• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕೇಂದ್ರದಲ್ಲಿ ಕುಳಿತು ರಾಜ್ಯದ ಅಭಿವೃದ್ಧಿ ಮಾಡಲು ಅವಕಾಶ ಕೊಡಿ- ಮೋದಿ

Hanumantha Kamath Posted On May 5, 2018


  • Share On Facebook
  • Tweet It

ನನಗೆ ಕೇಂದ್ರದಿಂದ ನಿಮಗಾಗಿ ಸೇವೆ ಸಲ್ಲಿಸುವ ಅವಕಾಶ ಸಿಗಬೇಕಾದರೆ ಕರ್ನಾಟಕದಲ್ಲಿ ನನ್ನನ್ನು ಗೆಲ್ಲಿಸಿ ಕೊಡಿ. ಈ ಒಂದು ವಾಕ್ಯದಲ್ಲಿ ಇಡೀ ಕರ್ನಾಟಕದ ವಾಸ್ತವಾಂಶ ಅಡಗಿದೆ. ಮೋದಿಯವರು ತಮ್ಮ ನಲ್ವತ್ತೈದು ನಿಮಿಷಗಳ ಮಾತಿನಲ್ಲಿ ಹಲವು ವಿಚಾರಗಳನ್ನು ಹೇಳಿದ್ದಾರೆ. ಅದರಲ್ಲಿ ಒಂದೇ ವಾಕ್ಯದಲ್ಲಿ ನೂರು ಅರ್ಥ ಕೊಡಬಹುದಾಗಿರುವ ವಾಕ್ಯ ಇದ್ದರೆ ಅದು ಈ ಮೇಲಿನದು. ಹಾಗಂತ ಅವರು ಸುಮ್ಮನೆ ರಾಜಕೀಯ ಕಾರಣಕ್ಕೆ ಈ ವಾಕ್ಯ ಹೇಳಿಲ್ಲ. ಮೊದಲನೇಯದಾಗಿ ರಾಷ್ಟ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಇದ್ದರೆ ಅದರ ಲಾಭ ಹೇಗೆ ಆಗುತ್ತದೆ ಎಂದು ಅವರು ವಿವರಿಸಿದ್ದಾರೆ.
” ನಾನು ಕರ್ನಾಟಕದ ಬಡವರಿಗೆ ಮನೆ ಕಟ್ಟಿಸಿಕೊಡಬೇಕು ಎಂದು ದೊಡ್ಡ ಕನಸು ಇಟ್ಟುಕೊಂಡಿದ್ದೆ. ಅದಕ್ಕಾಗಿ 900 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಸುಮಾರು ಒಂದು ಲಕ್ಷದ ಐವತ್ತೆಂಟು ಸಾವಿರದಷ್ಟು ಮನೆಗಳ ನಿರ್ಮಾಣವಾಗಬೇಕಿತ್ತು. ಕೇಂದ್ರದಿಂದ ಬರುವ ಹಣದಲ್ಲಿ ಪ್ರತಿ ಪೈಸೆಗೂ ನಾನು ಲೆಕ್ಕ ಕೇಳುವವನು. ನನ್ನ ಜನರ ತೆರಿಗೆ ಹಣವನ್ನು ದೋಚಲು ನಾನು ಬಿಡುವುದಿಲ್ಲ. ಕೇಂದ್ರದಿಂದ ಬಂದ ಹಣದಲ್ಲಿ ಏನೂ ಹೊಡೆಯಲು ಆಗುವುದಿಲ್ಲ ಎಂದು ಗೊತ್ತಿರುವುದರಿಂದ ಇಲ್ಲಿನ ರಾಜ್ಯ ಸರಕಾರಕ್ಕೆ ಬಡವರಿಗೆ ಮನೆ ಕಟ್ಟಿಕೊಡಲು ಆಸಕ್ತಿಯೇ ಇರಲಿಲ್ಲ. ಆದ್ದರಿಂದ 1,58,000 ಮನೆ ಕೊಡಬೇಕಿದ್ದ ಕಾಂಗ್ರೆಸ್ ಸರಕಾರ ಮೂವತ್ತು ಸಾವಿರ ಮನೆಗಳನ್ನು ಕಟ್ಟಿಕೊಡುವುದರಲ್ಲಿ ಕೆಲಸ ನಿಲ್ಲಿಸಿಬಿಟ್ಟಿದೆ. ಅದೇ ನಮ್ಮದೇ ಸರಕಾರ ಇಲ್ಲಿಯೂ ಇದ್ದರೆ ನಾವು ಅಷ್ಟು ಮನೆಗಳನ್ನು ಕಟ್ಟಿಕೊಡುತ್ತಿದ್ದೆವು” ಎಂದು ಮೋದಿ ಹೇಳಿದ್ರು. ಇದು ಕೇವಲ ಒಂದು ಉದಾಹರಣೆ. ಬಹುಶ: ಇಂತಹ ಹಲವು ಯೋಜನೆಗಳನ್ನು ರಾಜ್ಯ ಸರಕಾರ ಹಾಗೆ ಅರ್ಧಕ್ಕೆ ನಿಲ್ಲಿಸಿರುವುದಕ್ಕೆ ಕಾರಣ ಏನು ಎಂದು ನಿಮಗೆ ಅರ್ಥವಾಗಿರಬಹುದು.
