ನರೇಂದ್ರ ಮೋದಿ ಭ್ರಷ್ಟ ಎನ್ನುವುದಕ್ಕೆ ತಾಕತ್ತಿದ್ದರೆ ಒಂದೇ ಒಂದು ಉದಾಹರಣೆ ತೋರಿಸಿ ರಾಹುಲ್ ಗಾಂಧಿ!
ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲೇ ಭ್ರಷ್ಟಾಚಾರ ಅಡಗಿದೆ. ಲಲಿತ್ ಮೋದಿ, ನೀರವ್ ಮೋದಿ… ಹೀಗೆ ಮೋದಿ ಹೆಸರಿನವರೆಲ್ಲ ಕೋಟ್ಯಂತರ ರೂ. ವಂಚಿಸಿದರು. ನರೇಂದ್ರ ಮೋದಿ ಸಹ ಭ್ರಷ್ಟಾಚಾರಿಯೇ…
ಹೀಗೆ ಹೇಳಿದ್ದು ರಾಹುಲ್ ಗಾಂಧಿ… ಇರಲಿ ಈಗ ರಾಹುಲ್ ಗಾಂಧಿ ಕುಟುಂಬದ ಹಿನ್ನೆಲೆಗೆ ಬರೋಣ…
ದೇಶದ ಮೊದಲ ಹಗರಣ ಜೀಪ್. ಆಗಿನ ಕಾಲದಲ್ಲೇ ಭಾರತ ಸರ್ಕಾರಕ್ಕೆ 80 ಲಕ್ಷ ರೂ. ನಷ್ಟವಾಗಿತ್ತು. ಈ ಹಗರಣ ಬೆಳಕಿಗೆ ಬಂದಿದ್ದು ಜವಾಹರ್ ಲಾಲ್ ನೆಹರೂ ಅವರು ಪ್ರಧಾನಿಯಾಗಿದ್ದಾಗ. ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದ್ದು ಇಂದಿರಾಗಾಂಧಿ. ಈ ಇಂದಿರಾ ಗಾಂಧಿ ನೆಹರೂ ಮಗಳು.
ಇನ್ನು 1987ರಲ್ಲಿ ಬೋಫೋರ್ಸ್ ಹಗರಣ ಬೆಳಕಿಗೆ ಬಂದಾಗಲಂತೂ ನೇರವಾಗಿ ಪ್ರಧಾನಿಯವರ ಹೆಸರೇ ಕೆಳಿಬಂತು. 65 ಕೋಟಿ ರೂ. ಭಾರತದ ಬೊಕ್ಕಸಕ್ಕೆ ನಷ್ಟ ಮಾಡಿದ ಈ ಹಗರಣದಲ್ಲಿ ಕೇಳಿಬಂದ ಹೆಸರು ರಾಜೀವ್ ಗಾಂಧಿ. ಅದಾದ ಬಳಿಕ ದೇಶವನ್ನು ಹತ್ತು ವರ್ಷ ಹಿಂಬಾಗಿಲಿನಿಂದ ಆಳಿದ ಸೋನಿಯಾ ಗಾಂಧಿ ಈಗ ದೇಶದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು.
ಆದರೆ ನರೇಂದ್ರ ಮೋದಿ ಎಂದ ತಕ್ಷಣ ಏನು ನೆನಪಾಗುತ್ತದೆ? ಮೂರು ಬಾರಿ ಸಿಎಂ ಆದರೂ, ಕಳೆದ ನಾಲ್ಕು ವರ್ಷದಿಂದ ದೇಶದ ಪ್ರಧಾನಿಯಾದರೂ ಒಂದೇ ಒಂದು ದಿನ ರಜೆ ತೆಗೆದುಕೊಳ್ಳದವರು, ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟವರು ಎಂದು ಇಡೀ ದೇಶದ ಜನ ಮಾತನಾಡುತ್ತಾರೆ.
