• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕರಾವಳಿಯಲ್ಲಿ ಕಾಂಗ್ರೆಸ್ ಬಂಟರಿಗೆ ಮೂರು ಕಡೆಗಳಲ್ಲಿ ಆಸೆ ತೋರಿಸಿದ್ದೇ ಬಂತು!!

Hanumantha Kamath Posted On April 25, 2018


  • Share On Facebook
  • Tweet It

ಮಂಗಳೂರು ನಗರ ಉತ್ತರದಲ್ಲಿ ಈ ಬಾರಿ ಭಾರತೀಯ ಜನತಾ ಪಾರ್ಟಿ ಯುವ ಮುಖವನ್ನು ಕಣಕ್ಕೆ ಇಳಿಸಿದೆ. ಈ ಮೂಲಕ ಕರಾವಳಿಯಲ್ಲಿ ಹೊಸ ಯುವ ಮುಖಗಳು ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗೆ ಇಳಿದಿವೆ. ಜಾತಿ ಲೆಕ್ಕಾಚಾರವನ್ನೇ ಮಂಗಳೂರು ನಗರ ಉತ್ತರದಲ್ಲಿ ನೋಡುವುದಾದರೆ ಬಂಟ ಮತದಾರರು ಕಾಂಗ್ರೆಸ್ಸಿನಿಂದ ಬೇಸರಗೊಂಡಿದ್ದಾರೆ. ಯಾವ ಕಾರಣಕ್ಕೂ ಕಾಂಗ್ರೆಸ್ಸಿಗೆ ಮತ ಕೊಡುವ ಮೊದಲು ಯೋಚಿಸುವ ನಿಧರ್ಾರಕ್ಕೆ ಬಂದಿದ್ದಾರೆ. ಕಾರಣ ವಿಜಯ ಕುಮಾರ ಶೆಟ್ಟಿಯವರಿಗೆ ಟಿಕೆಟ್ ಕೊಡದೇ ಅನ್ಯಾಯ ಮಾಡಿರುವುದು.
ಅರ್ಹವಾಗಿ ವಿಜಯ ಕುಮಾರ್ ಶೆಟ್ಟಿಯವರಿಗೆ ಈ ಬಾರಿ ಟಿಕೆಟ್ ಕೊಡಲೇಬೇಕಿತ್ತು. ಕಾರಣ ಸ್ವತ: ಕಾಂಗ್ರೆಸ್ಸಿನ ಉನ್ನತ ನಾಯಕರು ಪ್ರಾಮಿಸ್ ಮಾಡಿರುವುದು. ಕಳೆದ ಬಾರಿಯೇ ಶೆಟ್ರಿಗೆ ಟಿಕೆಟ್ ಸಿಗಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸೋನಿಯಾ ಗಾಂಧಿಯವರ ಆಪ್ತರಾಗಿದ್ದ ಎಕೆ ಆಂಟನಿ ಮಂಗಳೂರಿಗೆ ಬಂದು ನಿಮ್ಮನ್ನು ವಿಧಾನಪರಿಷತ್ ಗೆ ಕರೆದುಕೊಂಡು ಹೋಗುತ್ತೇವೆ. ಈ ಬಾರಿ ಮೊಯ್ದೀನ್ ಬಾವ ಅವರಿಗೆ ಅವಕಾಶ ಮಾಡಿಕೊಡಿ ಎಂದು ವಿನಂತಿಸಿಕೊಂಡಿದ್ದರು. ವಿಜಯ ಕುಮಾರ್ ಶೆಟ್ಟಿ ಒಪ್ಪದೇ ಹೇಳಿದಾಗ ಇದು ಮೇಡಂ ಸೂಚನೆ ಎಂದು ಹೇಳಿ ವಿಜಯ ಕುಮಾರ್ ಶೆಟ್ಟಿಯವರ ಬಾಯಿ ಮುಚ್ಚಿಸಿದ್ದರು. ನಂತರ ವಿಧಾನ ಪರಿಷತ್ ಗೆ ನಾಮ ನಿದರ್ೇಶನ ಮಾಡುವ ಸಂದರ್ಭ ಬಂದಾಗ ಕಾಂಗ್ರೆಸ್ಸಿಗರು ಮಾಡಿದ್ದು ಮತ್ತೆ ಜಾತಿ-ಧರ್ಮದ ರಾಜಕೀಯ. ಮೊದಲೇ ನಾಲ್ಕು ಮಂದಿ ಅಲ್ಪಸಂಖ್ಯಾತರನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಸಕರನ್ನಾಗಿ ಕಾಂಗ್ರೆಸ್ ಹೊಂದಿದ್ದರೂ ಮತ್ತೆ ಎಂಎಲ್ ಸಿಯನ್ನಾಗಿ ಐವನ್ ಡಿಸೋಜಾ ಅವರನ್ನು ಆಯ್ಕೆ ಮಾಡಲಾಯಿತು. ವಿಜಯ ಕುಮಾರ್ ಶೆಟ್ಟಿಯವರು ತಮಗೆ ಕೊಟ್ಟ ಭರವಸೆಯನ್ನು ಕಾಂಗ್ರೆಸ್ ಉನ್ನತ ನಾಯಕರಿಗೆ ನೆನಪಿಸಿದರೂ ಅದನ್ನು ಕೇಳುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಅದರ ನಂತರ ಮತ್ತೆ ಈಗ ವಿಧಾನಸಭಾ ಚುನಾವಣೆ ಬಂದಿದೆ. ವಿಜಯ ಕುಮಾರ್ ಶೆಟ್ಟಿಯವರಿಗೆ ಟಿಕೆಟ್ ಮರೀಚಿಕೆಯಾಗಿದೆ. ಹಾಗಾದರೆ ಕಾಂಗ್ರೆಸ್ಸಿಗರಿಗೆ ಬಂಟರಿಗಿಂತ ಅಲ್ಪಸಂಖ್ಯಾತರೇ ಮುಖ್ಯವಾದರಾ? ವಿಜಯ ಕುಮಾರ್ ಶೆಟ್ಟಿ ಅವರನ್ನು ಬಂಟರು ಎನ್ನುವ ಕಾರಣಕ್ಕೆ ಟಿಕೆಟ್ ಕೊಡಬೇಕು ಎಂದು ಯಾರೂ ಹೇಳುವುದಿಲ್ಲ. ಆದರೆ ಭ್ರಷ್ಟಾಚಾರದ ವಿಷಯ ಬಂದಾಗ ಮೊಯ್ದೀನ್ ಬಾವ ಅವರಿಗಿಂತ ಅಸಂಖ್ಯಾತ ಪಾಲು ಬೆಟರ್ ಎಂದೇ ಕಾಂಗ್ರೆಸ್ ನಾಯಕರ ಅಭಿಪ್ರಾಯ. ವಿಜಯ ಕುಮಾರ್ ಶೆಟ್ಟಿಯವರಿಗೆ ಸ್ಪರ್ಧಿಸಲು ಅವಕಾಶ ನೀಡದೆ ಕಾಂಗ್ರೆಸ್ ಹೈಕಮಾಂಡ್ ಮೋಸ ಮಾಡಿರುವುದರ ಬಗ್ಗೆ ಬಂಟ ಸಮುದಾಯಕ್ಕೆ ಬೇಸರವಿದೆ. ನಿಮಗೆ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಬೇಡಿ ಎಂದು ನಾವು ಹೇಳಿಲ್ಲ. ಆದರೆ ಲೆಕ್ಕಕ್ಕಿಂತ ಜಾಸ್ತಿ ಯಾಕೆ ಕೊಡುವುದು ಎನ್ನುವುದು ಜನರ ಪ್ರಶ್ನೆ. ಆ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲಿ ಬಂಟ ಯುವ ಮುಖಂಡರಿಗೆ ಟಿಕೆಟ್ ಕೊಟ್ಟಿರುವುದರಿಂದ ನಾವು ಬಿಜೆಪಿಗೆ ಮತ ಹಾಕಿ ನಮ್ಮ ಕೋಪ ತೋರಿಸಲಿದ್ದೇವೆ ಎನ್ನುವುದು ಬಂಟರ ಅಭಿಪ್ರಾಯ. ಮಂಗಳೂರು ನಗರ ಉತ್ತರದಲ್ಲಿ ಅಭಿವೃದ್ಧಿ ಏನಾದರೂ ಆಗಿದೆ ಎಂದರೆ ಅದು ವಿಜಯ ಕುಮಾರ್ ಶೆಟ್ಟಿಯವರು ಶಾಸಕರಾಗಿದ್ದಾಗ, ಆದ್ದರಿಂದ ಮೊಯ್ದೀನ್ ಬಾವ ಅವರಿಗೆ ಕೊಡುವುದಕ್ಕಿಂತ ನಮ್ಮದೇ ಸಮುದಾಯದ ಯುವಕನಿಗೆ ಕೊಡೋಣ ಎಂದು ಬಂಟರು ಅಂದುಕೊಂಡರೆ ಅದು ಡಾ| ಭರತ್ ಶೆಟ್ಟಿಯವರಿಗೆ ಅನುಕೂಲವಾಗಲಿದೆ.

