ ಅಥವಾ ಅನ್ಯಕೋಮಿನವರೇ ದ್ವೇಷಕ್ಕಾಗಿ ದಾಳಿ ಮಾಡಿದರೋ? ಯಾವ ಕಾರಣಕ್ಕಾಗಿ ದಾಳಿ ಮಾಡಿದರು ಎಂಬ ಕುರಿತು ರಮಾನಾಥ್ ರೈ ಹೇಳುತ್ತಿಲ್ಲ. ಆದರೆ ಅದೇ ಬಷೀರ್ ಹತ್ಯೆಯಲ್ಲಿ ಮಾತ್ರ ಇದು ಹಿಂದೂಗಳೇ ಮಾಡಿಸಿದ ಕೊಲೆ ಎಂದು ಷರಾ ಬರೆಯುತ್ತಾರೆ. ಇದು ಇಬ್ಬಂದಿತನವಲ್ಲವೇ?
Leave A Reply