ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಟೀಕಿಸುವವರೇ ಕೇಳಿ ಚೀನಾದ ಶ್ಲಾಘನೆಯ ಮಾತು
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸವನ್ನು ಟೀಕಿಸುತ್ತಲೇ ದಿನದೂಡುತ್ತಿರುವ ಪ್ರತಿ ಪಕ್ಷಗಳಿಗೆ ಹಲವಾರು ವರದಿಗಳು, ಬೇರೆ ಬೇರೆ ದೇಶಗಳೇ ತಕ್ಕ ಉತ್ತರ ನೀಡುತ್ತಿವೆ. ಅದರ ಸಾಲಿಗೆ ಭಾರತವನ್ನು ಆಗಾಗ ಕೆಣಕುವ ಚೀನಾ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯನ್ನು ಹೊಗಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತದ ವಿದೇಶಾಂಗ ನೀತಿಯಲ್ಲಿ ಕಟುತ್ವ ಕಾಣಿಸಿಕೊಂಡಿದೆ. ಪ್ರಖರ ಮತ್ತು ನಿಖರ ನಿಲುವುಗಳನ್ನು ಹೊಂದುವ ಮೂಲಕ ಭಾರತ ವಿಶ್ವ ಸಮುದಾಯದ ಗಮನ ಸೆಳೆದಿದೆ ಎಂದು ಚೀನಾ ಸರ್ಕಾರದ ಸಂಸ್ಥೆಯೇ ಶ್ಲಾಘನೆ ವ್ಯಕ್ತಪಡಿಸಿದೆ.
ಭಾರತದ ವಿದೇಶಾಂಗ ನೀತಿಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿರುವ ಚೀನಾ ಅಂತಾರಾಷ್ಟ್ರೀಯ ಅಧ್ಯಯನ ಸಂಸ್ಥೆ ರಾಂಗ್ ಯಿಂಗ್ ‘ ಚೀನಾ ಪಾಕಿಸ್ತಾನದ ಜತೆಗೆ ಆಕ್ರಮಣ ಶೀಲ ನಡೆಗಳನ್ನು ತೋರ್ಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ನೆರೆ ರಾಷ್ಟ್ರಗಳೊಂದಿಗೆ ಸೌಹಾರ್ದಯುತ ಸಂಬಂಧಕ್ಕಾಗಿ ಅಧಿಕಾರ ಸ್ವೀಕರಿಸುವ ವೇಳೆ ನೆರೆ ರಾಷ್ಟ್ರಗಳ ಮುಖಂಡರನ್ನು ಆಮಂತ್ರಿಸಿದರು.
ಆದರೆ ಭಾರತದ ವಿರುದ್ಧ ಚಟುವಟಿಕೆಗಳು ನಡೆದಾಗ ‘ವಿಶೇಷವಾಗಿ ಪಾಕಿಸ್ತಾನ ಪ್ರೇರಿತ ದಾಳಿಗಳಾದಾಗ ತಕ್ಕ ಮತ್ತು ಕಠಿಣ ನಿಲುವುಗಳನ್ನು ತಳೆಯುವ ಮೂಲಕ ಗಮನ ಸೆಳೆದಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಮಾಡುವ ಪಾಕಿಸ್ತಾನ ಗಡಿ ದಾಟಿದ್ದರು ಮತ್ತು ಭೂತಾನ ಗಡಿ ದಾಟಿ ದಾಳಿ ಮಾಡುವ ಮೂಲಕ ಭಾರತದ ತಂಟೆಗೆ ಬಂದರೆ ಬಿಡುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ವಿಶ್ವ ಸಮುದಾಯಕ್ಕೆ ನೀಡಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಫಲವಾಗಿದೆ. ಅಲ್ಲದೇ ಚೀನಾದ ಜೊತೆಗೂ ಡೋಕ್ಲಾ ವಿಚಾರವಾಗಿ ಪ್ರಥಮ ಬಾರಿಗೆ ದ್ವೀಪಕ್ಷಿಯ ಚರ್ಚೆ ಏರ್ಪಡುವಂತ ನಿಲುವುಗಳನ್ನು ತಳೆಯುವ ಮೂಲಕ ಶಾಶ್ವತ ಪರಿಹಾರ ಕೊಂಡುಕೊಳ್ಳಲು ಪ್ರಯತ್ನಿಸಿದ್ದರು ಎಂದು ಶ್ಲಾಘನೆ ವ್ಯಕ್ತಪಡಿಸಿದೆ. ಮೋದಿ ಅವರ ಕಠಿಣ, ಸ್ಪಷ್ಟ ನೀತಿಗಳು ಭಾರತವನ್ನು ವಿಶ್ವಸಮುದಾಯವೇ ತಿರುಗಿ ನೋಡುವಂತಾಗಿದೆ ಎಂದು ಚೀನಾ ಸರ್ಕಾರದ ಸಂಸ್ಥೆಯೇ ಶ್ಲಾಘನೆ ವ್ಯಕ್ತಪಡಿಸಿದ್ದು ವಿಶೇಷ.
Leave A Reply