ಮೊಳಗಿದ ಶಂಖನಾದ, ವಿಶ್ವ ದಾಖಲೆ ಸೇರಿತು
ರಾಯಪುರ: ಛತ್ತಿಸ್ ಗಢ್ ಗರೀಬಂದ್ ನಲ್ಲಿ ನಡೆಯುತ್ತಿರುವ ರಜೀಮ್ ಕುಂಭಮೇಳದ ಎರಡನೇ ದಿನವಾದ ಶುಕ್ರವಾರ ಸಹಸ್ರಾರು ಸಂತರು, ಭಕ್ತರು ಏಕಕಾಲಕ್ಕೆ ಶಂಖನಾದ ಮೊಳಗಿಸುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.
ರಜೀಮ್ ಕುಂಭಮೇಳದಲ್ಲಿ ಸಂತರು ಮತ್ತು ನಾಗರೀಕರು ಸೇರಿ 2,100 ಜನರು ಏಕಕಾಲಕ್ಕೆ ಶಂಕನಾದ ಮೊಳಗಿಸಿದ್ದು, ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ದಾಖಲೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಗೆ ಸೇರಿದೆ.
2,100 ಶಂಖಗಳ ನಾಧದಿಂದ ರಜೀಮ್ ಕುಂಭಮೇಳ ನಡೆಯುವ ಇಡೀ ಪ್ರದೇಶ ವಿಶೇಷ ಚೈತನ್ಯ ಪಡೆದಿದೆ. ಈ ಮೂಲಕ ವಿಶ್ವಕ್ಕೆ ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಹರಸಲಾಗಿದೆ. ನಮ್ಮ ಕಾರ್ಯ ವಿಶ್ವ ದಾಖಲೆ ಸೇರಿದೆ. ಇದರಿಂದ ನಮ್ಮ ಕುಂಭ ಮೇಳ ಇಡೀ ವಿಶ್ವದ ಗಮನ ಸೆಳೆದಿದೆ ಎಂದು ಸಂಘಟಕರು ತಿಳಿಸಿದ್ದಾರೆ. ರಜೀಮ್ ಮೇಳದಲ್ಲಿ ಹಲವು ದಾಖಲಗಳು ನಿರ್ಮಾಣವಾಗಿವೆ. ಮೂರು ಲಕ್ಷ ದ್ವೀಪಗಳನ್ನು ಬೆಳಗಿಸುವ ಮೂಲಕ ದಾಖಲೆ ನಿರ್ಮಿಸಲಾಗಿದೆ.
ಫೆ.7ರಂದು ಆರಂಭವಾಗಿರುವ ರಜೀಮ್ ಕುಂಭಮೇಳದಲ್ಲಿ ಸಾವಿರಾರು ಸಾಧು ಸಂತರು ಭಾಗಿಯಾಗಿದ್ದಾರೆ. ಎಲ್ಲರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಛತ್ತೀಸಗಡ್ ಕೃಷಿ ಮತ್ತು ನೀರಾವರಿ ಸಚಿವ ಹೇಳಿದ್ದಾರೆ.
Leave A Reply