ಪಂಜಾಬಿ ಯುವತಿ ತಲೆ ಕೆಡಿಸಿ ಇಸ್ಲಾಂಗೆ ಮತಾಂತರಿಸಿ ಭಯೋತ್ಪಾದನೆಗೆ ದೂಡಿದ ಉಗ್ರರು
ಇಂಗ್ಲೆಂಡ್: ಬ್ರಿಟನ್ ನಲ್ಲಿ ವಾಸಿಸುತ್ತಿರುವ ಪಂಜಾಬ್ ಮೂಲದ ಯುವತಿಯೊಬ್ಬಳ ಬ್ರೈನ್ ವಾಶ ಮಾಡಿರುವ ಉಗ್ರರು ಅವಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿ, ಐಸಿಸ್ ಪರ ಹೋರಾಟಕ್ಕೆ ಧುಮುಕುವಂತೆ ಪ್ರೇರಣೆ ನೀಡಿದ್ದಾರೆ. ಇದೀಗ ಯುವತಿಯನ್ನು ಅನುಮಾನದ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಹಲವು ಆಘಾತಕಾರಿ ಸತ್ಯಗಳು ಹೊರ ಬಿದ್ದಿವೆ.
18 ವರ್ಷದ ಸಂದೀಪ್ ಸರ್ಮಾ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಮುಸ್ಲಿಂ ಮೂಲಭೂತವಾದಿಗಳ ಜಾಲಕ್ಕೆ ಮರುಳಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾಳೆ. ಅವಳ ವಿರುದ್ಧ ಇಸ್ಲಾಂ ಮೂಲಭೂತವಾದಿ ಉಗ್ರ ಸಂಘಟನೆಗಳೊಂದಿಗೆ ಸೇರಿ ಹಿಂಸಾತ್ಮಕ ಕೃತ್ಯ ನಡೆಸುವ ಕುರಿತು ಪ್ರಕರಣ ದಾಖಲಾಗಿದೆ.
ಬರ್ಮಿಂಗಮ್ ಕ್ರೌನ್ ಕೋರ್ಟ್ ನಲ್ಲಿ ಯುವತಿಯ ವಿಚಾರಣೆ ನಡೆಸಿದಾಗ ‘2017ರ ಜೂನ್ ನಲ್ಲೆ ಸಿರಿಯಾಗೆ ಹೋಗಲು ಯೋಜನೆ ರೂಪಿಸಿದ್ದಳು ಎಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣಗಳು, ಅವಳ ಸಂದೇಶ ವಿನಿಮಯಗಳ ತನಿಖೆ ನಡೆಸಿದಾಗ ‘ಇಸ್ಲಾಂ ರಾಷ್ಟ್ರಕ್ಕಾಗಿ ಸಾಯಲು ಸಿರಿಯಾಗೆ ಹೋಗುತ್ತಿದ್ದೇನೆ ಎಂದು ಘೋಷಿಸಿಕೊಂಡಿರುವುದು ಬಹಿರಂಗವಾಗಿದೆ.
ಐಸಿಸ್ ಉಗ್ರರಿಂದ ಸಂಕಷ್ಟಕ್ಕಿಡಾದವರಿಗೆ ಸೇವೆ ಮಾಡಲು ಸಿರಿಯಾಗೆ ಹೋಗಲು ನಿರ್ಧರಿಸಿದ್ದೇ’ ಎಂದು ಹೇಳಿದ್ದಾಳೆ. ಆದರೆ ಯುವತಿ ಬಳಸಿದ ಸಾಮಾಜಿಕ ಜಾಲತಾಣಗಳು, ಸಂದೇಶಗಳು ಬೇರೆಯದ್ದೇ ಕಥೆ ಹೇಳುತ್ತಿವೆ.
ಪಾಸ್ ಪೋರ್ಟ್ ಗೆ ನಕಲಿ ದಾಖಲೆ ನೀಡಿ ಸಿಕ್ಕಿ ಬಿದ್ದಳು
15ನೇ ವಯಸ್ಸಿನವಳಾಗಿದ್ದಲೇ ಯುವತಿ ಮುಸ್ಲಿಂ ಮೂಲಭೂತವಾದಿ ಸಿದ್ಧಾಂತಕ್ಕೆ ಬಲಿಯಾಗಿದ್ದರಿಂದ ಅವಳ ಪಾಸಪೋರ್ಟ್ ನ್ನು ಯುವತಿ ತಂದೆಯೇ ಪೊಲೀಸರಿಗೆ ನೀಡಿದ್ದರು. ನಂತರ ಯುವತಿ ನಕಲಿ ದಾಖಲೆ ನೀಡಿ, ಸಿರಿಯಾಗೆ ತೆರಳಲು ಪಾಸ್ ಪೋರ್ಟ್ ಪಡೆಯಲು ಯತ್ನಿಸಿದಾಗ, ಪೊಲೀಸರ ಅತಿಥಿಯಾಗಿದ್ದಾಳೆ. ಯುವತಿ ಮೊಬೈಲ್ ನಲ್ಲಿ ಐಸಿಸ್ ನಡೆಸುವ ಕ್ರೌರ್ಯದ ವಿಡಿಯೋಗಳು, ಸಿರಿಯಾಗೆ ತೆರಳು ನಡೆಸಿರುವ ಸಿದ್ಧತೆಗಳ ಕುರಿತು ದಾಖಲೆ ದೊರೆತಿವೆ. ಯುವತಿಗೆ ವಿರುದ್ಧ ಭಯೋತ್ಪಾದಕ ಕೃತ್ಯಕ್ಕೆ ಪ್ರಯತ್ನ ಎಂದು ದೂರು ದಾಖಲಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.
Leave A Reply