ಬಯಲಾಗುತ್ತಿದೆ ಕಾಂಗ್ರೆಸ್ ಬಂಡವಾಳ, ಕೇಂದ್ರ ಮಾಜಿ ಸಚಿವ ಚಿದಂಬರ ಪುತ್ರ ಬಂಧನ
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರಿಗಳ ವಿರುದ್ಧ, ವಿಶೇಷವಾಗಿ ಕಾಂಗ್ರೆಸ್ ಪೋಷಿತ ಭ್ರಷ್ಟಾಚಾರಿಗಳ ಒಂದೋಂದೆ ಹಗರಣಗಳು ಹೊರ ಬರುತ್ತಿದ್ದು, ಇದೀಗ ಐಎನ್‌ಎಕ್ಸ್ ಮೀಡಿಯಾದಲ್ಲಿ ನಡೆದ ಅಕ್ರಮ ವಹಿವಾಟಿನ ಕುರಿತು ಆರೋಪ ಹೊತ್ತಿರುವ ಕೇಂದ್ರದ ಮಾಜಿ ಸಚಿವ ಚಿದಂಬರಂ ಪುತ್ರನನ್ನು ಸಿಬಿಐ ಬಂಧಿಸಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೆ ಕಾರ್ತಿ ಅವರ ಲೆಕ್ಕ ಪರಿಶೋಧಕ ಎಸ್. ಭಾಸ್ಕರ ರಾಮನ್ ಅವರನ್ನು ಹೊಸದಿಲ್ಲಿಯಲ್ಲಿ ಬಂಧಿಸಲಾಗಿತ್ತು. ಇದೀಗ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯ ಷರತ್ತು ಉಲ್ಲಂಘಿಸಿ ಮಾರಿಷಸ್ ನಿಂದ ಹೂಡಿಕೆ ಮಾಡಿರುವ ಪ್ರಕರಣದಲ್ಲಿ ತೆರಿಗೆ ವಂಚನೆ ತನಿಖೆ ಮೇಲೆ ಚಿದಂಬರಂ ಪುತ್ರ ಕಾರ್ತಿ ಮುಂದಾಗಿದ್ದರು. ಈ ಆರೋಪದ ಮೇಲೆ ಸಿಬಿಐ ಚೆನ್ನೈ ಏರ್‌ಪೋರ್ಟ್‌ನಲ್ಲಿ ಕಾರ್ತಿ ಚಿದಂಬರಂರನ್ನು ಬಂಧಿಸಿದೆ.
ಷರತ್ತುಗಳನ್ನು ಉಲ್ಲಂಘಿಸಿ ಮಾರಿಷಸ್‌ನಿಂದ ಹೂಡಿಕೆ ಪ್ರಕರಣದಲ್ಲಿ ತೆರಿಗೆ ವಂಚನೆ ತನಿಖೆ ಮೇಲೆ ಪ್ರಭಾವ ಬೀರಲು ಕಾರ್ತಿ ಮುಂದಾಗಿದ್ದರು. ಅವರು ಐಎನ್‌ಎಕ್ಸ್ ಮೀಡಿಯಾದಿಂದ ಹಣ ಪಡೆದಿರುವ ಬಗ್ಗೆ ರಾಷ್ಟ್ರೀಯ ತನಿಖಾ ತಂಡ ವಿಚಾರಣೆ ಕೈಗೊಂಡಿತ್ತು. ತನಿಖಾ ತಂಡವು ಹತ್ತು ಲಕ್ಷ ರೂ. ವೋಚರ್ ವಶಕ್ಕೆ ಪಡೆದಿದೆ.
ಐಎನ್‌ಎಕ್ಸ್ ಮೀಡಿಯಾ ಕೇಸ್‌ಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಸಮನ್ಸ್‌ಗೆ ತಡೆ ಕೋರಿ ಕಳೆದ ವಾರ ಕಾರ್ತಿ ಅವರು ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದರು. ತನಿಖಾ ತಂಡವು ಜನವರಿ 18ರಂದು ಕಾರ್ತಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಫೆ.2ರಂದು ಸಮನ್ಸ್ ನೀಡಿತ್ತು. ಐಎನ್‌ಎಕ್ಸ್ ಮೀಡಿಯಾ ಕೇಸ್‌ಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಸಮನ್ಸ್‌ಗೆ ತಡೆ ಕೋರಿ ಕಳೆದ ವಾರ ಕಾರ್ತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
Leave A Reply