• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಚೆನೈ ಅಧ್ಯಯನ ಪ್ರವಾಸದ ವರದಿ ಸಮುದ್ರಕ್ಕೆ ಹಾಕಿದ್ರಾ ಕವಿತಾ ಸನಿಲ್!

Hanumantha Kamath Posted On April 14, 2018
0


0
Shares
  • Share On Facebook
  • Tweet It

ತಮ್ಮ ಮೇಯರ್ ಅವಧಿಯ ಕೊನೆಯಲ್ಲಿ ಕವಿತಾ ಸನಿಲ್ ಅವರು ಚೆನೈ ಪ್ರವಾಸ ಮಾಡಿ ಬಂದಿದ್ದರು. ಅದು ಅವರ ಖಾಸಗಿ ಪ್ರವಾಸವಾಗಿದ್ದರೆ ಇಲ್ಲಿ ಬರೆಯುವಂತಹ ಅಗತ್ಯ ಇಲ್ಲ. ಸಾಮಾನ್ಯವಾಗಿ ಮನೆಯಲ್ಲಿ ಮದುವೆ ಅಥವಾ ಬೇರೆ ಶುಭ ಸಮಾರಂಭಗಳಿದ್ದರೆ ಈ ಕಡೆಯಿಂದ ಚೆನೈಗೆ ಹೋಗಿ ಜರತಾರಿ ಸೀರೆ, ವಸ್ತ್ರಗಳನ್ನು ಖರೀದಿಸುವ ಸಂಪ್ರದಾಯ ಇದೆ. ಹಾಗೆ ಅವರು ಹೋಗಿದ್ದರೆ ಅದು ಅವರ ಖಾಸಗಿ ವಿಚಾರ. ಆದರೆ ಕವಿತಾ ಸನಿಲ್ ಹಾಗೂ 33 ಜನರ ತಂಡ ಚೆನೈಗೆ ತೆರಳಿದ್ದು ಮಂಗಳೂರು ಮಹಾನಗರಕ್ಕೆ ಸಂಬಂಧಿಸಿದ ವಿಚಾರದ ಮೇಲೆ. ಆದ್ದರಿಂದ ಆ ಬಗ್ಗೆ ಹೇಳಲೇಬೇಕು. ಅವರು ಅಲ್ಲಿಗೆ ಹೋಗಿ ಅಧ್ಯಯನ ಮಾಡಿ ಬಂದು ನಗರಾಭಿವೃದ್ಧಿ ಇಲಾಖೆಗೆ ಲಿಖಿತ ವರದಿ ಕೊಟ್ಟಿದ್ದರೆ ಅದರಿಂದ ಏನಾದರೂ ಉಪಕಾರ ಜನರಿಗೆ ಆಗಬಹುದು ಎನ್ನುವ ಕಾರಣಕ್ಕಾದರೂ ಬೇರೆ ವಿಷಯಗಳನ್ನು ಬಿಟ್ಟು ಒಳ್ಳೆಯದಾಗಲಿ ಎಂದು ಹರಸಬಹುದಿತ್ತು. ಆದರೆ ಅವರು ಮತ್ತು ಆ 33 ಜನ ಹೋಗಿ ನೋಡಿ ಬಂದು ಎರಡೂ ತಿಂಗಳಾಯಿತು. ತಾವು ಯಾಕೆ ಹೋಗಿದ್ವಿ, ಏನು ನೋಡಿದ್ವಿ, ಅದರಿಂದ ಯಾರಿಗೆ ಏನು ಲಾಭ ಎಂದು ಯಾವ ವರದಿಯೂ ಕೊಟ್ಟಿಲ್ಲ.

