ಒಬ್ಬೊಬ್ಬರೇ ಭ್ರಷ್ಟ ಉದ್ಯಮಿಗಳು ದೇಶ ಬಿಡುತ್ತಿದ್ದಾರೆಂದರೆ, ಅವರಿಗೆ ಮೋದಿ ನೀಡಿದ ಕಾಟ ಎಂಥಾದ್ದು?
ಈ ಕಾಂಗ್ರೆಸ್ಸಿಗರು ಎಂತಹ ಹಸಿ ಹಸಿ ಸುಳ್ಳುಗಳನ್ನು ಸಹ ಬಿಸಿ ಬಿಸಿಯಾಗಿ ಹರಡಿಸುತ್ತಾರೆ ಎಂಬುದಕ್ಕೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೂಲಕ ಸಾವಿರಾರು ಕೋಟಿ ರೂಪಾಯಿ ಲೂಟಿ ಹೊಡೆದ ನೀರವ್ ಮೋದಿ ವಿದೇಶಕ್ಕೆ ಹಾರುತ್ತಲೇ, ರಾಹುಲ್ ಗಾಂಧಿಯವರು ಮೋದಿ ಅವರೇ ಭ್ರಷ್ಟಾಚಾರ ಎಸಗಿದ್ದಾರೆ ಎಂಬ ರೀತಿ ವರ್ತಿಸುತ್ತಿದ್ದಾರೆ.
ಪ್ರಧಾನಿ ಮೋದಿ ಸರ್ಕಾರವೇ ಅವರಿಗೆ ಸಾಲ ನೀಡಿದ್ದು, ಕೇಂದ್ರ ಸರ್ಕಾರ ಭ್ರಷ್ಟರನ್ನು ಸಾಕುತ್ತಿದೆ, ಶ್ರೀಮಂತರಿಗೆ ಅಪಾರ ಸಾಲ ನೀಡಿ ಬಡವರನ್ನು ಶೋಷಿಸುತ್ತಿದೆ ಎಂಬಂತೆ ಮಾತನಾಡಿದರು. ಎಂತಹ ದುರದೃಷ್ಟ ನೋಡಿ, ಇಡೀ ದೇಶದಲ್ಲೇ ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಎಂಬಂತೆ ಸಾಗಿಬಂದ ಕಾಂಗ್ರೆಸ್ಸಿನಿಂದ ದಿನಕ್ಕೆ 18 ತಾಸು ದೇಶಕ್ಕಾಗಿ ದುಡಿಯುವ ಮೋದಿ ಭ್ರಷ್ಟಾಚಾರದ ಪಾಠ ಹೇಳಿಸಿಕೊಳ್ಳುವಂತಾಗಿದೆ.
ಇರಲಿ, ಈಗ ವಿಷಯಕ್ಕೆ ಬರುವುದಾದರೆ ವಿಜಯ್ ಮಲ್ಯನಿಂದ ಹಿಡಿದು ನೀರವ್ ಮೋದಿ ವಿದೇಶಕ್ಕೆ ಹಾರುವ ಹಿಂದೆ ಮೋದಿ ಸರ್ಕಾರದ ಬಲ ಇದೆಯೇ? ಯಾವ ಸರ್ಕಾರ ಈ ಭ್ರಷ್ಟ ಉದ್ಯಮಿಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ನೀಡಿದೆ? ರಾಹುಲ್ ಗಾಂಧಿ ಹೇಳುತ್ತಿರುವ ಮಾತಿನಲ್ಲಿ ಯಾವ ಹುರುಳಿದೆ? ಅಷ್ಟಕ್ಕೂ ಇವರು ದೇಶವನ್ನೇ ಬಿಟ್ಟು ಹೋಗುವ ಹಾಗೆ ಮಾಡಲು ಮೋದಿ ಅವರು ನೀಡಿದ ಕಾಟ ಎಂಥಾದ್ದು?
ಲಲಿತ್ ಮೋದಿ ಹಗರಣ ಬೆಳಕಿಗೆ ಬಂದಿದ್ದು 2014ಕ್ಕೂ ಮೊದಲು. ಇದೇ ಲಲಿತ್ ಮೋದಿ ದೇಶದಿಂದ ಪಲಾಯನ ಮಾಡಿದ್ದು ಆಗಲೇ. ವಿಜಯ್ ಮಲ್ಯ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿದ್ದು ಯುಪಿಎ ಸರ್ಕಾರದ ಅವಧಿಯಲ್ಲಿ. ಆದರೆ ಆತ ಪರಾರಿಯಾಗಿದ್ದು 2016ರಲ್ಲಿ. ಈಗ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಸಿಲುಕಿ ಹಾಕಿಕೊಂಡಿರುವ ನೀರವ್ ಮೋದಿಗೆ ಕಾಂಗ್ರೆಸ್ ಸರ್ಕಾರ 2011ರಲ್ಲೇ ಸಾಲ ನೀಡಿದೆ.
