ಮಸೀದಿ ಆವರಣದಲ್ಲೇ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದ ಮೌಲ್ವಿ ಕುರಿತು ಯಾರೂ ಏಕೆ ಮಾತಾಡಲ್ಲ?
ಲಖನೌ: ಮೊದಲೇ ಹೇಳಿಬಿಡುತ್ತೇವೆ. 8 ವರ್ಷದ ಮುಸ್ಲಿಂ ಬಾಲಕಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದು ಖಂಡನೀಯ. ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದರೂ ಆ ಶಿಕ್ಷೆ ಪಾಪಿಗಳಿಗೆ ಕಡಿಮೆಯೇ.
ಆದರೆ, ಬಾಲಕಿಯನ್ನು ದೇವಾಲಯದಲ್ಲಿ ಅತ್ಯಾಚಾರ ಮಾಡಲಾಗಿದೆ ಎಂಬ ಒಂದೇ ಒಂದು ಕಾರಣಕ್ಕೆ ಇಡೀ ದೇವಾಲಯಗಳನ್ನು, ಹಿಂದೂಗಳನ್ನು ಟೀಕಿಸಲಾಗುತ್ತಿದೆ. ಎಲ್ಲ ಬುದ್ಧಿಜೀವಿಗಳು, ಸಾಮಾಜಿಕ ಜಾಲತಾಣದಲ್ಲಿರುವ ಜೀವಪರರು ಹಿಂದೂಗಳ ವಿರುದ್ಧ, ಹಿಂದುತ್ವದ ವಿರುದ್ಧ ಸಮರ ಸಾರಿದ್ದಾರೆ.
ಆದರೆ, ಉತ್ತರ ಪ್ರದೇಶದ ಭಾಗತ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮೊರಾದಾಬಾದ್ ನ ಮಸೀದಿಯೊಂದರ ಆವರಣದಲ್ಲೇ 14 ವರ್ಷದ ಬಾಲಕಿ ಮೇಲೆ ಮಸೀದಿಯ ಮೌಲ್ವಿ ಹಾಗೂ ಅಂಗಡಿ ಮಾಲೀಕ ಸೇರಿ ಅತ್ಯಾಚಾರ ಎಸಗಿದ್ದಾರೆ.
ಮಸೀದಿಯಲ್ಲಿ ತರಗತಿ ಮುಗಿದ ಬಳಿಕ ಮಗಳು ಮನೆಗೆ ಬರಲು ಯತ್ನಿಸಿದ್ದಾಳೆ. ಆಗ ತಡೆದ ಮೌಲ್ವಿ ಜಾಕೀರ್ ಮಗಳಿಗೆ ಮಸೀದಿಯ ಕಸ ಗುಡಿಸು ಎಂದು ತಿಳಿಸಿದ್ದಾನೆ. ಈ ವೇಳೆ ಮೌಲ್ವಿ ಹಾಗೂ ಪಕ್ಕದ ಅಂಗಡಿಯ ಮಾಲೀಕ ಸೇರಿ ನನ್ನ ಮಗಳನ್ನು ಅತ್ಯಾಚಾರ ಮಾಡಿರುವುದಾಗಿ ಬಾಲಕಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ಭಾಗವಾನ್ಪುರ ಪೊಲೀಸ್ ಅಧಿಕಾರಿ ಅಖಿಲೇಶ್ ಪ್ರಧಾನ್ ತಿಳಿಸಿದ್ದಾರೆ.
ಇಷ್ಟಾದರೂ ಯಾವುದೇ ಮಾಧ್ಯಮಗಳು, ಬುದ್ಧಿಜೀವಿಗಳು, ಸಾಮಾಜಿಕ ಜಾಲತಾಣದಲ್ಲಿ ಏಕಾಭಿಮುಖವಾಗಿ ಸಕ್ರಿಯರಾಗಿರುವ ಜೀವಪರರು ಸೊಲ್ಲೆತ್ತಿಲ್ಲ. ಯಾರೂ ಮೌಲ್ವಿಯ ಕೃತ್ಯವನ್ನು ಖಂಡಿಸಿಲ್ಲ. ಜಸ್ಟಿಸ್ ಫಾರ್ ಲೇಡೀಸ್ ಹೋರಾಟಕ್ಕೆ ಇಳಿದಿಲ್ಲ. ಯಾವ ಪ್ರಗತಿಪರರೂ ಟಿವಿಯಲ್ಲಿ ಕೂತು ಗಂಟೆಗಟ್ಟಲೇ ಚರ್ಚಿಸಿಲ್ಲ. ಏಕೆ ಎಂಬ ಪ್ರಶ್ನೆಯಲ್ಲೇ ಇವರ ಇಬ್ಬಂದಿತನ, ವಿಚಾರ ನಪುಂಸಕತೆ ಅಡಗಿದೆ.
Leave A Reply