• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

218.5 ಕೋಟಿ ಹಣ “ನೀರಿ”ನಂತೆ ಪೋಲು ಮಾಡಲು ಶಾಸಕ ಲೋಬೊ ಮತ್ತು ಪಾಲಿಕೆ ರೆಡಿ!

Hanumantha Kamath Posted On February 16, 2018
0


0
Shares
  • Share On Facebook
  • Tweet It

ರಾಜ್ಯ ವಿಧಾನಸಭೆಯ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಮಂಗಳೂರು ಮಹಾನಗರ ಪಾಲಿಕೆ ಮತ್ತು ಶಾಸಕರು ದೊಡ್ಡ ಬುಟ್ಟಿಗೆ ಕೈ ಹಾಕಿದ್ದಾರೆ. ಈ ಬಾರಿ ಬರೋಬ್ಬರಿ 218.5 ಕೋಟಿಯ ದೊಡ್ಡ ಸ್ಕೀಮ್ ಹಿಡಿದು ಚುನಾವಣೆಗೆ ಬೇಕಾದಷ್ಟು ಹಣ ಒಟ್ಟು ಮಾಡಲು ತಯಾರಿಯಲ್ಲಿ ಇದ್ದಂತೆ ಕಾಣುತ್ತದೆ. ಏಶಿಯನ್ ಡೆವೆಲಪ್ ಮೆಂಟ್ ಬ್ಯಾಂಕ್ ನಿಂದ ಎರಡನೇ ಕಂತಿನ ಸಾಲವನ್ನು ತೆಗೆದು ಮಂಗಳೂರಿನ ಜನರಿಗೆ 24*7 ನೀರು ಪೂರೈಸುತ್ತೇವೆ ಎಂದು ಮತ್ತೊಂದು ಸುಳ್ಳಿನ ಕಂತೆಯನ್ನು ಹಿಡಿದು ಗುರುವಾರ ಪಾಲಿಕೆಯ ಸಭಾಂಗಣದಲ್ಲಿ ಮೇಯರ್ ಕವಿತಾ ಸನಿಲ್ ಹಾಗೂ ಇತರರು ಸಮಾಲೋಚನಾ ಸಭೆ ನಡೆಸಿದರು. ಅದಕ್ಕೆ ನಾನು ಕೂಡ ಹೋಗಿದ್ದೆ.