ಅನುಮತಿ ಇದ್ದದ್ದು 8 ಜನಕ್ಕೆ, ಹೋದದ್ದು 33…

ಇಲ್ಲಿ ಎರಡು ವಿಷಯಗಳು ಬರುತ್ತವೆ. ಒಂದನೇಯದಾಗಿ ಒಟ್ಟು ಇವರು ಹೋದದ್ದು ಎಷ್ಟು ಜನ, ಎರಡನೇಯದಾಗಿ ಇವರು ಹೋಗಿ ಬಂದ ವಾರದೊಳಗೆ ವರದಿ ಕೊಡಬೇಕು ಎಂದು ಆದೇಶ ಇದ್ದರೂ ಇವರು ಕೊಡಲಿಲ್ಲ. ಯಾಕೆ? ಅರಬ್ಬಿ ಸಮುದ್ರ ನಮ್ಮ ಭಾರತದ ಈ ಭಾಗದಲ್ಲಿ ಹೇಗೆ ಇದೆಯೋ ಹಾಗೆ ಆ ಭಾಗದಲ್ಲಿಯೂ ಇದೆ. ಇಲ್ಲಿ ಮಂಗಳೂರು ನಗರ ಇದ್ದರೆ ಆ ಕಡೆ ಚೆನೈ ಇದೆ. ಆದರೆ ನಮ್ಮ ಶಾಸಕರೆನಿಸಿಕೊಂಡಿದ್ದವರು ಸೋಮಾರಿಗಳಂತೆ ನಮ್ಮ ಕರಾವಳಿಯನ್ನು ಪ್ರವಾಸಿ ತಾಣವನ್ನಾಗಿಯೂ ಮಾಡಲಿಲ್ಲ, ಹಾಗೆ ವೈಜ್ಞಾನಿಕವಾಗಿಯೂ ಸಮುದ್ರವನ್ನು ಬಳಸದೇ ಸುಮ್ಮನೆ ಮಲಗಿಬಿಟ್ಟಿದ್ದರು. ಆದರೆ ಚೆನೈನಲ್ಲಿ ಹಾಗಲ್ಲ. ಅವರು ಬುದ್ಧಿವಂತರು. ಅವರು ಐವತ್ತು ವರ್ಷದ ನಂತರದ್ದು ಯೋಚಿಸುತ್ತಾರೆ. ಕುಡಿಯುವ ನೀರು ಭವಿಷ್ಯದಲ್ಲಿ ಕೊರತೆ ಉಂಟಾದಾಗ ಏನು ಮಾಡಬಹುದು ಎನ್ನುವ ಲೆಕ್ಕಾಚಾರವನ್ನು ಅವರು ಬಹಳ ಹಿಂದೆನೆ ಹಾಕಿದ್ದಾರೆ. ಅದಕ್ಕಾಗಿ ಅಲ್ಲಿ ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಘಟಕವನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಹೊಸ ಪ್ರಯೋಗ ಅಲ್ಲಿ ಬಹಳ ಹಿಂದೆನೆ ನಡೆದಿದೆ. ನಮ್ಮಲ್ಲೂ ಸಮುದ್ರ ಇದೆ. ಇದು ಶನಿವಾರ, ಆದಿತ್ಯವಾರ ಹುರಿಕಡಲೆ, ಚರುಂಬುರಿ ತಿನ್ನುತ್ತಾ ಅಡ್ಡಾಡುವುದಕ್ಕೆ ಸೀಮಿತವಾಗಿದೆ.

