ಮೋದಿ ಹಿಂದೂ ಅಲ್ಲ ಎಂದ ಪ್ರಕಾಶ್ ರೈಗೆ ಶಿಲ್ಪಾ ಗಣೇಶ್ ಹೇಗೆ ಟಾಂಗ್ ನೀಡಿದ್ದಾರೆ ಗೊತ್ತಾ?
ಬೆಂಗಳೂರು: ಪ್ರಕಾಶ್ ರೈ ಯಾವಾಗ ನಟನೆ ಬಿಟ್ಟು ರಾಜಕಾರಣಿ ಹಾಗೆ ಮಾತನಾಡಲು ಆರಂಭಿಸಿದರೋ, ಅಂದಿನಿಂದಲೇ ಅವರ ಇಬ್ಬಂದಿತನ ಢಾಳಾಗಿ ಹೋಗುತ್ತಿದೆ. ಗೌರಿ ಲಂಕೇಶ್ ಹತ್ಯೆಯಾದರೆ ಏನಾಗುತ್ತಿದೆರಿ ಕರ್ನಾಟಕದಲ್ಲಿ ಎನ್ನುವ ರೈ ದೀಪಕ್ ರಾವ್ ಹತ್ಯೆಯಾದರೆ ಬಾಯಿಗೆ ಬೀಗ ಹಾಕಿಕೊಳ್ಳುತ್ತಾರೆ. ಆ ಮೂಲಕ ತಮ್ಮದು ಎಂಥ ಮನಸ್ಥಿತಿ ಬಯಲು ಮಾಡಿಕೊಳ್ಳುತ್ತಾರೆ.
ಅದೇ ರೀತಿ, ನಾನು ಪ್ರಧಾನಿ ನರೇಂದ್ರ ಮೋದಿ ವಿರುದ್ಧ, ಅನಂತಕುಮಾರ್ ಹಗೆಡೆ, ಅಮಿತ್ ಶಾ ಹಾಗೂ ಬಿಜೆಪಿ ವಿರೋಧಿ. ನನ್ನ ಪ್ರಕಾರ ಮೋದಿ, ಶಾ, ಹೆಗಡೆ ಹಿಂದೂಗಳಲ್ಲ ಎಂದು ಹೇಳಿಕೆ ನೀಡಿ ಟೀಕೆಗೊಳಗಾಗಿದ್ದಾರೆ.
ಪ್ರಕಾಶ್ ರೈ ಅವರ ಈ ಮಾತಿಗೆ ನಟ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಅವರು ಸರಿಯಾಗಿಯೇ ಟಾಂಗ್ ನೀಡಿದ್ದು, “ಪ್ರಕಾಶ್ ರೈ ಅವರೇ, ನೀವು ನಟನೆ ಮಾಡಲು ಇದು ರಂಗವೇದಿಕೆ ಅಲ್ಲ, ನೀವು ನಟಿಸುವ ಸಿನಿಮಾ ಅಲ್ಲ. ಇದು ನಿಜವಾದ ಜೀವನ ಹಾಗೂ ನಟನೆಯನ್ನು ಇಲ್ಲಿ ಸುಳ್ಳು ಎಂದು ನಂಬಲಾಗುತ್ತದೆ” ಎಂದು ತೀಕ್ಷ್ಣವಾಗಿ ಕುಟುಕಿದ್ದಾರೆ.
ನರೇಂದ್ರ ಮೋದಿ, ಅಮಿತ್ ಷಾ, ಅನಂತಕುಮಾರ್ ಹೆಗಡೆ ಧರ್ಮದ ಬಗ್ಗೆ ಮಾತನಾಡುವ ನೀವು, ನಿಮ್ಮ ಬಗ್ಗೆ ವಿವರಿಸಿ. ನೀವು ಯಾರಿಗೋಸ್ಕರ ಕೆಲಸ ಮಾಡುತ್ತಿದ್ದೀರಿ ಎಂದು ಉತ್ತರಿಸಿ ಎನ್ನುವ ಮೂಲಕ ಪ್ರಕಾಶ್ ರೈ ಅವರ ಕಾಂಗ್ರೆಸ್ ಪರ ಒಲವನ್ನು ಶಿಲ್ಪಾ ಗಣೇಶ್ ಬಹಿರಂಗಪಡಿಸಿದ್ದಾರೆ.
Leave A Reply