ಅಂಗದಾನ ಮಾಡಿದಕ್ಕೆ ಫತ್ವಾ ಹೊರಡಿಸಿದ ಮೌಲ್ವಿಗಳು
ಕಾನ್ಪುರ್: ವಿಶ್ವ ಆಧುನಿಕತೆಯತ್ತ ಹೊರಳುತ್ತಿದ್ದರೂ, ಭಾರತದಲ್ಲಿರುವ ಕೆಲವು ಸಂಕುಚಿತ ಮನೋಭವಾದ ಮುಸ್ಲಿಂ ಮೂಲಭೂತವಾದಿಗಳು ಇನ್ನು ಹಳೇ ಸಂಪ್ರದಾಯಕ್ಕೆ ಜೋತು ಬಿದ್ದಿವೆ. ತಮ್ಮದೇ ಮೌಢ್ಯ ಬಿತ್ತುವ ಕಾಯಕದಲ್ಲಿ ತೊಡಗಿಕೊಂಡಿದ್ದು, ಬದಲಾವಣೆಗೆ ಒಗ್ಗಿಕೊಳ್ಳದೇ ತನ್ನದೇ ಧರ್ಮದ ಜನರ ವಿರೋಧವನ್ನು ಭಾರತದಲ್ಲಿರುವ ಕೆಲ ಮುಸ್ಲಿಂ ಮೂಲಭೂತವಾದಿಗಳು ಕಟ್ಟಿಕೊಳ್ಳುತ್ತಿದ್ದಾರೆ. ಅದಕ್ಕೆ ಸಾಕ್ಷಿಯೆಂಬಂತೆ ಉತ್ತರ ಪ್ರದೇಶದಲ್ಲೊಂದು ಘಟನೆ ನಡೆದಿದ್ದು, ಅಂಗದಾನ ಮಾಡಲು ಮುಂದಾಗಿದ್ದ ವ್ಯಕ್ತಿಯ ವಿರುದ್ಧವೇ ಮುಸ್ಲಿಂ ಮೌಲ್ವಿಗಳು ಫತ್ವಾ ಹೊರಡಿಸಿದಲ್ಲದೇ, ಜೀವಬೆದರಿಕೆಯನ್ನು ಹಾಕಲಾಗಿದೆ.
ಉತ್ತರಪ್ರದೇಶದ ಕಾನ್ಪುರದ ಅರ್ಷದ ಮನ್ಸೂರಿ ತನ್ನ ಅಂಗಗಳನ್ನು ನಿಧನದ ನಂತರ ದಾನ ಮಾಡುವ ವಾಗ್ದಾನ ನೀಡಿದ್ದಾರೆ. ಅಂಗಾಂಗ ದಾನ ಮಾಡುವುದು ಇಸ್ಲಾಂನಲ್ಲಿ ನಿಷೀಧವಿದ್ದು, ಯಾವುದೇ ಕಾರಣಕ್ಕೂ ಅಂಗಾಂಗ ದಾನ ಮಾಡಬಾರದು ಎಂದು ಮೌಲ್ವಿಗಳು ಅರ್ಷದ ಮನ್ಸೂರಿ ವಿರುದ್ಧ ಫತ್ವ ಹೊರಡಿಸಿದ್ದಾರೆ ಎಂದು ಮನ್ಸೂರಿ ತಿಳಿಸಿದ್ದಾರೆ. ಅಲ್ಲದೇ ನನಗೆ ಜೀವ ಬೆದರಿಕೆ ಒಡ್ಡುವ ಕರೆಗಳನ್ನು ಮಾಡಿ, ಅಂಗಾಂಗ ದಾನ ಮಾಡಬೇಡ, ಅದು ಇಸ್ಲಾಂಗೆ ವಿರೋಧ ಎಂದು ಎಚ್ಚರಿಕೆ ನೀಡುತ್ತಿದ್ದಾರೆ ಎಂದು ಮನ್ಸೂರಿ ತಿಳಿಸಿದ್ದಾರೆ. ಈ ಕುರಿತು ಪೊಲೀಸರಿಗೂ ದೂರು ನೀಡಿರುವ ಮನ್ಸೂರಿ ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ನನ್ನ ಅಂಗಾಂಗಗಳು ಸಮಾಜದ ಒಳಿತಿಗೆ ನೀಡಲು ನಾನು ಮುಂದಾಗಿದ್ದೇನೆ. ಇದನ್ನು ಇಸ್ಲಾಂ ಸಮುದಾಯದ ಇತರರು ಪಾಲಿಸಬೇಕು ಎಂಬುದು ನನ್ನ ಆಶಯ. ಆದರೆ ಇಸ್ಲಾಂ ಅಂಗಾಂಗ ದಾನ ಮಾಡುವುದು ನಿಷೀಧ ಎಂದು ಅನ್ಸಾರಿ ತಿಳಿಸಿದ್ದಾರೆ.
Leave A Reply