ಮೂಡಬಿದ್ರೆಯಲ್ಲಿ ಶಾಸಕರೇ ಆಕಾಶ ತೋರಿಸಿದರು…

ಇನ್ನು ಮೂಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರ, ಅಲ್ಲಿ ಕೂಡ ಕಾಂಗ್ರೆಸ್ ಮೋಸ ಮಾಡಿದ್ದು ಮತ್ತೊಬ್ಬ ಬಂಟ ನಾಯಕನಿಗೆ. ಅಲ್ಲಿ ನಾಲ್ಕು ಬಾರಿ ಗೆದ್ದು ಅಧಿಕಾರ ನಡೆಸಿರುವ ಅಭಯಚಂದ್ರ ಜೈನ್ ಅವರಿಗೆ ಈ ಬಾರಿಯೂ ಶಾಸಕನಾಗಲೇಬೇಕು ಎಂದು ಮನಸ್ಸಿದ್ದರೆ ಒಬ್ಬ ಬಂಟ ಯುವ ನಾಯಕನನ್ನು ಕರೆದು ಅವರ ಬೆನ್ನು ಸವರಿ ನನ್ನ ನಂತರ ನೀನೆ ಎಂದು ಹೇಳುವ ಅಗತ್ಯ ಇರಲಿಲ್ಲ. ಅನಗತ್ಯವಾಗಿ ಆಸೆ ಹುಟ್ಟಿಸುವುದು ಎಂದರೆ ಇದೇ. ಅಷ್ಟಕ್ಕೂ ತಾನು ಮುಂದಿನ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದ ಅಭಯಚಂದ್ರ ಜೈನ್ ಅವರು ಮತ್ತೆ ಚುನಾವಣೆಗೆ ನಿಂತಿರುವುದು ನೋಡಿದರೆ ಯುವ ಕಾಂಗ್ರೆಸ್ಸಿಗರ ಮನಸ್ಸಿನಲ್ಲಿ ರೋಶದ ಜ್ವಾಲೆ ಭುಗಿಲೇಳುತ್ತದೆ. ನಮ್ಮ ನಾಯಕನಿಗೆ ಮೂರು ವರ್ಷ ಜಾತ್ರೆಗೆ ಮಕ್ಕಳನ್ನು ತಿರುಗಿಸುವಂತೆ ತಿರುಗಿಸಿ ಕೊನೆಗೆ ಹಳೆ ಬಾವಿಯಲ್ಲಿ ನೂಕಿದ ಬಗ್ಗೆ ಕಾಂಗ್ರೆಸ್ಸಿನ ಯುವ ಘಟಕ ಆಕ್ರೋಶ ವ್ಯಕ್ತಪಡಿಸಿದೆ. ಮೂಲ್ಕಿ, ಮೂಡಬಿದ್ರೆ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಅಷ್ಟೂ ಯುವ ಕಾಂಗ್ರೆಸ್ಸಿಗರು ತಮ್ಮ ಸ್ಥಾನಕ್ಕೆ ರಾಜೀನಾಮೆ ಬಿಸಾಡಿ ತಟಸ್ಥರಾಗಿ ಉಳಿದಿದ್ದಾರೆ. ಮಂಗಳೂರು ನಗರ ಉತ್ತರದಲ್ಲಿ ಎಕೆ ಆಂಟನಿ ಮಾತು ಕೊಟ್ಟು ತಪ್ಪಿದರೆ, ಇಲ್ಲಿ ಅಭಯಚಂದ್ರ ಜೈನ್ ಮಾತು ಕೊಟ್ಟು ತಪ್ಪಿಸಿಕೊಂಡಿದ್ದಾರೆ. ಪ್ರಶಾಂತ ಪೂಜಾರಿ ಕೊಲೆಯಾದಾಗ ಕಾಂಗ್ರೆಸ್ಸನ ವಿರುದ್ಧ ಸಿಡಿದೆದ್ದಿದ್ದ ಯುವಕರನ್ನು ಶಾಂತ ಮಾಡಲು ಮಿಥುನ್ ರೈಯವರನ್ನು ಬಳಸಿಕೊಂಡಿದ್ದ ಅಭಯಚಂದ್ರ ಜೈನ್ ಎಲ್ಲವೂ ಸರಿಯಾಗುವ ಸೂಚನೆ ಸಿಗುತ್ತಿದ್ದಂತೆ ಕೈ ಎತ್ತಿಬಿಟ್ಟಿದ್ದಾರೆ. ಇದು ಮತ್ತೊಂದು ಬಂಟ ಸಮಾಜಕ್ಕೆ ಮಾಡಿದ ಅನ್ಯಾಯ ಎಂದು ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿರುವ ಬಂಟರು ಅಂದುಕೊಂಡಿದ್ದಾರೆ. ಮಿಥುನ್ ರೈ ಕಳೆದ ಮೂರು ವರ್ಷಗಳಿಂದ ಮೂಲ್ಕಿ-ಮೂಡಬಿದ್ರೆ ವ್ಯಾಪ್ತಿಯಲ್ಲಿ ಸ್ವತ: ಒಬ್ಬ ಶಾಸಕನಂತೆ ನಡೆದುಕೊಂಡಿದ್ದರು. ಅವರಿಗೆ ಸ್ವತ: ಡಿಕೆ ಶಿವಕುಮಾರ್ ಅವರ ಕೃಪಾಕಟಾಕ್ಷ ಇತ್ತು. ಇಷ್ಟಾದರೂ ಕೊನೆಯ ಕ್ಷಣದ ತನಕ ಗೌಪ್ಯವನ್ನು ಕಾಯ್ದುಕೊಂಡು ಬಂದ ಕಾಂಗ್ರೆಸ್ ಹೈಕಮಾಂಡ್ ಅಂತಿಮವಾಗಿ ಅಭಯಚಂದ್ರ ಜೈನ್ ಅವರಿಗೆನೆ ಮಣೆ ಹಾಕಿ ಬಿಟ್ಟಿದೆ. ಹಣದ ವಿಷಯ ಬಂದರೆ ಮಿಥುನ್ ರೈ ಅವರಿಂದ ಕಡಿಮೆ ಎಂದರೂ ಮೂರು ಕೋಟಿ ಖಚರ್ು ಮಾಡಿಸಿ ಅಭಯಚಂದ್ರ ಜೈನ್ ತಮ್ಮ ಸೀಟನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಅಲ್ಲಿಗೆ ಮೂಲ್ಕಿ-ಮೂಡಬಿದ್ರೆ ಈ ಬಾರಿ ಯಾವ ರೀತಿಯ ಫಲಿತಾಂಶ ನೀಡುತ್ತದೆ ಎಂದು ಕುತೂಹಲ ಮೂಡಿಸಿದೆ.

