ತನ್ನ ವಿರುದ್ಧ ಮತ ನೀಡಿದ್ದರೂ ದ್ವೇಷಿಸದ ನೆತ್ಯಾನುಹ್ ಭೇಟಿ ಅಪಹಾಸ್ಯ ಮಾಡುವ ಕಾಂಗ್ರೆಸ್ ಗೆ ಅದೆಂಥಾ ದಾರಿದ್ರ್ಯ..?
ಇಸ್ರೇಲ್ ಪ್ರಧಾನಿ ನೆತ್ಯಾನುಹ್ ದೆಹಲಿ ವಿಮಾನದ ನಿಲ್ದಾಣಕ್ಕೆ ಬಂದಿಳಿದಾಗ ಸ್ವತ ಭಾರತ ಪ್ರಧಾನಿ ನರೇಂದ್ರ ಮೋದಿ ಅವರೇ ನಿಲ್ದಾಣದಲ್ಲಿ ಅವರಿಗೆ ಅಪ್ಪುಗೆಯ ಸ್ವಾಗತ ನೀಡಿ, ಇಸ್ರೇಲ್ ಭಾರತದ ಸಂಬಂಧಕ್ಕೆ ಹೊಸ ಭಾಷ್ಯ ಬರೆದಿದ್ದರು. ಇಬ್ಬರು ಆತ್ಮೀಯ ಸ್ನೇಹಿತರ ಮಧ್ಯದ ಅಮೂಲ್ಯ ಕ್ಷಣವನ್ನು ಕುಹಕಿ ಕಾಂಗ್ರೆಸ್ಸಿಗರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಂಡರಲ್ಲ ಅದೇ ಅಲ್ಲವೇ ದೇಶಕ್ಕೆ ಎದುರಾದ ದೊಡ್ಡ ದುರಂತ.
ಅತಿಥಿ ದೇವೋ ಭವ ಎಂದು ವಿರೋಧಿಗಳು ಬಂದರೂ ಒಂದು ಕ್ಷಣ ಪೂರ್ವಾಪರ ಯೋಚಿಸಿ, ಆತಿಥ್ಯ ನೀಡಿ ಕಳುಹಿಸುವ ಸ್ನೇಹ ಪ್ರಿಯ ರಾಷ್ಟ್ರ ಭಾರತ. ಆದರೆ ನೂರಾರು ವರ್ಷಗಳಿಂದ ಆತ್ಮೀಯ ಸ್ನೇಹಿತನಂತೆ ಇರುವ ಇಸ್ರೇಲ್ ಪ್ರಧಾನಿಯೊಬ್ಬರು ಭಾರತಕ್ಕೆ ಬಂದಿಳಿದಾಗ, ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದ್ದನ್ನೇ ಕುಚ್ಯೋದಂತೆ ಬಿಂಬಿಸುತ್ತಿರುವ ಕಾಂಗ್ರೆಸ್ ಗೆ ಅದೆಂಥಾ ಬೌದ್ದಿಕ ದಾರಿದ್ರ್ಯ ಆವರಿಸಿರಬಹುದಲ್ಲವೇ..?
ಬೆಂಜಮಿನ್ ನೆತನ್ಯಾಹು ಭಾರತ ಭೇಟಿ ವೇಳೆ ಪ್ರಧಾನಿ ಮೋದಿ ಅವರ ಬಗ್ಗೆ ಅಪಹಾಸ್ಯ ಮಾಡುವ ವಿಡಿಯೋ ಬಿಡುಗಡೆ ಮಾಡಿ ತನಗೆ ದೇಶದ ಮಾನ, ಮರ್ಯಾದೆಗಿಂತ ಆಡಳಿತ ಪಕ್ಷದಲ್ಲಿರುವ ಸರ್ಕಾರವನ್ನು ತೆಗಳುವುದೇ ಗುರಿಯಾಗಿಸಿಕೊಂಡಂತೆ ಇದೆ. ಸೃಜನಾತ್ಮಕ ಸಲಹೆ ನೀಡಬೇಕಾದ ವಿರೋಧ ಪಕ್ಷ ಕಾಂಗ್ರೆಸ್ ವಿಶ್ವದ ಬಲಿಷ್ಠ ರಾಷ್ಟ್ರವೊಂದರ ಪ್ರಧಾನಿ ಭೇಟಿ ನೀಡಿದಾಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೀಯಾಳಿಸಿದ್ದು, ಕಾಂಗ್ರೆಸ್ ನ ಅಧಪತಃನ ಮತ್ತು ಸ್ವಾರ್ಥಕ್ಕೆ ಹಿಡಿದ ಕೈಗನ್ನಡಿ ಅಷ್ಟೆ.
