ಇಸ್ಲಾಮಿಗೆ ಮತಾಂತರವಾಗು ಎಂದು ಬೆದರಿಕೆಯೊಡ್ಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ದಲಿತ ವ್ಯಕ್ತಿ!
ಲಖನೌ: ದಿನೇದಿನೆ ದೇಶಾದ್ಯಂತ ಲವ್ ಜಿಹಾದ್ ಪ್ರಕರಣಗಳಿಗೆ ಹಿಂದೂ ಯುವತಿಯರ ಜೀವನ ನರಕವಾಗುತ್ತಿರುವ ಬೆನ್ನಲ್ಲೇ, ಇಸ್ಲಾಂ ಮೂಲಭೂತವಾದ ಮತ್ತಷ್ಟು ಅಟ್ಟಹಾಸ ಮೆರೆಯುತ್ತಿದ್ದು, ಮತಾಂತರವಾಗು ಎಂದು ಬೆದರಿಕೆಯೊಟ್ಟಿದ್ದಕ್ಕೆ ಉತ್ತರಪ್ರದೇಶದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಜಾಫರ್ ನಗರ ಜಿಲ್ಲೆಯ ಕಾಕಡಾ ಎಂಬ ಗ್ರಾಮದ ಸುದೇಶ್ ಕುಮಾರ್ ಎಂಬ ದಲಿತ ವ್ಯಕ್ತಿಗೆ ಹಲವು ದಿನಗಳಿಂದ ಕೆಲವು ಪ್ರಭಾವಿ ಮುಸ್ಲಿಂ ವ್ಯಕ್ತಿಗಳು ಇಸ್ಲಾಮಿಗೆ ಮತಾಂತರವಾಗು ಎಂದು ಬೆದರಿಕೆ ಹಾಕಿದ್ದಲ್ಲದೆ, ಆತನ ಜಮೀನು ವಶಕ್ಕೆ ಪಡೆದಿದ್ದರು. ಇದರಿಂದ ಮನನೊಂದ ಆತ ಚಲಿಸುತ್ತಿರುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮತಾಂತರಕ್ಕಾಗಿ ಬೆದರಿಕೆ ಹಾಗೂ ಜಮೀನು ವಶಪಡಿಸಿಕೊಂಡ ಕಾರಣ ಸುದೇಶ್ ಕುಮಾರ್ ಹಾಗೂ ಆತನ ಕುಟುಂಬಸ್ಥರು ಸೇರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ಎದುರು ಫೆಬ್ರವರಿ 10ರಂದು ಪ್ರತಿಭಟನೆ ನಡೆಸಿದ್ದರು. ಆದರೂ ಶೀಘ್ರ ನ್ಯಾಯ ಸಿಗದ ಕಾರಣ ಹಾಗೂ ಒತ್ತಡ ಸಹಿಸದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲ, ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪದಲ್ಲಿ ಸುದೇಶ್ ಕುಮಾರ್ ವಿರುದ್ಧವೇ ಪ್ರಕರಣ ದಾಖಲಾಗಿದ್ದು ಸಹ ಆತ್ಮಹತ್ಯೆಗೆ ಕಾರಣ ಎಂಬ ಮಾತು ಕೇಳುತ್ತಿವೆ. ಆದಾಗ್ಯೂ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಮ್ಯಾಜಿಸ್ಟ್ರೇಟ್ ವೈಭವ್ ಮಿಶ್ರಾ ತಿಳಿಸಿದ್ದಾರೆ.
ಪೊಲೀಸರು ಹಾಗೂ ಮ್ಯಾಜಿಸ್ಟ್ರೇಟ್ ಅವರಿಂದ ನ್ಯಾಯ ಸಿಗುವ ಭರವಸೆ ಕಳೆದುಕೊಂಡಿದ್ದ ಸುದೇಶ್ ಕುಮಾರ್ ಇತ್ತೀಚೆಗೆ ಖಿನ್ನನಾಗಿದ್ದ. ಈ ಕುರಿತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೂ ಪತ್ರ ಬರೆದಿದ್ದ. ಆದರೆ ಸಿಎಂರಿಂದ ಪ್ರತಿಕ್ರಿಯೆ ಬರುವ ಮುನ್ನವೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇತ್ತೀಚೆಗಷ್ಟೇ ಉತ್ತರಪ್ರದೇಶದಲ್ಲಿ ಕೆಲವು ಮುಸ್ಲಿಂ ಯುವಕರು ದಲಿತ ಮಹಿಳೆ ಮುಖ್ಯಸ್ಥೆಯಾಗಿದ್ದ ಕುಟುಂಬದ ಮೇಲೆ ದಾಳಿ ಮಾಡಿ ಹಲ್ಲೆ ಮಾಡಿದ್ದಲ್ಲದೆ, ಅವರ ಮನೆ ಕೆಡವಿ ಉದ್ಧಟತನ ಮಾಡಿದ್ದ ಪ್ರಕರಣ ಮರೆಮಾಚುವ ಮುನ್ನವೇ ಮತ್ತೊಂದು ಇಂಥಾದ್ದೇ ಪ್ರಕರಣ ದಲಿತ ವ್ಯಕ್ತಿಯೊಬ್ಬನ ಪ್ರಾಣವನ್ನೇ ಬಲಿಪಡೆದಿದ್ದು ದುರಂತವೇ ಸರಿ.
Leave A Reply