ಪ್ರಶ್ನೆಪತ್ರಿಕೆ ಬಹಿರಂಗಕ್ಕೂ ಮೋದಿ ಅವರನ್ನೇ ಟೀಕಿಸಿದವರಿಗೆ ಪ್ರತ್ಯುತ್ತರವಾಗಿ ಕೇಂದ್ರ ಸರ್ಕಾರ ಮಾಸ್ಟರ್ ಪ್ಲಾನ್
ದೆಹಲಿ: ಇತ್ತೀಚೆಗೆ ದೇಶದಲ್ಲಿ ಯಾವುದೇ ಮೂಲೆಯಲ್ಲಿ ಯಾವುದೇ ಅವಾಂತರವಾಗಲಿ, ಅದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂಬಂತೆ ಬಿಂಬಿಸಲಾಗುತ್ತದೆ. ಕರ್ನಾಟಕದಲ್ಲಿ ಯಾರ ಹತ್ಯೆಯಾದರೂ, ಯಾವನೋ ಉದ್ಯಮಿ ಬ್ಯಾಂಕುಗಳಿಗೆ ಮೋಸ ಮಾಡಿದರೂ ಅದಕ್ಕೆಲ್ಲ ಕಾರಣ ಮೋದಿಯತ್ತಲೇ ಬೆರಳು ತೋರಿಸುತ್ತಾರೆ.
ಅದೇ ರೀತಿ ಇತ್ತೀಚೆಗೆ ದ್ವಿತೀಯ ಪಿಯುಸಿಯ ಅರ್ಥಶಾಸ್ತ್ರ ಹಾಗೂ ಹತ್ತನೇ ತರಗತಿಯ ಗಣಿತ ಪ್ರಶ್ನೆಪತ್ರಿಕೆಗಳು ಅಚಾತುರ್ಯವಾಗಿ ಬಹಿರಂಗವಾದಾಗಲೂ ಇದಕ್ಕೆಲ್ಲ ಪ್ರಧಾನಿ ಮೋದಿ ಅವರೇ ಕಾರಣ, ಅವರೇ ನಿಂತು ಪ್ರಶ್ನೆಪತ್ರಿಕೆ ಬಹಿರಂಗ ಮಾಡಿಸಿದರು ಎಂಬಂತೆ ಬೊಬ್ಬೆ ಹಾಕಲಾಯಿತು.
ಆದರೂ ಇದಕ್ಕೆ ಪ್ರಧಾನಿ ಮೋದಿ ಅವರು ಒಂದೇ ಒಂದು ಮಾತು ಆಡಲಿಲ್ಲ. ಆದರೆ ಈಗ ಕೇಂದ್ರ ಪ್ರಾಯೋಗಿಕ ಅಂಶಗಳ ಜಾರಿ ಮೂಲಕ ಟೀಕಿಸಿದವರಿಗೆ ಪ್ರತ್ಯುತ್ತರ ನೀಡಲು ಮುಂದಾಗಿದ್ದು, ಇನ್ನು ಮುಂದೆ ಪ್ರಶ್ನೆಪತ್ರಿಕೆ ಬಹಿರಂಗವಾಗದಿರಲು ಮಾಸ್ಟರ್ ಪ್ಲಾನ್ ಮಾಡಿದೆ.
ಹೌದು, ಪ್ರಶ್ನೆಪತ್ರಿಕೆ ಬಹಿರಂಗದ ಹಿಂದಿನ ಕಾಣದ ಕೈಗಳನ್ನು ಭೇದಿಸುವುದು ಹಾಗೂ ಮುಂದೆ ಪ್ರಶ್ನೆಪತ್ರಿಕೆ ಬಹಿರಂಗವಾಗದಂತೆ ತಡೆಯಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸರ್ವ ಅಧಿಕಾರಗಳುಳ್ಳ ಸಮಿತಿಯೊಂದನ್ನು ರಚಿಸಿದ್ದು, ಇನ್ನು ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆಯಲು ಅನುಕೂಲವಾಗುವ ಹಾಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.
ಇದಕ್ಕಾಗಿ ಮಾನವ ಸಂಪನ್ಮೂಲ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆ ನಿವೃತ್ತ ಕಾರ್ಯದರ್ಶಿ ವಿನಯ್ ಶೀಲ್ ಅವರ ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿಯೊಂದು ರಚಿಸಲಾಗಿದೆ. ಈ ತಂಡ ಇತ್ತೀಚೆಗೆ ಪ್ರಶ್ನೆಪತ್ರಿಕೆ ಹೇಗೆ ಬಹಿರಂಗವಾದವು? ಯಾವ ರೀತಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಯಿತು? ಇದರಲ್ಲಿ ಯಾರ ಕೈವಾಡವಿದೆ, ಯಾರ ವೈಫಲ್ಯವಿದೆ ಎಂಬುದು ಸೇರಿ ಮುಂದೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ವರದಿ ತಯಾರಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ಯಾವುದೇ ಅಚಾತುರ್ಯ, ಅನಾಹುತ ನಡೆದರೂ ತಕ್ಷಣ ಕಾರ್ಯಪ್ರವೃತ್ತವಾಗುವ ಮೂಲಕ ಅದಕ್ಕೆ ಕ್ರಮ ಕೈಗೊಳ್ಳುತ್ತದೆ. ಇತ್ತೀಚೆಗೆ ಬ್ಯಾಂಕ್ ಹಗರಣ ನಡೆದಾಗಲೂ ಮೋದಿ ವಿರುದ್ಧವೇ ಆರೋಪ ಮಾಡಲಾಗಿತ್ತು. ಆದರೆ ಎಂದಿನಂತೆ ಟೀಕೆಗೆ ಕಿವಿಗೊಡದ ಕೇಂದ್ರ ಸರ್ಕಾರ ಬ್ಯಾಂಕುಗಳಿಗೆ ಮೋಸ ಮಾಡಿದ ಉದ್ಯಮಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕೋ, ಅದನ್ನು ತೆಗೆದುಕೊಳ್ಳುತ್ತಿದೆ ಎಂಬುದಕ್ಕೆ ನೀರವ್ ಮೋದಿ ಆಸ್ತಿ ಮುಟ್ಟುಗೋಲು ಹಾಕಿಕೊಂಡಿರುವುದೇ ಸಾಕ್ಷಿಯಾಗಿದೆ.
Leave A Reply