ಹಿಂದೂಗಳನ್ನು ನಿರ್ನಾಮ ಮಾಡುತ್ತೇನೆ ಎಂದವರೇ ಕೇಸರಿ ಪೇಟ ಧರಿಸುತ್ತಾರೆ ಎಂದರೆ ಇವರ ನಾಟಕ ಎಂಥಾದ್ದಿರಬೇಕು?
ಕರ್ನಾಟಕ ಸೇರಿ ಇತ್ತೀಚಿನ ಕೆಲವು ರಾಜ್ಯಗಳ ಚುನಾವಣೆಯಲ್ಲಿ ಹಿಂದುತ್ವದ ಹೆಸರಿನಲ್ಲಿ ನಡೆಯುತ್ತಿರುವ ನಾಟಕಗಳಿಗೆ ಇಡೀ ದೇಶವೇ ಸಾಕ್ಷಿಯಾಗಿದೆ. ರಾಮನೇ ಇಲ್ಲ ಎಂದು ಪ್ರತಿಪಾದಿಸುತ್ತಿದ್ದ, ಓಲೈಕೆಯ ರಾಜಕಾರಣ ಮಾಡುತ್ತಿದ್ದ ಕಾಂಗ್ರೆಸ್ಸಿನ ಅಧ್ಯಕ್ಷ ರಾಹುಲ್ ಗಾಂಧಿಯೇ ದೇವಾಲಯ, ಮಠಗಳಿಗೆ ತೆರಳುತ್ತಿದ್ದಾರೆ. ದೇವಾಲಯಕ್ಕೆ ಮಾಂಸ ತಿಂದು ಹೋದ ಸಿದ್ದರಾಮಯ್ಯ ನಾನೂ ಹಿಂದೂ ಎನ್ನುತ್ತಿದ್ದಾರೆ. ಅಷ್ಟರಮಟ್ಟಿಗೆ ಚುನಾವಣೆಯಲ್ಲಿ ಹಿಂದುತ್ವದ ಹೆಸರಿನಲ್ಲಿ ಮತಗಳನ್ನು ಒಡೆಯುವ ಹುನ್ನಾರ ಇವರದ್ದು.
ಇದೆಲ್ಲದರ ನಡುವೆಯೇ ಮತ್ತೊಂದು ಅಚ್ಚರಿಯ ಘಟನೆಯೊಂದು ಗಮನ ಸೆಳೆದಿದ್ದು, ಹಿಂದೂಗಳನ್ನು ನಿರ್ನಾಮ ಮಾಡುತ್ತೇವೆ ಎಂದು ಭಾಷಣ ಬಿಗಿದವರೇ ಇಂದು ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯಕ್ಕೆ ಆಗಮಿಸಿ ಕೇಸರಿ ಪೇಟ ಧರಿಸುವ ಮೂಲಕ ಹಿಂದೂಗಳನ್ನು ಸೆಳೆಯಲು ಮುಂದಾಗಿದ್ದಾರೆ.
ಹೌದು, ಇದೇ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ತಮ್ಮ ಅಕ್ಬರುದ್ದೀನ್ ಓವೈಸಿ ಹೈದರಾಬಾದಿನಲ್ಲಿ ಮುಸ್ಲಿಮರೊಂದಿಗೆ ನಡೆಸಿದ ಸಭೆ ವೇಳೆ ನಮಗೆ ಸ್ವಲ್ಪ ಸಮಯ ಕೊಟ್ಟರೂ, ದೇಶದಲ್ಲಿ ಬಹುಸಂಖ್ಯಾತರಾಗಿರುವ ಹಿಂದೂಗಳನ್ನು ನಿರ್ನಾಮ ಮಾಡುತ್ತೇವೆ ಎಂದಿದ್ದರು. ಇವರ ಅಣ್ಣ ಅಸಾದುದ್ದೀನ್ ಓವೈಸಿ ಸಮರ್ಥಿಸಿಕೊಂಡಿದ್ದರು.