ಕಾಟಾಚಾರಕ್ಕೆ ನಡೆಯಿತು ಸಮಾಲೋಚನೆ…

ಇವರು ಪದ್ಮಾಸನ ಹಾಕಿ ಎದುರಿಗೆ ದೊಡ್ಡ ಬಾಳೆಎಲೆ ಹಿಡಿದು ಭರ್ಜರಿ ಊಟಕ್ಕೆ ಕುಳಿತ ವಿಷಯವನ್ನು ಮತ್ತೆ ಹೇಳುತ್ತೇನೆ. ಮೊದಲಿಗೆ ಈ ಸಮಾಲೋಚನೆ ಸಭೆ ಎಂದು ಕರೆದಿದ್ದಾರಲ್ಲ, ಅದರ ಕುರಿತು ಹೇಳಬೇಕು. ಮಂಗಳೂರಿನವರನ್ನು ಹೇಗೆ ಬೇಕಾದರೂ ಮಂಗ ಮಾಡಬಹುದು. ನಾವು ಏನು ಮಾಡಿದರೂ ಇವರು ಕೇಳುವುದಿಲ್ಲ, ಆದ್ದರಿಂದ ಸಮಾಲೋಚನಾ ಸಭೆ ಎಂಬ ನಾಟಕವನ್ನು ನಾವು ಆಡುವಾಗ ಎದುರಿಗೆ ನಾಲ್ಕು ಜನ ಪ್ರೇಕ್ಷಕರನ್ನು ಇಟ್ಟರೆ ಸಾಕು ಎಂದು ಮೇಯರ್, ಕಮೀಷನರ್ ಹಾಗೂ ಇತರರು ಅಂದುಕೊಂಡಿದ್ದರೆ ಅದು ಅವರ ಮೂರ್ಖತನ. ಅವರು ಮಾಡಿದ್ದು ಅಪ್ಪಟ ಕಾಟಾಚಾರದ ಸಮಾಲೋಚನಾ ಸಭೆ ಎನ್ನುವುದನ್ನು ಮೊದಲಿಗೆ ಹೇಳಲು ಬಯಸುತ್ತೇನೆ. ಯಾವುದೇ ಯೋಜನೆ ಜಾರಿಗೆ ತರುವಾಗಲೇ ನಾಗರಿಕರನ್ನು, ಸರಕಾರೇತರ ಸಂಘ, ಸಂಸ್ಥೆಗಳನ್ನು ಕರೆದು ಸಮಾಲೋಚಿಸುವುದು ಅಗತ್ಯ. ಅದು ನಿಯಮಗಳಲ್ಲಿಯೇ ಇದೆ. ಇಂತಹ ಯೋಜನೆಗಳನ್ನು ಕಾರ್ಯಗತಗೊಳಿಸುವ ಮೊದಲು ಪ್ರತಿ ವಾರ್ಡ್ ನಲ್ಲಿ ಸಾರ್ವಜನಿಕರ ಸಭೆ ಕರೆದು ಅವರಿಂದ ಮಾಹಿತಿ ಪಡೆಯಬೇಕು. ಅದು ಬಿಟ್ಟು ಎಲ್ಲಾ ಮುಗಿದು ಕಾಮಗಾರಿ ಆರಂಭವಾಗುವ ಸಮಯದಲ್ಲಿ ಈ ಸಮಾಲೋಚನೆ ಸಭೆ ಯಾಕೆ ಎಂದು ಪ್ರಶ್ನಿಸಿದೆ. ಈಗಾಗಲೇ ಡಿಟೇಲ್ ಪ್ಲಾನಿಂಗ್ ರಿಪೋರ್ಟ್ (ಡಿಪಿಆರ್) ಸಿದ್ಧವಾಗಿದೆ. ಸರಕಾರದಿಂದ ಇವರು ಯೋಜನೆಯ ರೂಪುರೇಶೆಯನ್ನು ಸ್ಯಾಂಕ್ಷನ್ ಮಾಡಿ ಬಂದಿದ್ದಾರೆ. ಟೆಂಡರ್ ಕೂಡ ಆಗಿದೆ. ಯಾವ ಕೆಲಸ ಆಗಬೇಕು ಎಂದು ಸರಕಾರದ ಇಲಾಖೆಗಳು ಅನುಮತಿ ಕೊಟ್ಟ ಬಳಿಕ ಮತ್ತೆ ಸಮಾಲೋಚನಾ ಸಭೆಯಲ್ಲಿ ನಾವು ಏನು ಮಾತನಾಡಿದರೂ ಅದು ಅಪ್ಪಟ ವೇಸ್ಟ್. ಪಾಲಿಕೆಯಲ್ಲಿ ಮೇಯರ್, ಸದಸ್ಯರಿಗೆ, ಅಧಿಕಾರಿಗಳಿಗೆ ಕೆಲಸ ಇಲ್ಲ ಎಂದು ನಮ್ಮನ್ನು ಕೂಡ ಇವರು ಹಾಗೆ ತಿಳಿದುಕೊಂಡಿದ್ದಾರೆ ಎಂದು ಅನಿಸುತ್ತದೆ. ಅದಕ್ಕೆ ಕೇವಲ ದಾಖಲೆಗಾಗಿ ನಾವು ಸಮಾಲೋಚನಾ ಸಭೆ ಮಾಡಿದ್ದೇವೆ ಎಂದು ತೋರಿಸುವುದಕ್ಕಾಗಿ ಮತ್ತು ಭವಿಷ್ಯದಲ್ಲಿ ಗೋಲ್ ಮಾಲ್ ಆದಾಗ ಅದು ನ್ಯಾಯಾಲಯದ ಮೆಟ್ಟಿಲು ಏರಿದರೆ ಒಂದು ಗುರಾಣಿಯಂತೆ ಇರಲಿ ಎನ್ನುವ ಕಾರಣಕ್ಕೆ ಇವರು ಸಮಾಲೋಚನಾ ಸಭೆ ಮಾಡಿದ್ದಾರೆ ಬಿಟ್ಟರೆ ಅದರಿಂದ ಆಗುವಂತದ್ದು ಏನೂ ಇಲ್ಲ.

