ಭಾರತೀಯ ಮುಸ್ಲಿಮರು ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡಬೇಕಂತೆ, ಇದೆಂಥಾ ದಾರಿದ್ರ್ಯ?
ಶ್ರೀನಗರ: ಜಮ್ಮು-ಕಾಶ್ಮೀರದ ವಿಷಯದಲ್ಲಿ ಯಾವಾಗ ಮೂಗು ತೂರಿಸಲು ಆರಂಭಿಸಿತೋ, ಯಾವಾಗ ಶೇಖ್ ಅಬ್ದುಲ್ಲಾ (ಮಾಜಿ ಮುಖ್ಯಮಂತ್ರಿ, ಫಾರೂಕ್ ಅಬ್ದುಲ್ಲಾ ತಂದೆ) ಪಾಕಿಸ್ತಾನದ ಕೈಗೊಂಬೆಯಾಯಿತೋ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು, ಉಗ್ರರ ಅಡಿಯಾಳುಗಳು, ಕಲ್ಲು ತೂರಾಟಗಾರರು ಉದಯಿಸಿದರು. ಸ್ವಾತಂತ್ರ್ಯ ಬಳಿಕ ನೆಹರೂ, ಶೇಖ್ ಅಬ್ದುಲ್ಲಾ ಮಾಡಿದ ತಪ್ಪಿಗೆ ಇಂದಿಗೂ ಕಾಶ್ಮೀರ ಪರಿತಪಿಸುತ್ತಿದೆ.
ಇದಕ್ಕೆ ಮುನ್ನುಡಿಯಾಗಿ ಜಮ್ಮು ಕಾಶ್ಮೀರದ ಡೆಪ್ಯೂಟಿ, ಜಮ್ಮು-ಕಾಶ್ಮೀರ ಮುಸ್ಲಿಂ ವೈಯಕ್ತಿಕ ಮಂಡಳಿ ಉಪಾಧ್ಯಕ್ಷ ನಾಸೀರ್ ಉಲ್ ಇಸ್ಲಾಂ ತನ್ನ ಎಲುಬಿಲ್ಲದ ನಾಲಗೆ ಹರಿಬಿಟ್ಟಿದ್ದು, “ಭಾರತೀಯ ಮುಸ್ಲಿಮರೆಲ್ಲರೂ ಒಗ್ಗೂಡಿ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡಬೇಕು” ಎಂದು ಹೇಳಿಕೆ ನೀಡುವ ಮೂಲಕ ಉದ್ಧಟತನ ಮೆರೆದಿದ್ದಾನೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆತ, “ಭಾರತದಲ್ಲಿ ಲವ್ ಜಿಹಾದ್ ಹಾಗೂ ಗೋ ರಕ್ಷಣೆ ಹೆಸರಲ್ಲಿ ಮುಸ್ಲಿಮರ ಮೇಲೆ ಹಲ್ಲೆಗಳಾಗುತ್ತಿವೆ. ದೇಶದಲ್ಲಿ 2ನೇ ಅತಿಹೆಚ್ಚು ಜನಸಂಖ್ಯೆಯಾಗಿ ಮುಸ್ಲಿಮರಿದ್ದೇವೆ. ಆದರೂ ಹಲ್ಲೆಯಾಗುತ್ತಿದೆ. ಪಾಕಿಸ್ತಾನ ಕೇವಲ 17 ಕೋಟಿ ಜನಸಂಖ್ಯೆಯನ್ನಿಟ್ಟುಕೊಂಡು ಪ್ರತ್ಯೇಕ ರಾಷ್ಟ್ರವಾಯಿತು. ಹಾಗೆಯೇ ಭಾರತದಲ್ಲಿ ಮುಸ್ಲಿಮರಿಗೆ ಭದ್ರತೆ ಇಲ್ಲವೆಂತಾದರೆ ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ ಇಡಬೇಕು” ಎಂದಿದ್ದಾನೆ.
ಪ್ರಸ್ತುತ ಭಾರತೀಯ ಮುಸ್ಲಿಮರು ಭೀತಿಯಲ್ಲೇ ಬದುಕುತ್ತಿದ್ದಾರೆ. ಸರ್ಕಾರ ನಮ್ಮ ಧ್ವನಿಯನ್ನು ಕೇಳುತ್ತಿಲ್ಲ. ಹಾಗಾಗಿ ನಮ್ಮ ಮುಂದೆ ಪ್ರತ್ಯೇಕ ರಾಷ್ಟ್ರದ ಕೂಗು ಬಿಟ್ಟರೆ ಬೇರಾವ ದಾರಿಯಿದೆ? ಎಂದು ನಾಸೀರ್ ಪ್ರಶ್ನಿಸಿದ್ದಾನೆ.
ಆದರೆ ನಾಸೀರ್ ಹೇಳಿದಂತೆ ಭಾರತದಲ್ಲಿ ಮುಸ್ಲಿಮರಿಗೆ ಯಾವ ಭೀತಿಯಿದೆ? ಮುಸ್ಲಿಂ ಮಹಿಳೆಯರಿಗೆ ಅಡ್ಡವಾಗಿದ್ದ ತ್ರಿವಳಿ ತಲಾಖ್ ರದ್ದುಗೊಳಿಸಲು ಕೇಂದ್ರ ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಹಜ್ ಯಾತ್ರೆ ಸಬ್ಸಿಡಿ ಹಣವನ್ನು ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕೆ ಮೀಸಲಿಡುವುದಾಗಿ ಘೋಷಿಸಿದೆ. ಗೋ ರಕ್ಷಣೆ ಹೆಸರಲ್ಲಿ ಅಹಿಂಸೆ ಕೂಡದು ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಎಚ್ಚರಿಸಿದ್ದಾರೆ.
ಭಾರತದಲ್ಲಿ ಮುಸ್ಲಿಮರಿಗೆ ಇಷ್ಟೆಲ್ಲ ಸೌಲಭ್ಯವಿರುವಾಗ, ಸರ್ಕಾರದ ಅಭಯ ಇರುವಾಗ ನಾಸೀರ್ ನಂಥ ಕುತ್ಸಿತ ಮನಸ್ಸಿನವರು ಪ್ರತ್ಯೇಕ ರಾಷ್ಟ್ರದ ಕರೆ ನೀಡುತ್ತಾರೆ ಎಂದರೆ ಇದೆಂಥ ಬೌದ್ಧಿಕ ದಾರಿದ್ರ್ಯ ಇರಬೇಕು? ನಾಚಿಕೆಯಾಗಬೇಕು ಇವರಿಗೆ. ಇಂಥಾ ಮನಸ್ಥಿತಿಗಳ ವಿರುದ್ಧ ಮಾತನಾಡುವ ತಾಕತ್ತು ಆ ಪ್ರಕಾಶ್ ರೈಗಿದೆಯೋ?
Leave A Reply