ಬಾಲಕಿಯ ವೀಸಾ ಸಮಸ್ಯೆ ಬಗೆಹರಿಸುವ ಭರವಸೆ! ಇದ್ದರೆ ಇರಬೇಕು ಇಂಥ ವಿದೇಶಾಂಗ ಸಚಿವೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹೇಗೆ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದ್ದಾರೋ, ಅದೇ ರೀತಿ ಅವರ ಸಂಪುಟದ ಸಚಿವರು ಸಹ ಹಾಗೆಯೇ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಈ ನಾಲ್ಕು ವರ್ಷಗಳಲ್ಲಿ ಹಲವು ಬಾರಿ ಸಾಬೀತಾಗಿದೆ. ಇದಕ್ಕೆ ಸ್ಪಷ್ಟ ನಿದರ್ಶನ ಎಂದರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್!
ಹೌದು, ಸುಷ್ಮಾ ಸ್ವರಾಜ್ ವಿದೇಶಾಂಗ ಖಾತೆ ವಹಿಸಿಕೊಂಡ ಬಳಿಕ ವಿಶ್ವದ ಯಾವುದೇ ಮೂಲೆಯಲ್ಲಿ ಭಾರತೀಯರಿಗೆ ತೊಂದರೆಯಾದರೆ, ರಾಜತಾಂತ್ರಿಕವಾಗಿ ಸಮಸ್ಯೆ ಎದುರಾದರೆ ತಕ್ಷಣ ಧಾವಿಸುತ್ತಾರೆ. ಹೀಗೆ ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ನೂರಾರು ಜನರನ್ನು ರಕ್ಷಿಸಿದ್ದಾರೆ.
ಇಂತಹ ಸುಷ್ಮಾ ಸ್ವರಾಜ್ ಈಗ ಭಾರತದಲ್ಲಿ 14 ವರ್ಷದ ಬಾಲಕಿಗೆ ಲಂಡನ್ ತೆರಳಲು ವೀಸಾ ಸಮಸ್ಯೆ ಎದುರಾಗಿದ್ದು,ಈ ಸಮಸ್ಯೆ ನಿವಾರಿಸುವುದಾಗಿ ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದಾರೆ.
ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ನೆಲೆಸಿರುವ ಅರ್ಪಿತಾ ತಿವಾರಿ ಲಂಡನ್ ನಲ್ಲಿ ನಡೆಯುವ ಗ್ಲೋಬಲ್ ಕಾನ್ಫರೆನ್ಸ್ ಗೆ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದು, ಮೇ 3ರಂದು ವಿಮಾನ ಬುಕ್ ಮಾಡಿದ್ದರು. ಆದರೆ ವೀಸಾ ಸಿಗದ ಕಾರಣ ತೊಂದರೆಯಾಗಿದೆ. ಈ ಕುರಿತು ಬಾಲಕಿ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದರು.
ಇದರಿಂದ ಎಚ್ಚೆತ್ತುಕೊಂಡ ಸುಷ್ಮಾ ಸ್ವರಾಜ್, ವಿದೇಶಾಂಗ ಸಚಿವಾಲಯ ಹಾಗೂ ಅಧಿಕಾರಿಗಳು ನಿಮ್ಮ ಜತೆ ಸಂಪರ್ಕದಲ್ಲಿರುತ್ತಾರೆ. ಕೂಡಲೇ ನಿಮ್ಮ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಯಾವುದೇ ಒಂದು ಸರ್ಕಾರ ಸಾಮಾನ್ಯ ಜನರ ಜತೆ ನಿಂತರೆ, ಅವರ ಕಷ್ಟ ಸುಖಕ್ಕೆ ಸ್ಪಂದಿಸಿದರೆ ಆ ರಾಜ್ಯ ರಾಮರಾಜ್ಯ ಆಗುತ್ತದೆ ಎಂಬ ಮಾತಿದೆ. ಅದರಂತೆ ಕೇಂದ್ರ ಸರ್ಕಾರ ಆಡಳಿತ ನಡೆಸುತ್ತಿರುವುದು ಸಂತಸದ ಸಂಗತಿಯಾಗಿದೆ.
Leave A Reply