2018 ಕ್ಕೆ ಸರಿಯಗಿ ನೀರಿಲ್ಲ, ಇವರು 2046 ಕ್ಕೆ ಕಿವಿ ಮೇಲೆ ಹೂ ಇಟ್ಟಿದ್ದಾರೆ…

ಎಡಿಬಿಯವರು ನಮ್ಮ ಮಂಗಳೂರು ಮಹಾನಗರ ಪಾಲಿಕೆಯನ್ನು ಏನು ಅಂತ ನಂಬಿ ಸಾಲ ಕೊಡುತ್ತಾರೋ ದೇವರೇ ಬಲ್ಲ. ಏಶಿಯನ್ ಡೆವೆಲಪ್ ಮೆಂಟ್ ಬ್ಯಾಂಕಿನವರು ಕೊಟ್ಟ ಮೊದಲ ಹಂತದ ಸಾಲ 318 ಕೋಟಿ ರೂಪಾಯಿ ಹಣವನ್ನು ಅರಬ್ಬಿ ಸಮುದ್ರದಲ್ಲಿ ಇವರು ಬಿಸಾಡಿದಂತೆ ಆಗಿ ಹೋಗಿದೆ. ಇವರಿಗೆ ಹಣ ಕೊಡುವುದೂ ಒಂದೇ, ಹಣವನ್ನು ಮೋರಿಯಲ್ಲಿ ಎಸೆದು ನೀರು ಹಾಕುವುದೂ ಒಂದೇ. 2026 ರ ತನಕ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 24*7 ನೀರು ಪೂರೈಸುತ್ತೇವೆ ಎಂದು ಎದೆತಟ್ಟಿ ಹೇಳಿ 318 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದರು. 2016 ಬಿಡಿ, 2018 ರಲ್ಲಿಯೇ ನಮ್ಮ ಮಂಗಳೂರು ನಗರ ದಕ್ಷಿಣ ಶಾಸಕ ಜೆ ಆರ್ ಲೋಬೋ ಅವರು ಮೇಯರ್ ಕವಿತಾ ಸನಿಲ್ ಅವರನ್ನು ಕರೆದುಕೊಂಡು ಮಂಗಳೂರನ್ನು ಒಂದು ಸುತ್ತಿ ಹಾಕಿ ಬರಬೇಕು. ಇವರ ಯೋಜನೆ ಎಲ್ಲಿ ಮುದುಡಿ ಮಲಗಿದೆ ಎಂದು ಗೊತ್ತಾಗುತ್ತೆ. ಮಂಗಳೂರು ಹೃದಯಭಾಗಗಳಾದ ಮಣ್ಣಗುಡ್ಡೆ, ಉರ್ವಾಸ್ಟೋರ್, ಉರ್ವಾ ಮಾರುಕಟ್ಟೆ, ಕೋಡಿಕಲ್, ಕೊಟ್ಟಾರ, ಶಕ್ತಿನಗರ, ಬಿಕರ್ನಕಟ್ಟೆ ಸಹಿತ ಅನೇಕ ಪ್ರದೇಶಗಳಲ್ಲಿ ಶಾಸಕ ಲೋಬೋ ಹಾಗೂ ಮೇಯರ್ ಕವಿತಾ “ನಿಮ್ಮ ಮನೆಗೆ ನೀರು ಡೈಲಿ 24 ಗಂಟೆ ಬರುತ್ತಾ” ಎಂದು ಕೇಳಿ ನೋಡಲಿ. ಉತ್ತರ ರಪ್ಪನೆ ಮುಖದ ಮೇಲೆ ಹೊಡೆದ ಹಾಗೆ ಬರುತ್ತದೆ. ಹಾಗಿರುವಾಗ ಇವರು ಮತ್ತೆ 218.5 ಕೋಟಿ ರೂಪಾಯಿ ಹಣವನ್ನು ತಂದು ನೀರು ಪೂರೈಸುತ್ತೇವೆ ಎಂದರೆ ಇದಕ್ಕಿಂತ ದೊಡ್ಡ ಹಾಸ್ಯಾಸ್ಪದ ವಿಷಯ ಇನ್ನೊಂದು ಇಲ್ಲ ಎಂದು