ಹೀಗಿರುವಾಗ ಮೋದಿ ಅವರು ಹೇಗೆ ಭ್ರಷ್ಟರಾಗುತ್ತಾರೆ? ಅಷ್ಟೇ ಅಲ್ಲ, ಈಗ ರೋಟೋಮ್ಯಾಕ್ ಪೆನ್ ಸಂಸ್ಥೆ ಮಾಲೀಕ ವಿಕ್ರಮ್ ಕೊಠಾರಿ ಸಹ ವಿದೇಶಕ್ಕೆ ಹಾರಿದ್ದಾರೆ.
ಈ ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳ ಆರೋಪ ಕೇಳಬೇಕು. ಯಾವುದೇ ಕಾಂಗ್ರೆಸ್ ಸೇರಿ ಹಲವು ಭ್ರಷ್ಟರ ಮೇಲೆ ಐಟಿ, ಸಿಬಿಐ, ಇಡಿ ದಾಳಿಯಾದಾಗ ಇದೆಲ್ಲ ಮೋದಿ ಅವರ ರಾಜಕೀಯ ಕುತಂತ್ರ ಎಂದು ಬೊಗಳೆ ಬಿಡುತ್ತಾರೆ. ಆದರೆ ವಿಜಯ್ ಮಲ್ಯನಿಂದ ಹಿಡಿದು ವಿಕ್ರಮ್ ಕೊಠಾರಿಯವರ ವರೆಗೆ ಐಟಿ, ಇಡಿ, ಸಿಬಿಐ ದಾಳಿ ಮಾಡಿದೆ.
ಹಾಗೊಂದು ವೇಳೆ ಮೋದಿ ಅವರು ಇವರನ್ನೆಲ್ಲ ಪೋಷಿಸಬೇಕೆಂದಿದ್ದರೆ ಪ್ರಭಾವ ಬಳಸಿ ಈ ದಾಳಿಯನ್ನೇ ಮಾಡಿಸುತ್ತಿರಲಿಲ್ಲ. ಆಗಿದ್ದು ಇಷ್ಟೇ, ಪ್ರಸ್ತುತ ದೇಶದಲ್ಲಿ ನೋಟು ಬ್ಯಾನ್ ಮಾಡಿದ ಬಳಿಕ ಆನ್ ಲೈನ್ ಬ್ಯಾಂಕಿಂಗ್ ಔನ್ನತ್ಯ ತಲುಪಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮೋದಿ ಅವರು ಎಲ್ಲ ಕ್ರಮ ಕೈಗೊಳ್ಳುತ್ತಿದ್ದಾರೆ. ಐಟಿ, ಸಿಬಿಐ, ಇಡಿ ಸಂಸ್ಥೆಗಳು ಪ್ರತಿಯೊಬ್ಬ ಭ್ರಷ್ಟರ ಮನೆಯನ್ನೂ ಗುರಿಯಾಗಿಸಿ ದಾಳಿ ಮಾಡುತ್ತಿದ್ದಾರೆ. ಹೀಗಾಗಿ ಒಬ್ಬೊಬ್ಬರೇ ದೇಶದಿಂದ ಕಾಲ್ಕೀಳುತ್ತಿದ್ದಾರೆ.
ಇಷ್ಟಾದರೂ ಸುಮ್ಮನಿರದ ಕೇಂದ್ರ ಸರ್ಕಾರ ಇವರೆಲ್ಲರ ವಿರುದ್ಧ ಪ್ರಕರಣ ದಾಖಲಾಗುವಂತೆ ಮಾಡಿದೆ. ಇತ್ತೀಚೆಗಷ್ಟೇ ವಿದೇಶಕ್ಕೆ ಹಾರಿದ ವಿಕ್ರಮ್ ಕೊಠಾರಿ ಮೇಲೂ ಪ್ರಕರಣ ದಾಖಲಾಗಿದೆ. ಮಲ್ಯನನ್ನು ಹಸ್ತಾಂತರ ಮಾಡಿ, ನಾವು ಶಿಕ್ಷೆ ವಿಧಿಸುತ್ತೇವೆ ಎಂದು ಬ್ರಿಟನ್ ಸರ್ಕಾರಕ್ಕೆ ಮೋದಿ ನೇತೃತ್ವದ ಸರ್ಕಾರ ಮನವಿ ಮಾಡಿದೆ.
ಭ್ರಷ್ಟರನ್ನು ಹೊಸೆದುಹಾಕಲು ಕೇಂದ್ರ ಸರ್ಕಾರ ಇಷ್ಟೆಲ್ಲ ಮಾಡುತ್ತಿದ್ದರೂ, ಇವರ ಕಾಟ ತಾಳದೆ ಭ್ರಷ್ಟ ಉದ್ಯಮಿಗಳೆಲ್ಲ ದೇಶವನ್ನೇ ಬಿಟ್ಟು ಹೋಗುತ್ತಿದ್ದರು, ಇವರಿಗೆಲ್ಲ ತಾವೇ ಸಾಲ ನೀಡಿ ಪೋಷಿಸಿದ್ದರೂ, ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಮಾತ್ರ ಮೋದಿ ಅವರ ವಿರುದ್ಧವೇ ಆರೋಪಿಸುತ್ತಾರೆ. ದುರಂತವಲ್ಲವೇ ಇದು?
Leave A Reply