ಅರುಣ್ ಜೇಟ್ಲಿ ಅವರಿಗಷ್ಟೇ ಅಲ್ಲ, ಕೇಜ್ರಿವಾಲ್ ನಾಲಗೆ ಹರಿಬಿಟ್ಟು ಯಾರ್ಯಾರ ಕ್ಷಮೆ ಕೇಳಿದ್ದಾರೆ ಗೊತ್ತಾ?
ದೆಹಲಿ: ಅರವಿಂದ್ ಕೇಜ್ರಿವಾಲ್ ಎಂದಾಕ್ಷಣ ಅವರೊಬ್ಬ ದೆಹಲಿ ಮುಖ್ಯಮಂತ್ರಿ ಎನ್ನುವುದಕ್ಕಿಂತ ನರೇಂದ್ರ ಮೋದಿ ಸೇರಿ ಬೇರೆ ನಾಯಕರನ್ನು ತೆಗಳುವುದು, ಆಧಾರವಿಲ್ಲದೆ ಆರೋಪ ಮಾಡುವುದರಿಂದಲೇ ಸುದ್ದಿಯಾಗುತ್ತಾರೆ. ಇನ್ನೊಬ್ಬರನ್ನು ಸುಖಾಸುಮ್ಮನೆ ಟೀಕೆ ಮಾಡಲೆಂದೇ ಹುಟ್ಟಿದವರಂತೆ ಆಡುತ್ತಾರೆ.
ಆದರೆ ಅನ್ನಿಸಿಕೊಂಡವರೇನು ಸುಮ್ಮನೆ ಬಿಡುತ್ತಾರೆಯೇ? ಕೇಸು ಜಡಿದು ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ಅದೇ ರೀತಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧವೂ ಸುಖಾಸುಮ್ಮನೆ ಆರೋಪ, ಟೀಕೆ ಮಾಡಿದ್ದ ಕೇಜ್ರಿವಾಲ್ ಅವರಿಗೆ ಜೇಟ್ಲಿ ಇತ್ತೀಚೆಗೆ ಸರಿಯಾದ ಪಾಠ ಕಲಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಆರೋಪ ಮಾಡಿದ್ದರ ವಿರುದ್ಧ ಕಾನೂನು ಸಮರ ಸಾರಿದ್ದ ಅರುಣ್ ಜೇಟ್ಲಿ, ಬರೋಬ್ಬರಿ ಹತ್ತು ಕೋಟಿ ರೂ. ಪರಿಹಾರ ನೀಡಬೇಕು ಎಂದು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಆದರೆ ಇದರಿಂದ ಬಸವಳಿದು ಹೋದ ಅರವಿಂದ್ ಕೇಜ್ರಿವಾಲ್ ಜೇಟ್ಲಿ ಕ್ಷಮೆ ಕೇಳಿದ್ದರು.
ಇದೇ ರೀತಿ ಕಳೆದ ಮಾರ್ಚ್ 16ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕ್ಷಮೆಯನ್ನೂ ಅರವಿಂದ್ ಕೇಜ್ರಿವಾಲ್ ಕೇಳಿದ್ದಾರೆ. ಇಲ್ಲೂ ಮಾನನಷ್ಟ ಮೊಕದ್ದಮೆ ಎದುರಿಸಲಾಗದೆ, ಮಾಡಿದ ಆರೋಪ ಸಾಬೀತುಪಡಿಸಲಾಗದೆ ಕ್ಷಮೆ ಕೇಳಿದ್ದರು ಕೇಜ್ರಿವಾಲ್.
ಅಷ್ಟೇ ಅಲ್ಲ, ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ಪಂಜಾಬ್ ಮಾಜಿ ಸಚಿವ ಮಿಜಿಥಿಯಾ ಅವರ ವಿರುದ್ಧವೂ ಹುರುಳಿಲ್ಲದ ಆರೋಪ ಮಾಡುವ ಮೂಲಕ ಮಾನನಷ್ಟ ಮೊಕದ್ದಮೆ ಎದುರಿಸಲಾಗದೆ ಕ್ಷಮೆ ಕೇಳಿದ್ದಾರೆ. ಇದೇ ಕಾರಣಕ್ಕೆ ಪ್ರಸ್ತುತ ಅರವಿಂದ್ ಕೇಜ್ರಿವಾಲ್ ಅವರು 33 ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದಾರೆ.
ಇದರ ಜತೆಗೆ ಪಕ್ಷದ ಆಂತರಿಕ ಜಗಳವನ್ನೂ ಕೇಜ್ರಿವಾಲ್ ಅವರಿಂದ ಸರಿ ಮಾಡಲು ಆಗುತ್ತಿಲ್ಲ. 20 ಶಾಸಕರ ಅನರ್ಹತೆ, ಬಂಡಾಯದ ನಡುವೆ ಈಗ ಕ್ಷಮೆಯಾಚನೆ ಸರಣಿಯೂ ಕೇಜ್ರಿವಾಲ್ ಅವರನ್ನು ಬಸವಳಿಯುವಂತೆ ಮಾಡುತ್ತಿದೆ. ಅವರ ಪರ ವಕೀಲ ರಾಮ್ ಜೇಠ್ಮಲಾನಿ ಅವರೂ ಸಹ ಕೇಜ್ರಿವಾಲ್ ವಿರುದ್ಧ ಸಂಭಾವನೆ ಕೊಟ್ಟಿಲ್ಲ ಎಂದು ಪ್ರಕರಣ ದಾಖಲಿಸಿದ್ದಾರೆ. ಒಬ್ಬ ನಾಯಕ ಅಭಿವೃದ್ಧಿ ಹೊರತಾಗಿ ಹೀಗೆ ಸುದ್ದಿಯಾದರೆ ಅಭಿವೃದ್ಧಿ ಹೇಗೆ ಆಗಬೇಕು?
Leave A Reply