ಪಾಲಿಕೆಗೆ ಪಾಲಿಕೆಯೇ ಹೇಳಿ ನಗುತ್ತಿದೆ. ಅದು ಕೂಡ ಇವರ ದೂರದೃಷ್ಟಿ ಎಷ್ಟು ಗೊತ್ತಾ, 2046 ರ ತನಕ ಮಂಗಳೂರಿಗೆ 24*7 ನೀರು ಕೊಡುತ್ತೇವೆ ಎನ್ನುವುದು. ಈಗ 2026 ಯೋಜನೆ ಮುಗಿಯಿತು. ನೀರು ಸರಿಯಾಗಿ ಬೆರಳೆಣಿಕೆಯ ವಾರ್ಡುಗಳಿಗೆ ಕೂಡ 24*7 ಪೂರೈಕೆಯಾಗುತ್ತಿಲ್ಲ. ಈಗ 2046 ಗುರಿ ಇಟ್ಟುಕೊಂಡಿದ್ದಾರೆ. ಮತ್ತೆ 218.5 ಕೋಟಿ ಹಾಕಲಿದ್ದಾರೆ. ಅದಕ್ಕೆ ಮೊದಲೇ ಸಮಾಲೋಚನಾ ಸಭೆ ಕರೆದರೆ ಏನಾದರೂ ಸಲಹೆ ಕೊಡಬಹುದಿತ್ತು. ಇವರು ಊಟ ಮಾಡಿ ಕೈ ತೊಳೆಯುವ ಸಮಯಕ್ಕೆ ಸರಿಯಾಗಿ ಸಮಾಲೋಚನಾ ಸಭೆ ಕರೆದಿದ್ದಾರೆ.
ಚುನಾವಣೆ ಖರ್ಚಿಗೆ ಹಣ ಇಲ್ಲ ಎಂದು ಮೊದಲೇ ಬೇಡಿದ್ದರೆ ಜನ ಕೊಡುವುದಿಲ್ಲ ಎಂದು ಗೊತ್ತಿದ್ದ ಕಾರಣ ಹೀಗೆ ಮಾಡಿರಬಹುದು. ಈ ರೀತಿ ಜನರ ತೆರಿಗೆಯ ಹಣವನ್ನು ಪೋಲು ಮಾಡಿ ಜನಪ್ರತಿನಿಧಿ ಆಗುವ ಹಪಾಹಪಿ ಯಾರಿಗೂ ಇರಬಾರದು. ಅದು ಕೂಡ ಒಂದೆರಡು ಕೋಟಿ ಅಲ್ಲ, ಬರೋಬ್ಬರಿ 218.5 ಕೋಟಿ. ಇಷ್ಟು ಖರ್ಚು ಮಾಡಿ ಏನೂ ಪ್ರಯೋಜನವಾಗುವುದಿಲ್ಲ ಎಂದು ನಾನು ಘಂಟಾಘೋಷವಾಗಿ ಹೇಳಬಲ್ಲೆ. ಯಾಕೆಂದರೆ ಈಗ ತುಂಬೆಯಿಂದ ಮಂಗಳೂರಿಗೆ ಪಂಪ್ ಆಗುವ ನೀರು 21 ಎಂಜಿಡಿ. ಇಷ್ಟು ಹಣ ವಿನಿಯೋಗಿಸಿದ ನಂತರ ಈಗಿನದಕ್ಕಿಂತ ಒಂದೇ ಒಂದು ಲೀಟರ್ ನೀರು ಹೆಚ್ಚು ಮಂಗಳೂರಿಗೆ ಬರುತ್ತದೆಯಾ ಎಂದು ನಾನು ಇವರಲ್ಲಿ ಕೇಳಿದೆ. ವೇದಿಕೆಯ ಮೇಲೆ ಕುಳಿತಿದ್ದ ಅತಿರಥ ಮಹಾರಥರಿಂದ ಉತ್ತರ ಇಲ್ಲ. ನೀರು ಜಾಸ್ತಿ ಬರುವುದಿಲ್ಲವಾದರೆ ಹೇಗೆ 24*7 ಪೂರೈಸುತ್ತಿರಿ ಎಂದು ಕೇಳಬೇಕಾದ ಅಗತ್ಯ ಇಲ್ಲ. ಯಾಕೆಂದರೆ ಇದ್ದೆಲ್ಲ ಅವರಿಗೆ ಅಗತ್ಯ ಇಲ್ಲ. ಇವರದ್ದೇನಿದ್ದರೂ ನಮ್ಮ ಕಮೀಷನ್ ಎಷ್ಟು ಎನ್ನುವುದೇ ಲೆಕ್ಕಾಚಾರ!!

