ರಾಮ ಭಕ್ತರಿಗೆ ಹರ್ಷದ ಸುದ್ದಿ: ಶ್ರೀರಾಮಸೇತುವೆಗೆ ಧಕ್ಕೆ ತರಲ್ಲ, ಕೇಂದ್ರ ಸರ್ಕಾರ ಸ್ಪಷ್ಟನೆ
ದೆಹಲಿ: ಕೋಟ್ಯಂತರ ಹಿಂದೂಗಳ ದೈವಕೇಂದ್ರ, ಶ್ರೀರಾಮ ಲಂಕೆಗೆ ಪ್ರಯಾಣ ಬೆಳೆಸಲು ಕಟ್ಟಿದ ಭಾರತ ಶ್ರೀಲಂಕಾ ಮಧ್ಯೆ ಇರುವ ಪೌರಾಣಿಕ ಇತಿಹಾಸ ಹೊಂದಿರುವ ಶ್ರೀರಾಮಸೇತುಯನ್ನು ಧ್ವಂಸ ಗೊಳಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಈ ಮೂಲಕ ಕೇಂದ್ರ ಸರ್ಕಾರ ಕೋಟ್ಯಂತರ ಹಿಂದೂಗಳ ಶ್ರದ್ಧಾ ಕೇಂದ್ರಕ್ಕೆ ಧಕ್ಕೆ ತರುವುದಿಲ್ಲ ಎಂಬ ಭರವಸೆಯನ್ನು ನೀಡಿದೆ.
ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ, ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಪಿಐಎಲ್ ವಿಚಾರವಣೆ ವೇಳೆ ಈ ಕೇಂದ್ರ ಸರ್ಕಾರ ಈ ಅಫಿಡವಿಟ್ ಸಲ್ಲಿಸಿದೆ. ಕೇಂದ್ರ ನೌಕಾ ಸಾರಿಗೆ ಸಚಿವಾಲಯವು ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ದೀಪಕ್ ಮಿಶ್ರಾ ಅವರ ನೇತೃತ್ವದ ಪೀಠಕ್ಕೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಶ್ರೀರಾಮಸೇತುವೆಯನ್ನು ಧ್ವಂಸಗೊಳಿಸುವುದಿಲ್ಲ ಎಂದು ಸ್ಟಷ್ಟನೆ ನೀಡಿದೆ.
ಕೇಂದ್ರ ಸರ್ಕಾರದ ಪರ ಕೋರ್ಟ್ ನಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಕೇಂದ್ರ ಸರ್ಕಾರದ ನಿಲುವುದನ್ನು ನ್ಯಾಯಪೀಠದ ಮುಂದೆ ತಿಳಿಸಿದರು. ರಾಮಸೇತುವನ್ನು ಧ್ವಂಸಗೊಳಿಸದಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಡಾ. ಸುಬ್ರಮಣಿಯನ್ ಸ್ವಾಮಿ ಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ದೇಶದ ಕೋಟ್ಯಂತರ ಜನರ ಭಾವನೆಗಳಿಗೆ ಬೆಲೆ ನೀಡಿ, ದೇಶದ ಹಿತ ಕಾಪಾಡುವ ದೃಷ್ಟಿಯಿಂದ ಶ್ರೀರಾಮಸೇತುವನ್ನು ಧ್ವಂಸಗೊಳಿಸುವುದಿಲ್ಲ. ಸೇತು ಸಮುದ್ರಂ ಯೋಜನೆಗೆ ಬೇರೆ ಮಾರ್ಗ ಕಂಡುಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಅಫಿಡವಿಟ್ ನಲ್ಲಿ ತಿಳಿಸಿದೆ.
Leave A Reply