ಭಾರತದ ಮುಷ್ಟಿಯಗಲಷ್ಟಿರುವ ರಾಷ್ಟ್ರ ಇಸ್ರೇಲ್. ಆದರೆ ಆ ಒಂದು ರಾಷ್ಟ್ರ ತನ್ನ ಸುತ್ತ ಇರಾನ್, ಇರಾಕ್, ಪ್ಯಾಲೆಸ್ತೈನ್ ನಂತಹ ಕಟ್ಟರ ವಿರೋಧಿ ರಾಷ್ಟ್ರಗಳೊಂದಿಗೆ ಸೆಣಸಾಡುತ್ತಾ, ವಿಜಯ ದುಂಧುಬಿ ಭಾರಿಸುತ್ತಿದೆ. ತನ್ನ ಬಲಿಷ್ಠ ಸೈನ್ಯ ಪಡೆಕಟ್ಟಿಕೊಂಡು ಎಂಥದ್ದೇ ಯುದ್ಧವಿದ್ದರೂ ಎದುರಿಸುವ ತಾಕತ್ತು ಇಸ್ರೇಲ್ ಗೆ ಇದೆ.
ಜೇರುಸೆಲಂ ಇಸ್ರೇಲ್ ರಾಜಧಾನಿ ಎಂದಿದಕ್ಕೆ ವಿರೋಧಿಸಿದ ಭಾರತ
ಜೇರುಸೆಲಂ ನಗರವನ್ನು ಇಸ್ರೇಲ್ ರಾಜಧಾನಿ ಎಂದು ಅಮೆರಿಕ ಬೆಂಬಲಿಸಿ, ತನ್ನ ರಾಯಭಾರಿ ಕಚೇರಿಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿಕೆ ನೀಡಿತ್ತು. ಇದಕ್ಕೆ ಇಡೀ ವಿಶ್ವದ ಮುಸ್ಲಿಂ ರಾಷ್ಟ್ರಗಳು ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ್ದವು. ಅದೇ ತಾನೇ ಇಸ್ರೇಲ್ ಗೆ ಭೇಟಿ ನೀಡಿ ಬಂದಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಸರ್ಕಾರದ ನಿಲುವು ಅಮೆರಿಕಾ, ಇಸ್ರೇಲ್ ಗೆ ಬೆಂಬಲ ಎನ್ನುವಂತಿತ್ತು. ಆದರೆ ಭಾರತ ಇಸ್ರೇಲ್ ವಿರುದ್ಧವಾಗಿ ಮತ ನೀಡಿತ್ತು. ಆದರೆ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳದೇ ಇಸ್ರೇಲ್ ಪ್ರಧಾನಿಯೇ ‘ಜೇರುಸೆಲಂ ವಿಷಯದಲ್ಲಿ ಭಾರತ ಮತ ನೀಡಿರುವುದು ಇಸ್ರೇಲ್ ಭಾರತದ ಸಂಬಂಧದ ಮೇಲೆ ಪ್ರಭಾವ ಬೀರಲ್ಲ ಎನ್ನುತ್ತಾರಲ್ಲ ಅದೇ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರಕ್ಕಿರುವ ತಾಕತ್ತು. ಅವರ ಸ್ನೇಹಕ್ಕೆ ನೆತ್ಯಾನುಹ್ ನೀಡುವ ಬೆಲೆ.
ಇಸ್ರೇಲ್ ಭಾರತದ ಸಂಬಂಧದ ಅರಿವು ನಿಮಗಿರಲಿ ಕಾಂಗ್ರೆಸ್ಸಿಗರೇ..
- ವಿಶ್ವದಲ್ಲೇ ಅತ್ಯಂತ ಬಲಿಷ್ಠ ಸೈನ್ಯ ಪಡೆಯನ್ನು ಹೊಂದಿರುವ ರಾಷ್ಟ್ರ ಇಸ್ರೇಲ್.
- ಭಾರತ ಸಂಕಷ್ಟದಲ್ಲಿದ್ದಾಗ ನೆರವಾಗುವ ರಾಷ್ಟ್ರ ಇಸ್ರೇಲ್.
- ಕಾರ್ಗಿಲ್ ಯುದ್ಧದಲ್ಲಿ ಭಾರತಕ್ಕೆ ಯುದ್ಧಾಸ್ತ್ರಗಳನ್ನು ಪೂರೈಸಿದ ರಾಷ್ಟ್ರ ಇಸ್ರೇಲ್
- ಈಗಲೂ ದೇಶಕ್ಕೆ ಸೈನ್ಯದ ಸಾಮಾಗ್ರಿಗಳನ್ನು ಪೂರೈಸುವ ಅತ್ಯಂತ ನಂಬುಗೆಯ ರಾಷ್ಟ್ರ ಇಸ್ರೇಲ್
- ತನ್ನಲ್ಲಿರುವ ಮಹತ್ತರ ತಂತ್ರಜ್ಞಾನಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲು ಮುಂದಾಗಿರುವ ರಾಷ್ಟ್ರ
- ವಿಶ್ವಕ್ಕೆ ಕಂಟಕವಾಗಿರುವ ಇಸ್ಲಾಂ ಭಯೋತ್ಪಾದನೆಯನ್ನು ಬಗ್ಗು ಬಡಿಯುತ್ತಿರುವ ರಾಷ್ಟ್ರ ಇಸ್ರೇಲ್.
