ದಲಿತರೇ ಜಾಸ್ತಿ ಇರುವ ಉತ್ತರ ಪ್ರದೇಶದ ಗೌತಮ್ ನಗರ ಆಗುತ್ತಿದೆ ಇಸ್ಲಾಂ ನಗರ, ಎಲ್ಲಿದ್ದಾರೆ ದಲಿತ ಹೋರಾಟಗಾರರು?
ಲಖನೌ: ಉತ್ತರ ಪ್ರದೇಶ ಸೇರಿ ಇತ್ತೀಚೆಗೆ ದಲಿತ ಮಹಿಳೆಯರ ಮೇಲೆ ಅತ್ಯಾಚಾರ, ಬಲವಂತದ ಮತಾಂತರ ಸೇರಿ ಹಲವು ಪ್ರಕರಣಗಳು ಸುದ್ದಿಯಾಗುತ್ತಿರುವ ಬೆನ್ನಲ್ಲೇ, ಉತ್ತರ ಪ್ರದೇಶದ ಗೌತಮ್ ನಗರ ಎಂಬುದನ್ನು ಇಸ್ಲಾಂ ನಗರ ಎಂದು ಅಂಗಡಿಗಳ ಬೋರ್ಡ್, ಮನೆಗಳ ವಿಳಾಸದಲ್ಲಿ ಮುಸ್ಲಿಮರು ಬಳಸುತ್ತಿದ್ದು, ಜನರನ್ನು ಬೆಚ್ಚಿಬೀಳಿಸುತ್ತಿದೆ.
ಹೌದು, ಮೊದಲಿನಿಂದಲೂ ಗೌತಮ್ ನಗರ ಎಂದೇ ಕರೆಯುತ್ತಿದ್ದು, 12 ಲಕ್ಷ ಜನರಿರುವ ನಗರದಲ್ಲಿ ಶೇ.42ರಷ್ಟು ಜನ ಮುಸ್ಲಿಮರಿದ್ದಾರೆ. ಶೇ.21ರಂದು ಜನ ದಲಿತರಿದ್ದಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಮುಸ್ಲಿಮರು ತಮ್ಮ ಅಂಗಡಿಗಳ ವಿಳಾಸದಲ್ಲಿ ಗೌತಮ್ ನಗರವನ್ನು ಇಸ್ಲಾಂ ನಗರ ಎಂದೇ ಮುದ್ರಿಸುತ್ತಿದ್ದಾರೆ, ಬೋರ್ಡ್ ಮೇಲೆ ಬರೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲ, ಜನರನ್ನು ಬಲವಂತವಾಗಿ ಇಸ್ಲಾಮಿಗೆ ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದು, ಸುಮಾರು 1500ಕ್ಕೂ ಹೆಚ್ಚು ದಲಿತರಿಗೆ ಮತಾಂತರಗೊಳ್ಳದಿದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಒಡ್ಡಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಗೌತಮ್ ನಗರದಲ್ಲಿ ಸುಮಾರು 50ಕ್ಕೂ ಹೆಚ್ಚು ಮುಸ್ಲಿಮರ ಅಂಗಡಿಗಳಿವೆ. ಮುಸ್ಲಿಮರೇ ಜಾಸ್ತಿ ಇದ್ದಾರೆ. ಹಾಗಾಗಿ ಅವರು ನಗರವನ್ನು ಇಸ್ಲಾಂ ನಗರ ಎಂದು ಮರುನಾಮಕರಣ ಮಾಡಲು ಬಯಸುತ್ತಿದ್ದು, 20-25 ಅಂಗಡಿಗಳ ವಿಳಾಸದಲ್ಲಿ ಇಸ್ಲಾಂ ನಗರ ಎಂದೇ ಬರೆಸಲಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ನಗರದ ಹೆಸರು ಬದಲಾವಣೆ ಹಾಗೂ ಬಲವಂತದ ಮತದಾನಕ್ಕೆ ಯತ್ನಿಸುತ್ತಿರುವ ಮುಸ್ಲಿಂ ಮೂಲಭೂತವಾದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಒಟ್ಟಿನಲ್ಲಿ ಬಡ ದಲಿತರು, ದಲಿತ ಮಹಿಳೆಯರು ಇಸ್ಲಾಮಿಕ್ ಮೂಲಭೂತವಾದಕ್ಕೆ ಕುತ್ತಾಗುವ ಎಲ್ಲ ಲಕ್ಷಣಗಳಿದ್ದು, ಇಷ್ಟಾದರೂ ಜಿಗ್ನೇಶ್ ಮೇವಾನಿಯಂತಹ ದಲಿತ ನಾಯಕರು ತುಟಿ ಬಿಚ್ಚದೇ ಇರುವುದು ದುರಂತ.
Leave A Reply