ಯಾವಾಗ ಎತ್ತಿನಹೊಳೆ ತಿರುಗಿಸಿ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗಲಾಗುತ್ತದೆ ಎನ್ನುವುದು ಸಿದ್ಧರಾಮಯ್ಯ ಅವರ ಬಾಯಿಯಲ್ಲಿ ಗ್ಯಾರಂಟಿಯಾಯಿತೊ ಆಗ ಯಾರೋ ಹೇಳಿದರಂತೆ, ಹೇಗೂ ಸಮುದ್ರ ಇದೆಯಲ್ಲಾರಿ, ಆ ನೀರನ್ನೇ ಬಳಸಿ. ಅದಕ್ಕೆ ಸರಿಯಾಗಿ ಮೇಯರ್ ಆಗಿದ್ದ ಕವಿತಾ ಸನಿಲ್ ಆಯುಕ್ತ ನಜೀರ್ ಹಾಗೂ ತಮ್ಮ ಬಳಗದ ಕೆಲವು ಕಾರ್ಪೋರೇಟರ್ ಗಳನ್ನು ಕಟ್ಟಿಕೊಂಡು ಚೆನೈಗೆ ಹೊರಟೇ ಬಿಟ್ಟರು. ನಿಯಮ ಪ್ರಕಾರ ಯಾರಿಗೆಲ್ಲ ಚೆನೈಗೆ ಅಧ್ಯಯನಕ್ಕೆ ಹೋಗಲು ಅನುಮತಿ ಇತ್ತು ಎಂದರೆ ಮಂಗಳೂರು ಮಹಾನಗರ ಪಾಲಿಕೆಯ ಮೂವರು ಸದಸ್ಯರುಗಳು (ಮಹಾಪೌರರು ಒಳಗೊಂಡಂತೆ) ಮೂವರು ಅಧಿಕಾರಿಗಳು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಒರ್ವ ಅಧಿಕಾರಿ ಹಾಗೂ ಶ್ರೀನಿವಾಸ್, ಅಧೀಕ್ಷಕ ಅಭಿಯಂತರು, ಕೆಯುಐಡಿಎಫ್ ಸಿ ಅಂದರೆ ಒಟ್ಟು ಎಂಟು ಜನರಿಗೆ ಮಾತ್ರ ಹೋಗಲು ಅವಕಾಶ ಇತ್ತು. ಯಾಕೆಂದರೆ ಇದು ಮೇಯರ್ ಅವರ ಮನೆಯ ಫಂಕ್ಷನ್ ಅಲ್ಲ. ಎಂಟು ಜನರ ಖರ್ಚು ವೆಚ್ಚಗಳನ್ನು ಕೊಡುವುದು ಸರಕಾರ ಅಂದರೆ ನಮ್ಮ ನಿಮ್ಮ ತೆರಿಗೆಯ ಹಣ. ಇದ್ದದ್ದು ಕೇವಲ ಎರಡು ದಿನಗಳ ಪ್ರವಾಸ. ಆ ಬಗ್ಗೆ ನನ್ನಲ್ಲಿ ದಾಖಲೆ ಇದೆ. ಆದರೆ ಕವಿತಾ ಸನಿಲ್ ಬರೋಬ್ಬರಿ 33 ಜನರನ್ನು ಕರೆದುಕೊಂಡು ಅಧ್ಯಯನ ಪ್ರವಾಸ ಮಾಡಿದ್ದಾರೆ. ಹಾಗಾದರೆ ಇಷ್ಟು ಮಂದಿಯ ಖರ್ಚು ವೆಚ್ಚ ನೋಡಿಕೊಂಡವರು ಯಾರು ಎನ್ನುವುದರ ಬಗ್ಗೆ ಪಾಲಿಕೆಯ ಆಯುಕ್ತರು ಮಾಹಿತಿ ಕೊಡಬೇಕು. ಒಂದು ವೇಳೆ ಪಾಲಿಕೆಯ ಕಡೆಯಿಂದ ಪಾವತಿಯಾಗಿದ್ದರೆ ಅದನ್ನು ಪಾವತಿಸಲು ಅವಕಾಶ ಮಾಡಿಕೊಟ್ಟವರು ಯಾರು? ಎಂಟು ಜನರು ಹೋಗಿ ಬರುವುದಕ್ಕೆ ಆಗುವ ಖರ್ಚಿಗೂ, 33 ಜನರು ಹೋಗಿ ಬರುವುದಕ್ಕೂ ವ್ಯತ್ಯಾಸ ಇಲ್ವಾ? ಒಂದು ವೇಳೆ ಸರಕಾರ ಇಷ್ಟು ಮಂದಿಯ ಖರ್ಚನ್ನು ಕೊಟ್ಟಿಲ್ಲ ಎಂದಾದರೆ ಕೊಟ್ಟಿರುವುದು ಯಾರು? ಒಂದು ಮಾಹಿತಿಯ ಪ್ರಕಾರ ಹೈದ್ರಾಬಾದ ಮೂಲದ ಸಂಸ್ಥೆಯೊಂದು ಮಂಗಳೂರಿನಲ್ಲಿ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಮಾಡುವ ಘಟಕ ನಿರ್ಮಿಸಲು ಆಸಕ್ತಿ ವಹಿಸುತ್ತಿದೆ. ಅದಕ್ಕಾಗಿ ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ಸಿನ ಆರ್ಶೀವಾದವನ್ನು ಕೋರುತ್ತಿದೆ. ಅದೇ ಕಂಪೆನಿ ಇವರ ಸಂಪೂರ್ಣ ಆತಿಥ್ಯವನ್ನು ನೋಡಿಕೊಂಡಿದೆ ಎಂದಾದರೆ ಆ ಸಂಸ್ಥೆ ಇವರನ್ನು “ಚೆನ್ನಾಗಿ” ಇಟ್ಟುಕೊಳ್ಳಲು ತಯಾರಾಗಿದೆ ಎಂದರ್ಥ. ಹಾಗಾದರೆ ಆ ಸಂಸ್ಥೆಗೆ ಇವರು ಇಲ್ಲಿ ಘಟಕ ಸ್ಥಾಪಿಸಲು ಅನುಮತಿ ಕೊಡುವ ಸಾಧ್ಯತೆ ಇದೆಯಾ? ಒಂದು ವೇಳೆ ಇದೆ ಎಂದಾದರೆ ಇದು ಭ್ರಷ್ಟಾಚಾರವಲ್ಲದೆ ಮತ್ತೇನು?