ಅಷ್ಟೇ ಏಕೆ, ನರೇಂದ್ರ ಮೋದಿ ಅವರು ಪ್ರಧಾನಿಯಾದರೂ ಇಂದಿಗೂ ಅವರಿಗೆ ದೆಹಲಿ ಸೇರಿ ಎಲ್ಲೂ ಒಂದು ಮನೆಯಿಲ್ಲ, ಓಡಾಡುವುದು ಸರ್ಕಾರಿ ಕಾರಿನಲ್ಲಿ. ನ್ಯಾಷನಲ್ ಹೆರಾಲ್ಡ್ ಹಾಗೆ ಅವರಿಗೊಂದು ಕಂಪನಿಯಿಲ್ಲ. ಕುಟುಂಬಸ್ಥರನ್ನು ರಾಜಕೀಯಕ್ಕೆ ತಂದು ಆಯಕಟ್ಟಿನ ಜಾಗಕ್ಕೆ ಕೂರಿಸಿಲ್ಲ. ಅಸಲಿಗೆ ತಮಗಾಗಿಯೇ ಕೋಟ್ಯಂತರ ರೂ. ಮಾಡಿಕೊಂಡಿಲ್ಲ. ಕುಟುಂಬಸ್ಥರು ಇನ್ನೂ ಬಡತನದಲ್ಲೇ ಇದ್ದಾರೆ, ತಾಯಿ ಆಟೋದಲ್ಲೇ ಓಡಾಡುತ್ತಾರೆ.
ಈಗ ಹೇಳಿ ರಾಹುಲ್ ಗಾಂಧಿಯವರು ಹೇಳಿದ ಮಾತಿನಲ್ಲಿ ಯಾವುದಾದರೂ ಸತ್ಯವಿದೆಯೇ? ಆತ ಹೇಳುವುದು ಕಾಂಗ್ರೆಸ್ಸಿಗೇ ಬೆರಳು ಮಾಡಿ ತೋರಿಸುತ್ತಿಲ್ಲವೇ? ದೇಶಕ್ಕೆ ಮೊದಲ ಹಗರಣ ಕೊಟ್ಟ ಪಕ್ಷದ ಕುಡಿಯಾಗಿರುವ, ಆ ಕುಡಿ ಎಂಬ ಅರ್ಹತೆಯಿಂದಲೇ ಕಾಂಗ್ರೆಸ್ಸಿನ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿಯ ಈ ಎಲುಬಿಲ್ಲದ ನಾಲಿಗೆ ಹೇಳಿರುವ ಮಾತನ್ನು ಏಕೆ ಸೀರಿಯಸ್ಸಾಗಿ ತೆಗೆದುಕೊಳ್ಳಬೇಕು? ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಅಂತಲೋ?
ಇಡೀ ದೇಶದಲ್ಲಿ, ಇದುವರೆಗೆ ನರೇಂದ್ರ ಮೋದಿ ಅವರ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲ. ಯಾವುದೇ ಪ್ರಕರಣ, ತನಿಖೆ, ಅನುಮಾನ, ಆಪಾದನೆ? ಹೂಂ, ಹೂಂ ಯಾವುದೂ ಇಲ್ಲ. ಕಂಪನಿ, ಕಾರು, ಬಂಗಲೆ, ಬ್ಯಾಂಕ್ ಬ್ಯಾಲೆನ್ಸ್ ಯಾವುದೂ ಇಲ್ಲ. ಹೀಗಿರುವಾಗ ಇಂತಹ ಮೋದಿ ಬಗ್ಗೆ ಹಗುರವಾಗಿ ಮಾತನಾಡುವ ರಾಹುಲ್ ಗಾಂಧಿಯ ಬುದ್ಧಿಗೆ ಯಾವ ಮಂಕು ಕವಿದಿದೆ?
ದೇಶದ ಪ್ರಧಾನಿಯಾಗಿ ದೇಶ ಸುತ್ತಿದರೆ ಅದು ಮಜಾ ಮಾಡಲು ಹೋದಂತೆ, ಇದು ಸೂಟು ಬೂಟಿನ ಸರ್ಕಾರ ಎಂದು ಬೊಬ್ಬೆ ಹಾಕುವ ರಾಹುಲ್ ಗಾಂಧಿ, ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತಲೇ ವಿದೇಶಕ್ಕೆ ಹಾರುತ್ತಾರೆ. ನರೇಂದ್ರ ಮೋದಿ ಅವರ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲ. ಆದರೆ ಇದೇ ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಬೇಲ್ ಮೇಲೆ ತಿರುಗಾಡುತ್ತಿದ್ದಾರೆ. ಇಂತಹವರಿಂದ ಭ್ರಷ್ಟಾಚಾರದ ಬಗ್ಗೆ ಕೇಳುವುದು, ಭೂತದ ಬಾಯಲ್ಲಿ ಭಗವದ್ಗೀತೆ ಕೇಳುವುದು ಎರಡೂ ಒಂದೇ ಅಲ್ಲವೇ? ಸೂರ್ಯನ ಕಡೆ ಮುಖ ಮಾಡಿ ಉಗುಳುವುದು ಎಂದರೆ ಇದೇ ಅಲ್ಲವೇ?
Leave A Reply