ಪುತ್ತೂರಿನಲ್ಲಿ ಮೂಲ ಕಾಂಗ್ರೆಸ್ ನಲ್ಲಿ ಬಂಟರು ಕಾಣಿಸಿಲ್ವ…

ಇನ್ನು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತೊಬ್ಬ ಬಂಟ ನಾಯಕನಿಗೆ ಅನ್ಯಾಯ ಮಾಡಿದೆ. ಮೂಲ ಕಾಂಗ್ರೆಸ್ಸಿಗರಾದ ಕಾವು ಹೇಮನಾಥ ಶೆಟ್ಟಿಯವರು ಕಳೆದ ಬಾರಿಯೇ ಪುತ್ತೂರು ವಿಧಾನಸಭಾದ ಕಾಂಗ್ರೆಸ್ ಅಭ್ಯಥರ್ಿಯಾಗಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ವಿನಯ ಕುಮಾರ್ ಸೊರಕೆಯವರು ತಮ್ಮ ಪ್ರಾಬಲ್ಯವನ್ನು ಉಳಿಸುವ ನಿಟ್ಟಿನಲ್ಲಿ ಶಕುಂತಳಾ ಶೆಟ್ಟಿಯವರನ್ನು ಪಕ್ಷಕ್ಕೆ ಕರೆತಂದಿದ್ದರು. ಶಕುಂತಳಾ ಶೆಟ್ಟಿ ತಮ್ಮ ವೈಯಕ್ತಿಕ ಮತ ಮತ್ತು ಕಾಂಗ್ರೆಸ್ ಮತಗಳು ಸೇರಿ ಗೆಲುವಿನ ದಡ ಸೇರಿದ್ದರು. ಆದರೆ ಮೂಲ ಬಿಜೆಪಿಯವರಾದ ಶಕುಂತಳಾ ಶೆಟ್ಟಿಯವರಿಗೆ ಕಾಂಗ್ರೆಸ್ ಸಂಸ್ಕೃತಿ ಆವತ್ತಿನಿಂದ ಇವತ್ತಿನ ತನಕ ಹಿಡಿಸಲೇ ಇಲ್ಲ. ದನಗಳ್ಳರನ್ನು ಠಾಣೆಯಿಂದ ಬಿಡಿಸಲು ಅವರು ಫೋನ್ ಮಾಡಲು ಹಿಂಜರಿದದ್ದು ಅವರನ್ನು ಕಾಂಗ್ರೆಸ್ ಒಂದು ಹಂತದಲ್ಲಿ ದೂರ ಮಾಡುತ್ತಾ ಬಂತು. ಅದೇ ಸಮಯಕ್ಕೆ ಕಾವು ಹೇಮನಾಥ ಶೆಟ್ಟಿಯವರಿಗೆ ಹಿಂದಿನಿಂದ ಬೆಂಬಲ ಕೊಡುತ್ತಾ ಬಂದ ಕಾಂಗ್ರೆಸ್ ರಾಜ್ಯ ಮುಖಂಡರು ಶಕುಂತಳಾ ಶೆಟ್ಟಿಯವರು ಚುನಾವಣೆ ಹತ್ತಿರ ಬರುವಾಗ ಮತ್ತೆ ಬಿಜೆಪಿಗೆ ಹಾರುವ ಚಾನ್ಸ್ ಇದೆ. ಅವರನ್ನು ನಂಬುವುದು ಕಷ್ಟ. ಯಾವುದಕ್ಕೂ ನೀವು ತಯಾರಾಗಿರಿ ಎಂದು ಸೂಚನೆ ಕೊಟ್ಟಿದ್ದರು. ಆದರೆ ಶಕುಂತಳಾ ಶೆಟ್ಟಿಯವರಿಗೆ ಹಾರುವುದಕ್ಕೆ ಮಾಧ್ಯಮದವರು ಸಮಯ ಕೊಡದೆ ಸತಾಯಿಸಿಬಿಟ್ಟರು. ಶಕುಂತಳಾ ಶೆಟ್ಟಿ ವಲಸೆ ಪಕ್ಷದಲ್ಲಿಯೇ ಉಳಿದರು. ಕಾವು ಹೇಮನಾಥ ಶೆಟ್ಟಿ ಎನ್ನುವ ಮತ್ತೊಬ್ಬ ಬಂಟ ನಾಯಕರಿಗೆ ಇದು ಪಕ್ಷಕ್ಕೆ ನಿಷ್ಟರಾಗಿ ಇದ್ದದ್ದಕ್ಕೆ ಸಿಕ್ಕಿದ ಬಳುವಳಿ!!

  • Share On Facebook
  • Tweet It


- Advertisement -
congressMithun RaiVijaykumar Shetty


Trending Now
ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
Hanumantha Kamath March 30, 2023
ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
Hanumantha Kamath March 29, 2023
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಹಿಂದೆ ಕಾಂಗ್ರೆಸ್ ಮಾಡಿದ್ದ ತಪ್ಪುಗಳನ್ನು ಪರಿಹರಿಸಲು ಖಾದರ್ ಮನಸ್ಸು ಮಾಡ್ತಾರಾ?
August 9, 2018
ಯುಟಿ ಖಾದರ್ ಅಥವಾ ಬಿಎಂ ಫಾರೂಕ್ ಯಾರಾಗಲಿದ್ದಾರೆ ದಕ್ಷಿಣ ಕನ್ನಡದ ಉಸ್ತುವಾರಿ!!
May 31, 2018
Leave A Reply

  • Recent Posts

    • ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
  • Popular Posts

    • 1
      ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • 2
      ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • 3
      ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • 4
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • 5
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search