ಇನ್ನು ಕರಾವಳಿ ತೀರದಲ್ಲಿ ಸುಮಾರು ಒಂದು ಸಾವಿರ ಕೋಟಿ ಅನುದಾನದಲ್ಲಿ ಇಪ್ಪತೈದು ಪ್ರಾಜೆಕ್ಟ್ ಗಳನ್ನು ಕೈಗೆ ಎತ್ತಿಕೊಂಡು ಬಂದರುಗಳ ಅಭಿವೃದ್ಧಿ ಮಾಡಲಿದ್ದೇವೆ ಮತ್ತು ಆ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿ ನಡೆಯುತ್ತಿದೆ ಎಂದರು. ಇನ್ನು ಕರಾವಳಿ ತೀರದಲ್ಲಿ ಹೆದ್ದಾರಿಗಳನ್ನು ನಿರ್ಮಿಸುವ ಮೂಲಕ ವ್ಯಾಪಾರ ಚಟುವಟಿಕೆಗಳನ್ನು ಅಭಿವೃದ್ಧಿ ಮಾಡಲು ಯೋಚಿಸುತ್ತಿದ್ದೇವೆ ಮತ್ತು ಬಿಜೆಪಿ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದರೆ ಅದು ಅನುಷ್ಟಾನಕ್ಕೆ ಬರಲು ಸಾಧ್ಯವಾಗುತ್ತದೆ ಎಂದರು. ಅವರು ಮಂಗಳಾ ಕಾರ್ನಿಶ್ ಯೋಜನೆ ಎಂದು ಹೆಸರೇಳದೆ ಆ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ. ಇನ್ನು ನಾಲ್ಕು ಕೋಟಿ ಮಹಿಳೆಯರಿಗೆ ಉಚಿತ ಉಜ್ವಲಾ ಯೋಜನೆಯನ್ನು ಕೊಡುವ ಮೂಲಕ ಹೊಗೆಯಲ್ಲಿ ಅಡುಗೆ ಮಾಡಿ ಆರೋಗ್ಯ ಹದಗೆಡುವ ಅವರ ಸಮಸ್ಯೆಯನ್ನು ಪರಿಹರಿಸಿದ್ದೇವೆ ಎಂದು ಮೋದಿ ಹೇಳಿದರು.
ಹಿಂದೆ ಹುಡುಗಿಯರು ಮನೆಗೆ ತಡವಾಗಿ ಬಂದರೆ ಮನೆಯವರೆಲ್ಲರೂ ಎಲ್ಲಿಗೆ ಹೋಗಿದ್ದಿ ಎಂದು ಕೇಳುತ್ತಿದ್ದರು. ಆಕೆ ಫೋನಿನಲ್ಲಿ ಮಾತನಾಡುತ್ತಿದ್ದರೆ ಯಾರೊಂದಿಗೆ ಎಂದು ಕೇಳಲಾಗುತ್ತಿತ್ತು. ಆದರೆ ಕೆಂಪುಕೋಟೆಯಲ್ಲಿ ನಿಂತು ತಾವು ಪರಿಸ್ಥಿತಿ ಬದಲಾಯಿಸುತ್ತೇವೆ ಎಂದು ಮಾತು ಕೊಟ್ಟಿದ್ದೆವು. ಹಾಗೆ ಈಗ ಯುವಕ ಲೇಟ್ ಆಗಿ ಮನೆಗೆ ಬಂದರೆ ಯಾಕೆ ಲೇಟು, ಎಲ್ಲಿಗೆ ಹೋಗಿದ್ದೆ, ಯಾರು ಗೆಳೆಯರು ಎಂದು ಕೇಳುವ ಪರಿಸ್ಥಿತಿ ಇದೆ. ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡುವವರಿಗೆ ಗಲ್ಲುಶಿಕ್ಷೆ ಕೊಡುವ ಕಾನೂನು ತಂದದ್ದು ನಮ್ಮ ಸರಕಾರ ಎಂದು ಹೇಳಿದರು.
