ಮೋದಿ ವಿರುದ್ಧ ಅಭಿಯಾನ ಆರಂಭಿಸಿದ್ದ ಚರ್ಚ್ ಮುಖ್ಯಸ್ಥರಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ಕೊಟ್ಟ ಅಮಿತ್ ಶಾ!
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇದುವರೆಗೆ ಪ್ರತಿಪಕ್ಷಗಳು ಮಾತ್ರ ಇದ್ದವು ಎಂದೇ ಭಾವಿಸಿದ್ದೆವು. ಆದರೆ ಭಾರತದ ಹಿಂದೂಗಳನ್ನು ಮತಾಂತರ ಮಾಡಲೆಂದೇ ನಿರ್ಮಿಸಿರುವ ಚರ್ಚ್ ಗಳೂ ಸಹ ಮೋದಿಯವರನ್ನು ವಿರೋಧಿಸುತ್ತವೆ ಎಂಬುದು ಇತ್ತೀಚೆಗೆ ದೆಹಲಿ ಚರ್ಚ್ ಒಂದು ಮೋದಿ ವಿರುದ್ಧ 2019ರ ಚುನಾವಣೆಯಲ್ಲಿ ಕ್ಯಾಂಪೇನ್ ಮಾಡಬೇಕು ಎಂದು ಪತ್ರದ ಮೂಲಕ ಕರೆ ಕೊಟ್ಟಿದ್ದೇ ಸಾಕ್ಷಿಯಾಗಿದೆ.
ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ ದೆಹಲಿಯ ಚರ್ಚ್ ಮುಖ್ಯಸ್ಥರಿಗೆ ಸರಿಯಾಗಿಯೇ ಛಾಟಿಯೇಟು ನೀಡಿದ್ದಾರೆ.
ಯಾವುದೇ ಧರ್ಮ ಹಾಗೂ ಧರ್ಮದ ಪ್ರಚಾರಕರು ಅಥವಾ ಮುಖ್ಯಸ್ಥರು ರಾಜಕೀಯದಿಂದ ದೂರ ಇರಬೇಕು. ಆದರೆ ದೆಹಲಿಯ ಚರ್ಚ್ ನ ಆರ್ಚ್ ಬಿಷಪ್ ಕೇಂದ್ರ ಸರ್ಕಾರದ ವಿರುದ್ದ ಹೀಗೆ ಅಭಿಯಾನ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಛಾಟಿ ಬೀಸಿದ್ದಾರೆ.
ನಾವು ದೇಶದ ಎಲ್ಲ ಸಮುದಾಯಗಳನ್ನು, ಜಾತಿ-ಜನಾಂಗದವರನ್ನು ಒಂದೇ ರೀತಿಯಾಗಿ ಕಾಣುತ್ತೇವೆ ಹಾಗೂ ಗೌರ ಭಾವನೆಯನ್ನು ಹೊಂದಿದ್ದೇವೆ. ಆದರೆ ಯಾರೂ ಧರ್ಮದ ಆಧಾರದ ಮೇಲೆ ರಾಜಕೀಯ ಪಕ್ಷವನ್ನು ಬೆಂಬಲಿಸುವುದಾಗಲಿ, ಅವರ ಪರ ವಹಿಸಕೊಂಡು ಮಾತನಾಡುವುದಾಗಲಿ ಮಾಡಬಾರದು. ನಾವು ಇದರ ವಿರುದ್ಧ ಇದ್ದೇವೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಕ್ರೈಸ್ತ ಧರ್ಮೀಯರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಿದ್ದಾರೆ. ಎಲ್ಲ ಧರ್ಮದವರನ್ನು ಮೋದಿ ಇಷ್ಟಪಡುತ್ತಾರೆ. ಆದರೆ ಯಾವ ದೃಷ್ಟಿಯಿಂದ ಚರ್ಚ್ ಮುಖ್ಯಸ್ಥರು ಹೀಗೆ ಪ್ರಕಟಣೆ ಹೊರಡಿಸಿದ್ದಾರೋ ಗೊತ್ತಿಲ್ಲ. ಒಂದು ಧರ್ಮದ ಮುಖಂಡರು ಹೀಗೆ ರಾಜಕೀಯದಲ್ಲಿ ಮೂಗು ತೂರಿಸುವುದು ಸರಿಯಲ್ಲ ಎಂದು ಅಮಿತ್ ಶಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
Leave A Reply