ವಾರದೊಳಗೆ ವರದಿ ಕೊಟ್ಟಿಲ್ಲ..

ಇನ್ನು ಅಧ್ಯಯನ ವರದಿಯನ್ನು ಪ್ರವಾಸದಿಂದ ಹಿಂದಿರುಗಿದ ವಾರದೊಳಗೆ ಸರ್ಕಾರಕ್ಕೆ ಸಲ್ಲಿಸತಕ್ಕದು ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಲಿಖಿತವಾಗಿ ಸೂಚಿಸಿದ್ದಾರೆ. ಅವರು ಈ ಬಗ್ಗೆ ಆಯುಕ್ತರಿಗೆ ಪತ್ರ ಬರೆದದ್ದು 7/4/17 ರಂದು. ಇವರು ತೆರಳಿದ್ದು 9/2/18 ರಂದು. ನಾನು ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಿದ್ದು 26/2/18 ರಂದು. ಇವರು ಅಧ್ಯಯನ ವರದಿ ಕೊಟ್ಟಿದ್ದಾರೆಯೇ ಎಂದು ಕೇಳಿದ್ದೆ. ಪ್ರವಾಸ ಕೈಗೊಂಡ ಪಾಲಿಕೆ ಸದಸ್ಯರ, ಅಧಿಕಾರಿಗಳ ಮತ್ತಿತ್ತರರ ಪಟ್ಟಿಯ ಪ್ರತಿ, ಪ್ರವಾಸ ಖರ್ಚು ವೆಚ್ಚದ ವಿವರ ಪಟ್ಟಿಯ ಪ್ರತಿ ಕೇಳಿದ್ದೆ. ಆದರೆ ಮೂರು ಪ್ರಶ್ನೆಗಳಿಗೂ “ಸದರಿ ಮಾಹಿತಿಗಳಿಗೆ ಸಂಬಂಧ ಪಟ್ಟ ದಾಖಲೆಗಳು ಪರಿಷತ್ತು ವಿಭಾಗದಲ್ಲಿ ಲಭ್ಯವಿರುವುದಿಲ್ಲ” ಎನ್ನುವ ಉತ್ತರ ಬಂದಿದೆ!

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Hanumantha Kamath September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Hanumantha Kamath September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search