ಹಿಂದೆ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಕೇಂದ್ರದಿಂದ ಒಂದು ರೂಪಾಯಿ ರಾಜ್ಯಕ್ಕೆ ಕಳುಹಿಸಿದರೆ ಅದು ಗ್ರಾಮಕ್ಕೆ ತಲುಪುವಾಗ 15 ಪೈಸೆ ಉಳಿಯುತ್ತದೆ ಎಂದಿದ್ದರು. ಆಗ ಕೇಂದ್ರದಿಂದ ಗ್ರಾಮದ ತನಕ ಎಲ್ಲಿಯೂ ಬೇರೆ ಪಕ್ಷಗಳ ಸುಳಿವೇ ಇರಲಿಲ್ಲ. ಇದ್ದದ್ದು ಬರೀ ಕಾಂಗ್ರೆಸ್. ಒಂದು ರೂಪಾಯಿಯಲ್ಲಿ 85 ಪೈಸೆ ಕಾಂಗ್ರೆಸ್ಸ್ ನಾಯಕರ ಜೇಬಿಗೆ ಹೋಗುತ್ತಿತ್ತು. ಆದರೆ ನಮ್ಮ ಸರಕಾರ ಬಂದ ಬಳಿಕ ನೇರವಾಗಿ ಹಣ ಫಲಾನುಭವಿಗಳ ಖಾತೆಗೆ ವರ್ಗಾಯಿಸುವ ಕೆಲಸ ಮಾಡಿದ್ದೇವೆ. ಹಣ ಪೂರ್ಣವಾಗಿ ಯಾರಿಗೆ ಸಿಗಬೇಕಿತ್ತೋ ಅವರಿಗೆ ಹೋಗುತ್ತದೆ. ವಿಧವಾ ಪಿಂಚಣಿ, ವೃದ್ಧಾಪ್ಯದ ಪಿಂಚಣಿ, ಎಸ್ ಸಿ/ಎಸ್ ಟಿ ಸ್ಕೀಮ್ ಸಹಿತ ಎಲ್ಲಾ ಯೋಜನೆಗಳ ಹಣ ನೇರವಾಗಿ ಬ್ಯಾಂಕ್ ಖಾತೆಗಳಿಗೆ ಹೋಗುತ್ತದೆ. ಹಿಂದೆ ಇಂದಿರಾ ಗಾಂಧಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿರಬಹುದು. ಆದರೆ ಬಡವರಿಗೆ ಬ್ಯಾಂಕುಗಳಿಗೆ ಪ್ರವೇಶ ಕಷ್ಟಸಾಧ್ಯ ಇತ್ತು. ನಾವು ಜನಧನ್ ಯೋಜನೆಯ ಮೂಲಕ 30 ಕೋಟಿ ಬಡವರ ಬ್ಯಾಂಕ್ ಖಾತೆಗಳನ್ನು ತೆರೆದೆವು. ಇನ್ನು ಮುಸ್ಲಿಮ್ ಮಹಿಳೆಯರಿಗೆ ತ್ರಿವಳಿ ತಲಾಕ್ ಎನ್ನುವ ಪೀಡನೆಯ ಮೂಲಕ ಹಿಂಸಿಸಲಾಗುತ್ತಿತ್ತು. ಆದರೆ ನಾವು ತ್ರಿವಳಿ ತಲಾಖ್ ನಿಷೇಧಿಸುವ ಕೆಲಸ ಮಾಡಿದೆವು. ಲೋಕಸಭೆಯಲ್ಲಿ ಅದು ಪಾಸ್ ಆದರೂ ರಾಜ್ಯಸಭೆಯಲ್ಲಿ ನಮ್ಮ ವಿರೋಧಿಗಳು ಒಟ್ಟಾಗಿ ಅದನ್ನು ತಡೆಹಿಡಿದರು. ಈ ಮೂಲಕ ತಾವು ಮಹಿಳಾ ವಿರೋಧಿ ಎಂದು ಸಾಬೀತು ಪಡಿಸಿದ್ದಾರೆ. ಮುಸ್ಲಿಂ ಮಹಿಳೆಯರ ನೋವನ್ನು ಅರ್ಥ ಮಾಡಿದ್ದು ನಮ್ಮ ಬಿಜೆಪಿ ಸರಕಾರ ಎಂದು ಹೇಳಿದರು.
ಇನ್ನು ಕರ್ನಾಟಕದಲ್ಲಿ ಬೇರೆಲ್ಲ ಮಾಫಿಯಾಗಳೊಂದಿಗೆ ಮರಳು ಮಾಫಿಯಾ ಸೇರಿಕೊಂಡು ಬಡವರು ಮತ್ತು ಮಧ್ಯಮ ವರ್ಗದವರು ಮನೆ ಕಟ್ಟಲಾಗದಂತಹ ಪರಿಸ್ಥಿತಿ ಇದೆ. ಅದರೊಂದಿಗೆ ಕಾನೂನು ಸುವ್ಯವಸ್ಥೆ ಹಾಳಾಗಿ ಕೊಲೆಗಡುಕರು ಹೊರಗೆ ಸುತ್ತಾಡುತ್ತಿದ್ದಾರೆ. ನಮ್ಮ ಸರಕಾರ ಬಂದರೆ 24 ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಲಾಗುವುದು ಎಂದರು. ವಿರೇಂದ್ರ ಪಾಟೀಲ್, ದೇವರಾಜ್ ಅರಸ್ ತರಹದವರನ್ನು ಕಾಂಗ್ರೆಸ್ ನಡೆಸಿಕೊಂಡದ್ದನ್ನು ನೀವು ನೋಡಿದ್ದಿರಿ. ಕಾಂಗ್ರೆಸ್ ವಿರುದ್ಧ ಧ್ವನಿ ಎತ್ತುವವರಿಗೆ ಕಾಂಗ್ರೆಸ್ಸಿಗರು ಯಾವ ರೀತಿಯಲ್ಲಿ ದೌರ್ಜನ್ಯ ಮಾಡುತ್ತಾರೆ ಎನ್ನುವುದಕ್ಕೆ ಇತಿಹಾಸದಲ್ಲಿ ಅನೇಕ ಉದಾಹರಣೆಗಳಿವೆ ಎಂದರು.
