ಸಂಗೀತಗಾರನೊಬ್ಬನಿಗೆ ಸಿಎಂ ಸಿದ್ದರಾಮಯ್ಯ ಸಂಬಂಧಿಕರು 1.5 ಲಕ್ಷ ರೂ, ವಂಚನೆ ಮಾಡಿದರೇ?
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣೆ ಪ್ರಚಾರದಲ್ಲಿ ಅಬ್ಬರವಾಗಿ ತೊಡಗಿದ್ದಾರೆ. ತಾವೊಬ್ಬ ಸಮಾಜವಾದಿ ಎಂದು ಹೇಳಿಕೊಳ್ಳುವ ಅವರು 750 ಕೆ.ಜಿ. ತೂಕದ ಸೇಬಿನ ಹಾರ ಹಾಕಿಕೊಂಡು ಪೋಸ್ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಆಡಳಿತವಿರೋಧಿ ಅಲೆಯಿದ್ದರೂ ಶತಾಯ-ಗತಾಯ ಗೆಲ್ಲಲು ಸಿಎಂ ಚಿಂತನೆ ನಡೆಸಿದ್ದಾರೆ.
ಆದರೆ ಇದೆಲ್ಲದರ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹತ್ತಿರದ ಸಂಬಂಧಿಯೊಬ್ಬರು ಬೆಂಗಳೂರಿನ ಸಂಗೀತಗಾರರೊಬ್ಬರಿಗೆ 1.50 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೌದು, ಬೆಂಗಳೂರಿನ ಹನುಮಂತನಗರದಲ್ಲಿ ನೆಲೆಸಿರುವ ಸಂಗೀತಗಾರರಾದ ಶಿವಾನಂದ ಎಂಬುವವರ ಬಳಿ 2016ರಲ್ಲಿ ಬಂದ ಶ್ರೀ ಪಾತಾಳೇಶ್ವರ ಸಾಂಸ್ಕೃತಿಕ ಕಲಾ ಟ್ರಸ್ಟ್ ಎಂಬ ಸಂಸ್ಥೆ ಸಂಸ್ಥಾಪ ಹಾಗೂ ಸಂಗೀತಗಾರರೂ ಆಗಿರುವ ಬಸವರಾಜು ಎಂಬುವವರು ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯಿಂದ ಸಂಗೀತ ಕಾರ್ಯಕ್ರಮಕ್ಕಾಗಿ ಆರ್ಡರ್ ಬರುತ್ತವೆ. ಅದಕ್ಕಾಗಿ ನೀವು 1.50 ಲಕ್ಷ ರೂ, ನೀಡಬೇಕು ಎಂದು ತಿಳಿಸಿದ್ದಾರೆ.
ಇದಕ್ಕೆ ಒಪ್ಪಿದ ಶಿವಾನಂದ್ 1.50 ಲಕ್ಷ ರೂಪಾಯಿಯನ್ನು ಬಸವರಾಜು ಅವರಿಗೆ ನೀಡಿದ್ದಾರೆ. ಆದರೆ ಕೆಲವು ತಿಂಗಳಾದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆರ್ಡರ್ ಬರದೇ ಇರುವುದನ್ನು ಕಂಡ ಶಿವಾನಂದ್ ಬಸವರಾಜು ಅವರಿಗೆ ಕರೆ ಮಾಡಿದ್ದಾರೆ. ಇದಕ್ಕೆ ಬಸವರಾಜು ಪ್ರತಿಕ್ರಿಯೆ ನೀಡಿಲ್ಲ ಎಂದು ಶಿವಾನಂದ್ ದೂರಿದ್ದಾರೆ.
ಕೊನಗೆ ಇದರಿಂದ ಬೇಸತ್ತ ಶಿವಾನಂದ್ ಈಗ ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯದ ಪ್ರಕರಣವನ್ನು ತನಿಖೆ ಮಾಡಬೇಕು ಎಂದು ಸೂಚಿಸಿದೆ.
ಅಷ್ಟೇ ಅಲ್ಲ, 2017ರಲ್ಲಿ ಶಿವಾನಂದ್ ಅವರು ಬಸವರಾಜ್ ಅವರನ್ನು ಭೇಟಿ ಮಾಡಿ ಹಣ ನೀಡುವಂತೆ ಕೇಳಿದರೆ, ಸಿದ್ದರಾಮಯ್ಯ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಸಾವಿನ ಬಳಿಕ ಅವರ ಸ್ಮರಣಾರ್ಥವಾಗಿ ಕಾರ್ಯಕ್ರಮ ಆಯೋಜಿಸಿ, ಬಡವರಿಗೆ ಪುಸ್ತಕ ಪೆನ್ನು ನೀಡಲು ಆ ಹಣ ಉಪಯೋಗಿಸಲಾಗಿದೆ ಎಂದು ಬಸವರಾಜು ತಿಳಿಸಿರುವುದಾಗಿ ಶಿವಾನಂದ ದೂರಿದ್ದಾರೆ.
ಒಟ್ಟಿನಲ್ಲಿ ಚುನಾವಣೆ ಹೊಸ್ತಿಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಸಂಬಂಧಿಕರೊಬ್ಬರು ಸಂಗೀತಗಾರನಿಗೆ ಒಂದೂವರೆ ಲಕ್ಷ ರೂಪಾಯಿ ಮೋಸ ಮಾಡಿರುವ ಪ್ರಕರಣ ಹೊರಬಿದ್ದಿದ್ದು ಸಿದ್ದರಾಮಯ್ಯನವರಿಗೆ ಹಿನ್ನಡೆ ತಂದಿದೆ. ಆದರೆ ಈ ಕುರಿತು ಸಿಎಂ ಹೇಗೆ ಪ್ರತಿಕ್ರಿಯಿಸುತ್ತಾರೋ?
Leave A Reply