0
Shares
  • Share On Facebook
  • Tweet It


LoboMCC


Trending Now
ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
Hanumantha Kamath July 29, 2025
ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
Hanumantha Kamath July 26, 2025
You may also like
ಈ ಬಾರಿ ಪಾಲಿಕೆಗೆ ತಲೆ ಇದ್ದವರು ಬರಲಿ, ಹಸಿವಿದ್ದವರು ಅಲ್ಲ!!
October 22, 2019
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಇಂಟರ್ ಲಾಕ್ ಕಾಂಕ್ರೀಟ್ ಬ್ಯಾಂಡ್ ಗಳು ಪಪ್ಪಡ ಒಡೆದಂತೆ ಒಡೆದು ಹೋಗಿವೆ!
May 24, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ
    • 6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..
    • ಶಿವದೂತ ಗುಳಿಗೆ ನಾಟಕದ "ಭೀಮರಾವ್" ರಮೇಶ್ ಕಲ್ಲಡ್ಕ ನಿಧನ!
    • ನೂರಾರು ಜನರಿಗೆ ಸಾಲಕೊಡಿಸುವ ನೆಪದಲ್ಲಿ ವಂಚನೆ: ರೋಶನ್ ಸಲ್ದಾನಾ ಪ್ರಕರಣ ಸಿಐಡಿಗೆ
    • ಕರ್ನಾಟಕದಲ್ಲಿ "ಮನೆಮನೆಗೆ ಪೊಲೀಸ್" ಏನು ಕಥೆ!
    • ಅಕ್ಟೋಬರ್ 2 ರಂದು ರಿಷಬ್ ಶೆಟ್ಟಿಯ ಕಾಂತಾರ ಅಧ್ಯಾಯ 1 ಬಿಡುಗಡೆ!
  • Popular Posts

    • 1
      ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • 2
      ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • 3
      SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • 4
      ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • 5
      ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ

  • Privacy Policy
  • Contact
© Tulunadu Infomedia.

Press enter/return to begin your search