ಅಡಿಕೆ ಉತ್ಪಾದಕರಿಗೆ, ವ್ಯಾಪಾರಿಗಳಿಗೆ ಅತಂತ್ರ ಸ್ಥಿತಿ ನಿರ್ಮಾಣ ಆಗುವುದಕ್ಕೆ ಕಾಂಗ್ರೆಸ್ ಸುಪ್ರಿಂಕೋರ್ಟ್ ನಲ್ಲಿ ಅಡಿಕೆ ಹಾನಿಕಾರಕ ಎಂದು ವರದಿ ಕೊಟ್ಟಿದ್ದೇ ಕಾರಣ. ಆದರೆ ನಮ್ಮ ಸರಕಾರ ಅಡಿಕೆ ಬೆಳೆಗಾರರ ಬಗ್ಗೆ ಕಾಳಜಿ ವಹಿಸಿದೆ ಎಂದು ಹೇಳಿದರು. ಕರ್ನಾಟಕದ ಕರಣ್ ಆಚಾರ್ಯ ಹನುಮಾನ್ ಚಿತ್ರವನ್ನು ತಮ್ಮ ಕಲೆಯ ಮೂಲಕ ಮೂಡಿಸಿರುವುದು ಕಾಂಗ್ರೆಸ್ಸಿಗರ ಕೆಂಗೆಣ್ಣಿಗೆ ಬಿದ್ದಿದ್ದೆ. ಹಿಂದೂ ದೇವರನ್ನು ಚಿತ್ರಿಸುವುದಕ್ಕೂ ಕಾಂಗ್ರೆಸ್ಸಿಗರ ವಿರೋಧ ನೋಡಿದರೆ ನಾವು ಯಾವ ದೇಶದಲ್ಲಿವೆ ಎನ್ನುವ ಅನುಮಾನ ಮೂಡುತ್ತದೆ ಎಂದು ಹೇಳಿದರು. ಹೀಗೆ ಹಲವು ವಿಷಯಗಳ ಬಗ್ಗೆ ಮೋದಿ ಮಾತನಾಡಿದ್ದಾರೆ. ಕೋಟಿ ಚೆನ್ನಯ್ಯ, ರಾಣಿ ಅಬ್ಬಕ್ಕರ ಸಾಧನೆಯನ್ನು, ಹಿರಿಮೆಯನ್ನು ಮೋದಿ ಪ್ರಾರಂಭದಲ್ಲಿ ನೆನಪಿಸಿಕೊಂಡರು..

  • Share On Facebook
  • Tweet It


- Advertisement -
Modi Managaluru


Trending Now
ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
Hanumantha Kamath March 29, 2023
ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
Hanumantha Kamath March 27, 2023
Leave A Reply

  • Recent Posts

    • ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
  • Popular Posts

    • 1
      ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • 2
      ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • 3
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • 4
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • 5
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search