ಜಸ್ಟಿಸ್ ಲೋಯಾ ಸಾವಿಗೆ ಅಮಿತ್ ಶಾ ಕಾರಣ ಎನ್ನುವವರೇ ಕೇಳಿ ಲೋಯಾ ಪುತ್ರನ ಈ ಮಾತು..
ಮುಂಬೈ: ಸೋಹ್ರಾಬುದ್ಧೀನ್ ಶೇಖ್ ಎನಕೌಂಟರ್ ಪ್ರಕರಣವನ್ನು ಆಲಿಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಬ್ರಿಜ್ ಮೋಹನ್ ಲೋಯಾ ಅವರ ಸಾವಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾರಣ ಎಂದು ಆರೋಪಿಸುವವರಿಗೆ ಲೋಯಾ ಪುತ್ರ ತಕ್ಕ ಉತ್ತರ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿರುವ ಲೋಯಾ ಪುತ್ರ ಅನುಜ್ ಲೋಯಾ, ‘ನನ್ನ ತಂದೆಯದ್ದೂ ಸಹಜ ಸಾವು. ನಮ್ಮ ಕುಟುಂಬಕ್ಕೆ ಸಾವಿನ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಕೆಲ ದಿನಗಳಿಂದ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳಿಂದ ಕುಟುಂಬದ ನೆಮ್ಮದಿಗೆ ಭಂಗ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಕುಟುಂಬ ಸಾವಿನ ಬಗ್ಗೆ ಯಾರ ಮೇಲೂ ಅನುಮಾನವಿಲ್ಲ. ಆದರೆ ತಂದೆ ಸಾವಿನಲ್ಲಿ ರಾಜಕೀಯ ಮಾಡುತ್ತಿರುವುದು ನೋವಿನ ಸಂಗತಿ. ನಾವು ತಂದೆ ಕಳೆದುಕೊಂಡ ದುಖಃದಿಂದ ಹೊರಬರಲು ಪ್ರಯತ್ನಿಸುತ್ತಿದ್ದೇವೆ. ದಯವಿಟ್ಟು ನಮ್ಮನ್ನು ನಮ್ಮಷ್ಟಕ್ಕೆ ಬಿಟ್ಟು ಬಿಡಿ ಎಂದು ಅಂಗಲಾಚಿದರು.
ನನ್ನ ತಂದೆಯದ್ದೂ ಸಹಜ ಸಾವು. ನಮ್ಮ ಇಡೀ ಕುಟುಂಬಕ್ಕೆ ಅದು ಸಹಜ ಸಾವು ಎಂಬುದು ತಿಳಿದಿದೆ. ನನಗೆ ಸಾವಿನಲ್ಲಿ ಯಾವುದೇ ಅನುಮಾನಗಳು ಉಳಿದಿಲ್ಲ. ನನ್ನ ತಂದೆ ಸಾವನ್ನು ವಾದಕ್ಕೆ ಬಳಸಲು ನಾನು ಇಷ್ಟಪಡುವುದಿಲ್ಲ ಮತ್ತು ಯಾರ ಮೇಲೂ ಆರೋಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು
ಲೋಯಾ ಸ್ನೇಹಿತ, ನಿವೃತ್ತ ಜಿಲ್ಲಾ ಜಡ್ದ್ ಕೆ.ಬಿ. ಕಟಕ್ ಮಾತನಾಡಿ, ಮಾಧ್ಯಮದವರು, ರಾಜಕಾರಣಿಗಳು, ನಾನಾ ಸಂಘಟನೆಗಳು, ನ್ಯಾಯವಾದಿಗಳು, ರಾಜಕಾರಣಿಗಳು ಪದೇ ಪದೆ ಲೋಯಾ ಸಾವಿನ ಬಗ್ಗೆ ಕೇಳುತ್ತಿರುವುದರಿಂದ ಕುಟುಂಬಕ್ಕೆ ತೀವ್ರ ತೊಂದರೆಯಾಗುತ್ತಿದೆ. ಸಾವಿನ ಬಗ್ಗೆ ಕುಟುಂಬದವರಿಗೆ ಮತ್ತು ಆತ್ಮೀಯರಿಗೆ ಯಾವುದೇ ಅನುಮಾನಗಳಿಲ್ಲ ಎಂದು ಹೇಳಿದರು.
Leave A Reply