- ಬಲಿಷ್ಠ ಯುದ್ಧಾಸ್ತ್ರಗಳನ್ನು ತಯಾರಿಸುವ ಮತ್ತು ಅದನ್ನು ನಿಷ್ಠೆ ಮತ್ತು ನಂಬಿಕೆಯಿಂದ ಭಾರತಕ್ಕೆ ಪೂರೈಸುವ ರಾಷ್ಟ್ರ ಇಸ್ರೇಲ್.
- ತಾನು ಬರುವ ವಿಮಾನದ ಮೇಲೆ ಭಾರತ ರಾಷ್ಟ್ರ ಧ್ವಜವನ್ನು ಹಾರಿಸಿಕೊಂಡು ಗೌರವ ನೀಡುವ ಸದಾ ವಂದಿತ ರಾಷ್ಟ್ರ ಇಸ್ರೇಲ್.
ಅಪ್ಪುಗೆಯ ಸ್ವಾಗತ ಅಪಹಾಸ್ಯ ಮಾಡುವ ಮುನ್ನ ಒಮ್ಮೆ ಯೋಚಿಸಿ ಕಾಂಗಿಗಳೇ..?
ವಿಶ್ವದ ಬಲಿಷ್ಠ ರಾಷ್ಟ್ರ ಇಸ್ರೇಲ್. ಅಂತಹ ರಾಷ್ಟ್ರದ ಪ್ರಧಾನಿ ಭಾರತಕ್ಕೆ ಬರುತ್ತಾರೆ, ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶಿಷ್ಟಾಚಾರ ಮೀರಿ ಸ್ವಾಗತಿಸುತ್ತಾರೇ ಎಂದರೆ ಆ ಸಂಬಂಧಕ್ಕಿರುವ ಆತ್ಮೀಯತೆಯನ್ನು ದೇಶದ ಪ್ರತಿಪಕ್ಷವಾದ ಕಾಂಗ್ರೆಸ್ ಸ್ವಾಗತಿಸಬೇಕಿತ್ತು. ಸೃಜನಾತ್ಮಕ ಸಲಹೆಯನ್ನು ನೀಡಬೇಕಿತ್ತು. ಅದೆಲ್ಲವನ್ನು ಬಿಟ್ಟು ಕೇವಲ ತನ್ನ ಸಣ್ಣತನವನ್ನು ಮೆರೆದು, ನಾನು ರಾಜಕೀಯಕ್ಕೆ ಮಾಡಲಷ್ಟೇ ಲಾಯಕ್ಕು ದೇಶವನ್ನಾಳಲು ಅಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಕೆಲ ಎಡಚರರು ನೆತ್ಯಾನುಹ್ ಭೇಟಿಯನ್ನು ವಿರೋಧಿಸಿ ಘೀಳಿಡುತ್ತಿದ್ದಾರೆ. ಯಾರೂ ಏನೇ ಅನ್ನಿ ಸದೃಢ ರಾಷ್ಟ್ರಕ್ಕಾಗಿ ಮತ್ತೊಂದು ಸದೃಢ ರಾಷ್ಟ್ರದೊಂದಿಗೆ ಭಾರತದ ಸಂಬಂಧ ಮುಂದುವರಿಯಲಿದೆ. ಕಾಂಗಿಗಳೇ ನೀವು ಮೊದಲೇ ದೇಶಕ್ಕೆ ಭಾರವಾಗಿದ್ದೀರಿ… ಇನ್ನಾದರೂ ಬದಲಾಗಿ ರಚನಾತ್ಮಕ ಟೀಕೆಯನ್ನು, ಸಲಹೆಯನ್ನು ನೀಡಿ ಇಲ್ಲದಿದ್ದರೇ ಜನ ನಿಮ್ಮನ್ನು ನೋಡುವ ದೃಷ್ಟಿಯೇ ಬದಲಾದೀತು.
ಇಡೀ ವಿಶ್ವ ಭಾರತದ ನೋಡುತ್ತಿದೆ. ಭಾರತ ಇಡೀ ವಿಶ್ವದ ಗುರುವಾಗುವ ಕಾಲ ಸನ್ನಿಹಿತವಾಗುತ್ತಿದೆ. ಆದರೆ ಕಾಂಗ್ರೆಸ್ಸಿಗರ ಹಳದಿ ಕಣ್ಣಿಗೆ ಮಾತ್ರ ದೇಶದಲ್ಲಿ ಸಮಸ್ಯೆಗಳು ಕಾಣುತ್ತಿವೆ, ಬದಲಾವಣೆಗೆ ದೇಶದ ಜನ ಹಾತೊರೆಯುತ್ತಿದ್ದರೇ ಕಾಂಗ್ರೆಸ್ಸಿಗರು ಮಾತ್ರ ದೇಶದ ಒಳಗೆ ಮತ್ತು ಹೊರ ದೇಶಗಳಲ್ಲಿ ದೇಶದ ಮಾನ ತೆಗೆಯುವಲ್ಲಿ ನಿರತಾಗಿರುವುದು ದೇಶಕ್ಕೆ ಎದುರಾಗಿರುವ ಅತಿ ದೊಡ್ಡ ದುರಂತ.
Leave A Reply