ಅಷ್ಟೇ ಅಲ್ಲ, ಈ ಇಬ್ಬರು ಸಹೋದರರು ನಾವು ಭಾರತ್ ಮಾತಾ ಕೀ ಜೈ ಎನ್ನುವುದಿಲ್ಲ, ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಮೊಳಗಿದರೆ ಎದ್ದು ನಿಲ್ಲುವುದಿಲ್ಲ, ತ್ರಿವಳಿ ತಲಾಖ್ ನಿಷೇಧಿಸುವ ಕೇಂದ್ರ ಸರ್ಕಾರದ ನಿರ್ಧಾರ ಸರಿಯಿಲ್ಲ, ದೇಶದಲ್ಲಿ ಹಿಂದೂಗಳ ದಬ್ಬಾಳಿಕೆ, ಗೋರಕ್ಷಣೆ ಹೆಸರಿನಲ್ಲಿ ಹಿಂದೂಗಳ ಹಿಂಸೆ ತಡೆಯುವುದಕ್ಕಾಗುವುದಿಲ್ಲ ಎಂದು ಹಿಂದೂಗಳ ವಿರುದ್ಧ ಮಾತನಾಡುತ್ತಿದ್ದರು. ತಾವು ಹಿಂದೂಗಳನ್ನು ವಿರೋಧಿಸುವ ಜತೆಗೆ ಜನರೂ ಹಿಂದೂಗಳನ್ನು ವಿರೋಧಿಸುವ ಹಾಗೆ ಭಾಷಣ ಮಾಡುತ್ತಿದ್ದರು.
ಆದರೆ ಇಂತಹ ಅಸಾದುದ್ದೀನ್ ಓವೈಸಿ ಈಗ ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಲ್ಲದೆ, ಹಿಂದುತ್ವದ ಸಂಕೇತವಾದ ಕೇಸರಿ ಪೇಟವನ್ನು ಧರಿಸಿದ್ದಾರೆ. ಆ ಮೂಲಕ ಹಿಂದೂಗಳ ಮತ ಸೆಳೆಯಲು, ತಾವು ಹಿಂದೂಗಳ ಪರ ಎಂಬಂತೆ ನಾಟಕವಾಡುತ್ತಿದ್ದಾರೆ. ಅಲ್ಲ ಹಿಂದೂಗಳನ್ನು ನಿರ್ನಾಮ ಮಾಡುವ ಇವರು ಕೇಸರಿ ಪೇಟ ಧರಿಸಿದರೆ ಹಿಂದೂಗಳನ್ನು ಬೆಂಬಲಿಸಬೇಕೆ?
ಖಂಡಿತ ಇಲ್ಲ. ಹಿಂದೂಗಳು ಎಂದರೆ ಕೀಳಾಗಿ ಕಾಣುವ ಓವೈಸಿ, ರಾಮನೇ ಇಲ್ಲ ಎನ್ನುವ ಕಾಂಗ್ರೆಸ್ಸಿಗರು, ಹಿಂದೂ ದೇವತೆಗಳನ್ನು ಕೆಟ್ಟದಾಗಿ ಚಿತ್ರಿಸಿದರೂ ಅದು ಕಲಾವಿದನ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಎಂ.ಎಫ್.ಹುಸೇನ್ ಬೆಂಬಲಿಸುವ ಕಾಂಗ್ರೆಸ್ಸಿಗರು ಚುನಾವಣೆ ವೇಳೆಯಲ್ಲಿ ಹಿಂದೂಗಳಂತೆ ಬಟ್ಟೆ ಧರಿಸಿದ ಮಾತ್ರಕ್ಕೆ, ದೇವಾಲಯಕ್ಕೆ ತೆರಳಿದ ಮಾತ್ರಕ್ಕೆ ಯಾವುದೇ ಹಿಂದೂಗಳು ಅವರನ್ನು ಬೆಂಬಲಿಸಬಾರದು. ನಕಲಿ ಹಿಂದುತ್ವವನ್ನು ನಂಬಬಾರದು.
Leave A Reply